Get Updates
Get notified of breaking news, exclusive insights, and must-see stories!

Adani Power: ಅದಾನಿ ಪವರ್ ಲಿಮಿಟೆಡ್ ಹೊಸ ಮೈಲಿಗಲ್ಲು, ಮತ್ತೊಂದು ಯೋಜನೆ ಸಕ್ಸಸ್!

ಭಾರತೀಯ ಉದ್ಯಮ ಕ್ಷೇತ್ರದಲ್ಲಿ ಅದಾನಿ ಸಮೂಹ ಸಂಸ್ಥೆಗಳು ಸಾಲು ಸಾಲು ಸಾಧನೆ ಮಾಡಿ, ಅಮೆರಿಕ & ಯುರೋಪ್ ಸೇರಿದಂತೆ ಇಡೀ ಜಗತ್ತಿನ ಗಮನ ಸೆಳೆಯುತ್ತಿವೆ. ಈಗಾಗಲೇ ಹಲವಾರು ಕ್ಷೇತ್ರಗಳಲ್ಲಿ ಸಾಧನೆ ಮಾಡಿ ತಮ್ಮ ಛಾಪು ಮೂಡಿಸಿರುವ ಅದಾನಿ ಸಮೂಹ ಸಂಸ್ಥೆಗಳು, ಈಗ ಮತ್ತಷ್ಟು ಇತಿಹಾಸ ನಿರ್ಮಾಣ ಮಾಡುತ್ತಿವೆ. ಅದರಲ್ಲೂ ಅದಾನಿ ಪವರ್ ಲಿಮಿಟೆಡ್ ಈಗ ಹೊಸ ಮೈಲಿಗಲ್ಲು ಸ್ಥಾಪಿಸಿದೆ.

ಅಂದಹಾಗೆ ಅದಾನಿ ಪವರ್ ಲಿಮಿಟೆಡ್ ಸಂಸ್ಥೆಯು ಈಗ ಮಧ್ಯಪ್ರದೇಶ ಪವರ್ ಮ್ಯಾನೇಜ್‌ಮೆಂಟ್ ಕಂಪನಿ ಲಿಮಿಟೆಡ್ (MPPMCL) ಟೆಂಡರಿಂಗ್ ಪ್ರಕ್ರಿಯೆಯಲ್ಲಿ ಒಟ್ಟಾರೆ 1,600 ಮೆಗಾವಾಟ್ (MW) ಸಾಮರ್ಥ್ಯ ಪಡೆದುಕೊಳ್ಳಲು ಯಶಸ್ವಿಯಾಗಿದೆ. ಇದಕ್ಕೂ ಮೊದಲು 800 ಮೆಗಾವಾಟ್ ಸಾಮರ್ಥ್ಯ ಪಡೆದಿದ್ದ ಅದಾನಿ ಪವರ್ ಲಿಮಿಟೆಡ್ ಸಂಸ್ಥೆ ಈಗ 'ಗ್ರೀನ್‌ಶೂ ಆಪ್ಷನ್' ಅನ್ವಯ ಸುಮಾರು 800 ಮೆಗಾವಾಟ್ ಹೆಚ್ಚುವರಿ ಸಾಮರ್ಥ್ಯವನ್ನ ಎಲ್‌ಒಎ ಎಂದರೆ ಲೆಟರ್ ಆಫ್ ಅವಾರ್ಡ್ ಮೂಲಕ ಪಡೆಯಲು ಯಶಸ್ವಿಯಾಗಿದೆ. ಇದು ಕಳೆದ 12 ತಿಂಗಳಲ್ಲಿ ಕಂಪನಿಗೆ ಬಂದ ಐದನೇ ಅತಿದೊಡ್ಡ ವೋಲ್ಯೂಮ್ ಪವರ್ ಸರಬರಾಜು ಆದೇಶವಾಗಿದ್ದು, ಒಟ್ಟಾರೆ ನೀಡಲಾಗಿರುವ ಸಾಮರ್ಥ್ಯ 7,200 ಮೆಗಾವಾಟ್ ಎನ್ನುವುದು ವಿಶೇಷ ಸಾಧನೆಯಾಗಿದೆ.

Adani Power Secures 1600 MW Thermal Power LoA from MPPMCL in Madhya Pradesh

21,000 ಕೋಟಿ ರೂಪಾಯಿ ಹೂಡಿಕೆ

ಈಗ ಅದಾನಿ ಪವರ್ ಲಿಮಿಟೆಡ್ ಸಂಸ್ಥೆ ಯಶಸ್ವಿಯಾಗಿ ಪಡೆದ 800 ಮೆಗಾವಾಟ್ ಮತ್ತು ಹೆಚ್ಚುವರಿ 800 ಮೆಗಾವಾಟ್ ಎರಡೂ ಒಂದೇ ಟಾರಿಫ್‌ ಅಂದ್ರೆ ₹5.838/kWh ಬೆಲೆಯಲ್ಲಿ ಖರೀದಿಸಲ್ಪಡುತ್ತದೆ. ಹೀಗೆ 1600 MW (800 MW x 2) ಸಾಮರ್ಥ್ಯದ ಅಲ್ಟ್ರಾ-ಸುಪೆರ್‌ಕ್ರಿಟಿಕಲ್ ಥರ್ಮಲ್ ಪವರ್ ಯುನಿಟ್ ಅನ್ನು, ಅನ್ನುಪುರ್ ಜಿಲ್ಲೆಯಲ್ಲಿ ಇದೀಗ ಡಿಬಿಎಫ್‌ಒಒ (ಡಿಸೈನ್, ಬಿಲ್ಡ್, ಫೈನಾನ್ಸ್, ಖರೀದಿ, ಕಾರ್ಯಾಚರಣೆ) ಮಾದರಿಯಲ್ಲಿ ನಿರ್ಮಿಸಲಾಗುತ್ತದೆ. ಎರಡು ಘಟಕಗಳನ್ನು ಇದೀಗ ನೇಮಿಸಿದ ದಿನಾಂಕದಿಂದ 60 ತಿಂಗಳ ಒಳಗೆ ಪೂರ್ಣಗೊಳಿಸಲು ಕ್ರಮ ಕೈಗೊಳ್ಳಲಾಗಿದೆ. ಸೈಟು ನಿರ್ಮಾಣ ಮತ್ತು ಮೂಲಸೌಕರ್ಯಕ್ಕೆ ಸುಮಾರು ₹21,000 ಕೋಟಿ ರೂಪಾಯಿ ಹೂಡಿಕೆಯನ್ನು ಕಂಪನಿ ಈಗ ಮಾಡಲಿದೆ.

ಭಾರತದ ಮೊದಲ 'ಗ್ರೀನ್‌ಶೂ' ಮೆಕಾನಿಸಂ

ಈ ಯೋಜನೆ ಮೂಲಕ 'ಗ್ರೀನ್‌ಶೂ ಆಪ್ಷನ್' ಅಳವಡಿಕೆಯನ್ನ ಥರ್ಮಲ್ ಪವರ್ ಟೆಂಡರ್‌ನಲ್ಲಿ ಭಾರತದ ಮಟ್ಟಿಗೆ ಇದೇ ಮೊದಲ ಬಾರಿಗೆ ಅನುಸರಿಸಲಾಗಿದ್ದು, ಹೀಗೆ ಕಲ್ಲಿದ್ದಲು ಪ್ರಕ್ರಿಯೆ ಮತ್ತು ಗಣಿ ಆಧಾರಿತ ವಿದ್ಯುತ್ ಖರೀದಿಗೆ ಹೊಸ ದಿಕ್ಕಿನಲ್ಲಿ ಸಹಾಯ ಮಾಡಲಿದೆ. ಇದರಿಂದ ಮಧ್ಯಪ್ರದೇಶ ರಾಜ್ಯದಲ್ಲಿ ಉದ್ಯಮ ಸ್ಥಾಪನೆ, ನಗರೀಕರಣ ಹಿನ್ನೆಲೆ ಸಂಕೀರ್ಣವಾದ ವಿದ್ಯುತ್ ಬೇಡಿಕೆಯನ್ನು ಪೂರೈಸಲು ಇದು ನೆರವಾಗುವುದು ಖಚಿತ.

ಭಾರತದ ಇಂಧನ ಭದ್ರತೆಗೆ ಬದ್ಧ

'ಮಧ್ಯಪ್ರದೇಶದಲ್ಲಿನ ಆರಂಭಿಕ 800 ಮೆಗಾವಾಟ್ ಯೋಜನೆಯನ್ನು ಮಾತ್ರವಲ್ಲದೆ, ಹೆಚ್ಚುವರಿ 800 ಮೆಗಾವಾಟ್ ಗ್ರೀನ್‌ಶೂ ಆಪ್ಷನ್ ಪ್ರಭಾವದಿಂದ ಪಡೆಯಲಾಗಿದೆ. ಇದು ರಾಜ್ಯದ ವಿದ್ಯುತ್ ಪೂರೈಕೆ, ವಿಶ್ವಾಸಾರ್ಹತೆ, ಖರ್ಚು, ಕನಸು ಮತ್ತು ದೀರ್ಘಾವಧಿ ಸಹಕಾರವನ್ನು ಬಲಪಡಿಸುತ್ತದೆ. ನಮ್ಮ ಉದ್ದೇಶ ಹಾಗೂ ಭಾರತದ ಶಕ್ತಿ ಅಗತ್ಯತೆ ಪೂರೈಕೆಗೆ ನಾವು ಸದಾ ಬದ್ಧರಾಗಿದ್ದೇವೆ. ಈ ಯೋಜನೆ ಮಧ್ಯಪ್ರದೇಶದ ಜೊತೆಗೆ ನಮ್ಮ ದೀರ್ಘಕಾಲೀನ ಪಾಲುದಾರಿಕೆ ಮತ್ತಷ್ಟು ಬಲಪಡಿಸುವ ಹೆಜ್ಜೆ ಮತ್ತು ಭಾರತದ ಇಂಧನ ಭದ್ರತೆ, ಆರ್ಥಿಕ ಬೆಳವಣಿಗೆಯನ್ನ ಬೆಂಬಲಿಸುವ ನಮ್ಮ ಪ್ರಯತ್ನ ಎತ್ತಿ ತೋರಿಸುತ್ತದೆ' ಎಂದು ಅದಾನಿ ಪವರ್‌ ಲಿಮಿಟೆಡ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಸ್.ಬಿ. ಖಯಾಲಿಯಾ ತಿಳಿಸಿದ್ದಾರೆ.

ಯೋಜನೆಯ ಇನ್ನುಳಿದ ಮುಖ್ಯಾಂಶಗಳು

ವಿದ್ಯುತ್ ಉತ್ಪಾದನೆ ಘಟಕಕ್ಕೆ ಅಗತ್ಯವಾದ ಕೋಲ್ ಲಿಂಕೆಜ್‌ನ ಭಾರತ ಸರ್ಕಾರದ ಶಕ್ತಿ ನೀತಿಯಡಿ ನೀಡಲಾಗಿದೆ.

ನಿರ್ಮಾಣದ ಸಮಯದಲ್ಲಿ 9,000 - 10,000 ನೇರ ಹಾಗೂ ಪರೋಕ್ಷ ಉದ್ಯೋಗ ಸೃಷ್ಟಿಸಲು ಇದು ಸಹಾಯ ಮಾಡಲಿದೆ. ಮತ್ತು ಯೋಜನೆಯು ಕಾರ್ಯಗತವಾದ ನಂತರ 2,000 ಉದ್ಯೋಗ ಸೃಷ್ಟಿ ಆಗಲಿದೆ.

ಪಿಎಸ್‌ಎ (ಪವರ್ ಸಪ್ಲೈ ಅಗ್ರಿಮೆಂಟ್) ಮುಂದಿನ ಹಂತದಲ್ಲಿ ಸ್ಟೇಟ್ ಡಿಸ್ಕಾಂ ಜೊತೆ ಜಾರಿಗೆ ಬರಲಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+