Adani Power: ಅದಾನಿ ಪವರ್ ಲಿಮಿಟೆಡ್ ಮೊದಲ ತ್ರೈಮಾಸಿಕ ಫಲಿತಾಂಶ ಪ್ರಕಟ
ಅದಾನಿ ಪವರ್ ಲಿಮಿಟೆಡ್ ದೇಶದ ಅತಿದೊಡ್ಡ ವಿದ್ಯುತ್ ಸಂಸ್ಥೆಯಾಗಿದ್ದು, ಜಾಗತಿಕ ಮಟ್ಟದಲ್ಲಿ ಕೂಡ ಅದಾನಿ ಪವರ್ ಲಿಮಿಟೆಡ್ ದೊಡ್ಡ ಹೆಸರು ಮಾಡಿದೆ. ಈ ಮೂಲಕ ಭಾರತದ ಕೀರ್ತಿ ಪತಾಕೆಯನ್ನು ಈಗ ಜಾಗತಿಕ ಮಟ್ಟದಲ್ಲಿ ಅದಾನಿ ಪವರ್ ಲಿಮಿಟೆಡ್ ಹಾರಿಸುತ್ತಿದೆ ಎನ್ನಬಹುದು. ಷೇರು ಮಾರುಕಟ್ಟೆಯಲ್ಲಿ ಕೂಡ ಅದಾನಿ ಪವರ್ ಲಿಮಿಟೆಡ್ ಸ್ಟಾಕ್‌ಗಳಿಗೆ ಭಾರಿ ಬೇಡಿಕೆ ಇದ್ದು, ಇದೀಗ ಸಂಸ್ಥೆಯ 2025ರ ಜೂನ್ 30ಕ್ಕೆ ಅಂತ್ಯಗೊಂಡ ಮೊದಲ ತ್ರೈಮಾಸಿಕ ಹಣಕಾಸು ಫಲಿತಾಂಶ ಪ್ರಕಟಿಸಲಾಗಿದೆ. ಈ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿ ಇದ್ದು, ಮುಂದೆ ಓದಿ.
ಅದಾನಿ ಪವರ್ ಲಿಮಿಟೆಡ್ ಮುಖ್ಯ ಕಾರ್ಯ ನಿರ್ವಾಹಕಾಧಿಕಾರಿ ಎಸ್.ಬಿ. ಖ್ಯಾಲಿಯಾ ಅವರು ತ್ರೈಮಾಸಿಕ ವರದಿ ಬಗ್ಗೆ ಮಾತನಾಡಿ, 'ವಿದ್ಯುತ್ ಬೇಡಿಕೆ ಮತ್ತು ಅನಿಶ್ಚಿತ ಹವಾಮಾನದಲ್ಲಿ ವ್ಯತ್ಯಾಸ ಇದ್ದರೂ ಅದಾನಿ ಪವರ್ ಇದೀಗ ಸ್ಥಿರ ಹಣಕಾಸು ಕಾರ್ಯಕ್ಷಮತೆ ಮೂಲಕ ಸ್ಥಿರತೆ & ಮೂಲಭೂತ ಶಕ್ತಿಗಳಿಗೆ ಸಾಕ್ಷಿಯಾಗಿದೆ. ಯೋಜನೆಗಳನ್ನು ವೇಗವಾಗಿ ಜಾರಿಗೆ ತರುವುದು ಸೇರಿದಂತೆ ತಂತ್ರಾತ್ಮಕ ಸ್ವಾಧೀನಗಳ ಮೂಲಕ ನಾವು ನಮ್ಮ ಸಾಮರ್ಥ್ಯ ಹೆಚ್ಚಿಸುತ್ತಿದ್ದೇವೆ, 2030 ಹೊತ್ತಿಗೆ ನಮ್ಮ ಮಾರ್ಗದಲ್ಲಿ 30 ಗಿಗಾ ವ್ಯಾಟ್ (ಜಿಡಬ್ಲ್ಯು) ಸಾಮರ್ಥ್ಯ ಸಾಧಿಸುವುದಕ್ಕೆ ಸಿದ್ಧರಾಗಿದ್ದೇವೆ.' ಎಂದು ತಿಳಿಸಿದ್ದಾರೆ.

ಹಾಗೇ ತಮ್ಮ ಮಾಹಿತಿ ಮುಂದುವರಿಸಿ, 'ಅಲ್ಟ್ರಾ-ಸೂಪರ್ ಕ್ರಿಟಿಕಲ್ ಬಾಯ್ಲರ್, ಟರ್ಬೈನ್ ಸೇರಿದಂತೆ ಜನರೆಟರ್‌ಗಳಂಥ ಪ್ರಮುಖ ಸಾಧನಗಳನ್ನ ಸಮಯಕ್ಕಿಂತ ಮೊದಲು ಖಾಯಂ ಮಾಡಿಕೊಂಡ ಹಿನ್ನೆಲೆಯಲ್ಲಿ ನಾವು ನಮ್ಮ ಸ್ಪರ್ಧಾತ್ಮಕ ಪ್ರಭಾವವನ್ನು ಬಲಪಡಿಸುತ್ತಿದ್ದೇವೆ ಮತ್ತು ಭಾರತದ ಬೆಳೆಯುತ್ತಿರುವ ಇಂಧನದ ಅಗತ್ಯಗಳನ್ನು ಪೂರೈಸುತ್ತಿದ್ದೇವೆ. ಸ್ಥಿರತೆ ಮತ್ತು ಕಾರ್ಯಕ್ಷಮತೆಯಲ್ಲಿ ನಮ್ಮ ಬದ್ಧತೆ ಅಚಲವಾಗಿ ಇದ್ದು, ವಿಶ್ವಾಸಾರ್ಹ, ಸುಲಭವಾಗಿ ದೊರೆಯುವ ವಿದ್ಯುತ್ ಒದಗಿಸುವ ಮೂಲಕ ರಾಷ್ಟ್ರದ ಪ್ರಗತಿಗೆ ಕೈಜೋಡಿಸಲು ಎಲ್ಲಾ ಶ್ರಮ ವಹಿಸಿದ್ದೇವೆ.' ಎಂದು ತಿಳಿಸಿದ್ದಾರೆ.
ಪ್ಯಾರಾಮೀಟರ್
Q1 ಎಫ್‌ವೈ26
Q4 ಎಫ್‌ವೈ25
Q1 ಎಫ್‌ವೈ25
ಎಫ್‌ವೈ25
ಸ್ಥಾಪಿತ ಸಾಮರ್ಥ್ಯ (MW)
17,550
17,550
15,250
17,550
ಪ್ಲಾಂಟ್ ಲೋಡ್ ಫ್ಯಾಕ್ಟರ್ (PLF)
67.0%
74.2%
78.0%
70.5%
ಯುನಿಟ್ಸ್ ಸೋಲ್ಡ್ (BU)
24.6
26.3
24.2
95.9
MW: ಮೆಗಾ ವ್ಯಾಟ್ಸ್ BU: ಬಿಲಿಯನ್ ಯುನಿಟ್ಸ್
ಅದಾನಿ ಪವರ್ ಲಿಮಿಟೆಡ್ ಸಂಯುಕ್ತ ಕಾರ್ಯಾಚರಣೆ ಸಾಮರ್ಥ್ಯ Q1 FY25 ವೇಳೆಗೆ 15,250 ಮೆಗಾವಾಟ್‌ನ ಮೂಲಕ Q1 FY26 ವೇಳೆಗೆ 17,550 ಮೆಗಾವಾಟ್‌ಗೆ ವೃದ್ಧಿಯಾಗಿದೆ. ಈ ಪೈಕಿ 1,200 ಮೆಗಾವಾಟ್‌ನ ಮಕ್ಸಿ ಪವರ್ ಜನರೇಷನ್ ಲಿಮಿಟೆಡ್ [MPGL], 600 ಮೆಗಾವಾಟ್ ಕೊರ್ಬಾ ಪವರ್ ಲಿಮಿಟೆಡ್ [KPL], ಹಾಗೂ 500 ಮೆಗಾವಾಟ್ ಅದಾನಿ ದಹಾನು ಥರ್ಮಲ್ ಪವರ್ ಸ್ಟೇಷನ್ ["ADTPS"] ಒಗ್ಗೂಡಿಸಲಾಗಿದೆ. ಇದಕ್ಕೂ ಮೊದಲು, ಜುಲೈ 2025ರಲ್ಲಿ 600 ಮೆಗಾವಾಟ್ ವಿದರ್ಭ ಇಂಡಸ್ಟ್ರೀಸ್ ಪವರ್ ಲಿಮಿಟೆಡ್ ಅನ್ನ ಸಂಪೂರ್ಣ ಕಾರ್ಯ ಚಟುವಟಿಕೆಯಲ್ಲಿ ಪಾಲ್ಗೊಳ್ಳುವಂತೆ ಮಾಡುವ ಮೂಲಕ ಕಾರ್ಯಾಚರಣೆ ಸಾಮರ್ಥ್ಯವು 18,150 ಮೆಗಾವಾಟ್‌ಗೆ ಅಭಿವೃದ್ಧಿ ಹೊಂದಿದೆ.












Click it and Unblock the Notifications