Adani Green: ಅದಾನಿ ಗ್ರೀನ್ ಟಾಕ್ಸ್ 4ನೇ ಆವೃತ್ತಿಯ ಕಾರ್ಯಕ್ರಮ ಭರ್ಜರಿ ಯಶಸ್ವಿ
ಭಾರತದ ಆರ್ಥಿಕತೆಗೆ ದೊಡ್ಡ ಕೊಡುಗೆ ನೀಡುತ್ತಾ, ಉದ್ಯಮ ವಲಯದಲ್ಲಿ ಭಾರಿ ದೊಡ್ಡ ಹೆಸರಿನ ಜೊತೆಗೆ ಸಮಾಜಮುಖಿ ಕಾರ್ಯಗಳಲ್ಲಿ ಕೂಡ ಅದಾನಿ ಗ್ರೂಪ್ ತನ್ನನ್ನು ತಾನು ತೊಡಗಿಸಿಕೊಂಡು ಅಭಿವೃದ್ಧಿ ಕಡೆಗೆ ಹೆಜ್ಜೆ ಹಾಕಿದೆ. ದೇಶದ ಆರ್ಥಿಕತೆ ಅಭಿವೃದ್ಧಿ ಜೊತೆಗೆ ವಾತಾವರಣ ರಕ್ಷಣೆಗಾಗಿಯೂ ಹೆಜ್ಜೆ ಇಡಲಾಗುತ್ತಿದೆ. ಇದೇ ಸಮಯದಲ್ಲಿ ಅದಾನಿ ಗ್ರೀನ್ ಟಾಕ್ಸ್ 4ನೇ ಆವೃತ್ತಿಯ ಕಾರ್ಯಕ್ರಮವು ಭಾರಿ ಗಮನ ಸೆಳೆದಿದ್ದು, ಜಾಗತಿಕ ಮಟ್ಟದಲ್ಲಿ ಇದೀಗ ಸದ್ದು ಮಾಡುತ್ತಿದೆ.
ಭಾರತ ಜಗತ್ತಿನ ಟಾಪ್-3 ಆರ್ಥಿಕ ಶಕ್ತಿಯಾಗಿ ಹೊರಹೊಮ್ಮಲು ಮುಂದೆ ನುಗ್ಗುತ್ತಿದ್ದು, ಈಗಾಗಲೇ ದೊಡ್ಡ ದೊಡ್ಡ ದೇಶಗಳನ್ನು ಕೂಡ ಭಾರತದ ಆರ್ಥಿಕತೆಯು ಈಗಾಗಲೇ ಹಿಂದೆಕ್ಕೆ ಹಾಕಿ ಬಿಟ್ಟಿದೆ. ಜಾಗತಿಕ ಮಟ್ಟದಲ್ಲಿ ಅದಾನಿ ಗ್ರೂಪ್ ಎಲ್ಲಾ ವಲಯದಲ್ಲೂ ತನ್ನ ಶಕ್ತಿಯನ್ನು ತೋರಿಸಿದ್ದು, ಹೀಗೆ ಭಾರತದ ಉದ್ಯಮ ವಲಯದ ಬೆಳವಣಿಗೆಗೆ ಕೂಡ ತನ್ನದೇ ಆದ ದೊಡ್ಡ ಕೊಡುಗೆ ನೀಡುತ್ತಾ ಬಂದಿದೆ. ಹೀಗಿದ್ದಾಗಲೇ ಗ್ರೀನ್ ಟಾಕ್ಸ್ ಕಾರ್ಯಕ್ರಮ ನಾಲ್ಕು ವರ್ಷದಲ್ಲಿ ಹೇಗೆ ಸಮಾಜ ಮಾರ್ಪಡಿಸುವ ಶಕ್ತಿಯ ಉತ್ಸವವಾಗಿದೆ ಎಂಬುದನ್ನು ಅದಾನಿ ಅವರು ಪ್ರತಿಬಿಂಬಿಸಿದರು. ಗನ್‌ರೋಬೋಟಿಕ್ಸ್ ಹಾದಿಯನ್ನು ಸ್ಮರಿಸುವ ಜೊತೆಯಲ್ಲಿ ನೈಸರ್ಗಿಕ ಶಕ್ತಿಯ ಅನಾವರಣ ಕೂಡ ಆಯಿತು. ಗನ್‌ರೋಬೋಟಿಕ್ಸ್‌ನ ಹಾದಿ ಬಗ್ಗೆ ಅವರು ಸ್ಮರಿಸಿದರು.

ಸಾಮಾಜಿಕ ಕಳಕಳಿ ಇರುವ ಉದ್ಯಮಿಗಳು ಮತ್ತು ಅನ್ವೇಷಕರು ಸ್ಥಿರ ಆರ್ಥಿಕತೆ ರೂಪಿಸುತ್ತಾ ಇದ್ದಾರೆ. ಹೀಗಿದ್ದಾಗ ಅದಾನಿ ಸಮೂಹ ಸಂಸ್ಥೆಗಳ ಚೇರ್‌ಮನ್ ಆಗಿರುವ ಗೌತಮ್ ಅದಾನಿ ಅವರು, ಟೆಕ್ನಾಲಜಿ ಮತ್ತು ಸಂಶೋಧನೆಯಲ್ಲಿ ಹೊಸ ಮೈಲಿಗಲ್ಲು ತಲುಪುವುದೇ ನಿಜವಾದ ಹೋರಾಟವಾಗಿದೆ ಎಂದರು. ಇದು ಎಲ್ಲಾ ಸಮುದಾಯವನ್ನು ಒಗ್ಗೂಡಿಸುವ ಜೊತೆಗೆ ಅಭಿವೃದ್ಧಿಗೆ ಬೇಕಾದ ಬೆಂಬಲ ನೀಡುತ್ತದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಅಲ್ಲದೆ ಕಳೆದ 4 ವರ್ಷಗಳಲ್ಲಿ ಗ್ರೀನ್ ಟಾಕ್ಸ್ ಮಾಡಿರುವ ಸಾಧನೆ ಅವರು ಸ್ಮರಿಸಿದರು.
ನವೋದ್ಯಮಿಗಳ ಹೊಸ ಆವಿಷ್ಕಾರ
2025ರಲ್ಲಿ ಐದು ಪಥಪ್ರದರ್ಶನ ಉದ್ಯಮಿಗಳು ತಾವು ಮಾಡಿದ ಪ್ರಯತ್ನ, ಹೊಸ ಆವಿಷ್ಕಾರಗಳು ಮತ್ತು ಸಾಮಾಜಿಕ ಹಿತಚಿಂತನೆ ಘಟನೆಗಳನ್ನು ಹಂಚಿಕೊಂಡರು. ಪ್ರಕೃತಿ ಸ್ನೇಹಿ ವಸ್ತುಗಳನ್ನು ಬಳಸಿಕೊಂಡು ಕಟ್ಟಡ ನಿರ್ಮಿಸುವ ರಿಸೈಕ್ಲೆಕ್ಸ್‌ನ ಅಭಿಷೇಕ್ ಚ್ಹಝೇದ್, ಟ್ರೆಸ್ಟಲ್ ಲ್ಯಾಬ್ಸ್‌ನ ಅಕ್ಷಿತ ಸಾಚದೆವ ಹಾಗೂ ಬೊನಿ ಡೇವ್ ಅವರು ದೃಷ್ಟಿಹೀನರಿಗೆ ಸಹಾಯಕತೆಯ ತಂತ್ರಜ್ಞಾನ ವೇದಿಕೆ ಆಗಿರುವ 'ಕಿಬೋ' ಅನ್ನು ವಿಸ್ತರಿಸುತ್ತಿದ್ದಾರೆ. ನೆಮೋಕೇರ್ ವೆಲ್ನೆಸ್‌ನ ಮನೋಜ್ ಸಾಂಕರ್ ಅವರು ನಿಯೋನಾಟಲ್ ಸೇರಿದಂತೆ ಮೆಟರ್ನಲ್ ಹೆಲ್ತ್‌ಕೇರ್ ಸಾಧನಗಳನ್ನು ಸಾಮಾನ್ಯರ ಕೈಗೆಟುಕುವಂತೆ ಅಭಿವೃದ್ಧಿಪಡಿಸುತ್ತಾ ಇದ್ದಾರೆ. ಅವಿನ್ಯಾ ಲೆದರ್‌ನ ಜೆನಿಲ್ ಗಾಂಧಿ ಮತ್ತು ಮನನ್ ವ್ಯಾಸ್ ಸಸ್ಯಗಳ ಆಧಾರಿತ, ಕ್ರೂರತೆ ರಹಿತ ವೀಗನ್ ಲೆದರ್ ಅಭಿವೃದ್ಧಿಪಡಿಸುವ ಮುಂದಾಳತ್ವ ಕೂಡ ವಹಿಸುತ್ತಿದ್ದಾರೆ. ಮತ್ತು ಸೀ6 ಎನರ್ಜಿಯ ಸೌಮ್ಯಾ ಬಲೆಂದರ್ ಸಮುದ್ರ ಆಧಾರಿತ ಸೀವೀಡ್ ಕೃಷಿ ಮೂಲಕ ಜೈವಿಕ ಇಂಧನ, ಬಯೋಪ್ಲಾಸ್ಟಿಕ್ ಹಾಗೂ ರಸಗೊಬ್ಬರ ಉತ್ಪಾದನೆಯಲ್ಲಿ ಆವಿಷ್ಕಾರ ಮಾಡುತ್ತಿದ್ದಾರೆ. ಈ ಎಲ್ಲರೂ ಒಟ್ಟಾಗಿ ಭಾರತದ ನವೀನತೆಗೆ ಸರ್ವಾಂಗೀಣತೆ ಮತ್ತು ಜಾಗತಿಕ ಸವಾಲು ಎದುರಿಸುವ ಸಾಮರ್ಥ್ಯ ಸ್ಪಷ್ಟಪಡಿಸುತ್ತಿದ್ದಾರೆ.
ಲೋಕ್ ಕಲ್ಯಾಣ ಪ್ರಶಸ್ತಿ ಪ್ರದಾನ
ಈ ವರ್ಷ ಅದಾನಿ ಗ್ರೀನ್ ಟಾಕ್ಸ್ ಸೋಷಿಯಲ್ ಇಂಪ್ಯಾಕ್ಟ್ ಪ್ರಶಸ್ತಿ ಉದ್ಘಾಟಿಸಲಾಯಿತು, ಸಹಸ್ರಾರು ಅರ್ಜಿಗಳಲ್ಲಿ ಕ್ರಾಂತಿಕಾರಿ ಪರಿಹಾರ ನೀಡಿದವರನ್ನು ಆಯ್ಕೆ ಮಾಡಲಾಯಿತು. ಹಾಗೇ ಮೊದಲ ಲೋಕ್ ಕಲ್ಯಾಣ ಪ್ರಶಸ್ತಿಯನ್ನ ಭಾರತ್ ಬೈಟೆಕ್‌ನ ಸ್ಥಾಪಕ ಮತ್ತು ಕಾರ್ಯನಿರ್ವಹಣಾ ಅಧ್ಯಕ್ಷರಾದ ಡಾ. ಕೃಷ್ಣ ಎಲ್ಲಾ ಅವರಿಗೆ ನೀಡಲಾಯಿತು. ಅದಾನಿ ಸಮೂಹ ಸಂಸ್ಥೆಗಳ ಚೇರ್‌ಮನ್ ಗೌತಮ್ ಅದಾನಿ ಅವರು ಈ ಪ್ರಶಸ್ತಿ ಪ್ರದಾನ ಮಾಡಿದರು. ಅಲ್ಲದೆ, ಡಾ. ಕೃಷ್ಣ ಎಲ್ಲಾ ಅವರು ಸ್ವದೇಶಿ ಲಸಿಕೆಗಳ ಮೂಲಕ ಜಾಗತಿಕ ಸಾರ್ವಜನಿಕ ಆರೋಗ್ಯದ ಅಭಿವೃದ್ಧಿಗೆ ನೀಡಿದ ಕೊಡುಗೆಗೆ ಸ್ಮರಿಸಿದರು. 'ಕೋವಾಕ್ಸಿನ್' ಸೇರಿ ಕೋವಿಡ್-19 ಮಹಾಮಾರಿ ಸಂದರ್ಭದಲ್ಲಿ ಲಕ್ಷಾಂತರ ಜನರನ್ನು ರಕ್ಷಿಸಿದ ಬಗ್ಗೆ ಕೂಡ ಇದೇ ವೇಳೆ ಮಾತನಾಡಿ ಹೆಮ್ಮೆ ವ್ಯಕ್ತಪಡಿಸಿದರು. ಪ್ರಶಸ್ತಿ ಸ್ವೀಕಾರ ಮಾಡಿದ ಡಾ. ಕೃಷ್ಣ ಎಲ್ಲಾ ಅವರು, ತಮಗೆ ಸಿಕ್ಕ ಈ ಗೌರವವನ್ನ ವಿಜ್ಞಾನ-ಪರ ಸಾಮಾಜಿಕ ಸೇವೆಗೆ ತೊಡಗಿರುವ ಅನೇಕ ಭಾರತೀಯ ವಿಜ್ಞಾನಿಗಳು ಮತ್ತು ಸಂಶೋಧಕರಿಗೆ ಅರ್ಪಿಸಿದರು. ಅಲ್ಲದೆ ಇಂತಹ ವೇದಿಕೆಗಳು ಮುಂದಿನ ಪೀಳಿಗೆಗೆ ಧೈರ್ಯದಿಂದ ಕನಸು ಕಾಣಲು ಸ್ಪೂರ್ತಿ ನೀಡುತ್ತವೆ ಎಂದರು.












Click it and Unblock the Notifications