Adani Green: ಹೊಸ ಇತಿಹಾಸ ಬರೆದ ಅದಾನಿ ಗ್ರೀನ್ ಷೇರುಗಳು, ಶೇಕಡಾ 11ಕ್ಕೂ ಹೆಚ್ಚು ಮೊತ್ತದ ಏರಿಕೆ
ಭಾರತದ ಆರ್ಥಿಕತೆ ಅಭಿವೃದ್ಧಿಗೆ ಅದಾನಿ ಸಮೂಹದ ಕಂಪನಿಗಳು ತಮ್ಮದೇ ಆದ ಕೊಡುಗೆಯನ್ನ ನೀಡುತ್ತಿವೆ. ಅದ್ರಲ್ಲೂ ಭವಿಷ್ಯದ ದೃಷ್ಟಿಯಿಂದ ಅದಾನಿ ಗ್ರೀನ್ ಎನರ್ಜಿ ಲಿಮಿಟೆಡ್ (AGEL) ಭಾರಿ ಮಹತ್ವ ಪಡೆದುಕೊಂಡಿದೆ. ಹೀಗಿದ್ದಾಗ ಅದಾನಿ ಗ್ರೀನ್ ಎನರ್ಜಿ ಲಿಮಿಟೆಡ್‌ನ ಷೇರುಗಳು ಇಂದು ಸುಮಾರು 11 ಶೇಕಡಾ ಏರಿಕೆ ಕಂಡಿವೆ. ಕಂಪನಿಯು ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ಒಟ್ಟಾರೆ ನಿವ್ವಳ ಲಾಭದಲ್ಲಿ ವರ್ಷದಿಂದ ವರ್ಷಕ್ಕೆ ಶೇಕಡಾ 28 ಏರಿಕೆ ದಾಖಲಿಸಿದ ನಂತರ ಈ ರೀತಿ ಭಾರಿ ಏರಿಕೆ ಕಂಡು ಬಂದಿದೆ.
ಬಿಎಸ್‌ಇ ಸೂಚ್ಯಂಕದಲ್ಲಿ ಶೇಕಡಾ 10.80 ಏರಿಕೆ ಆಗಿದ್ದು ಪ್ರತಿ ಷೇರು ಈಗ ಬರೋಬ್ಬರಿ 1,113.05 ರೂಪಾಯಿಗೆ ತಲುಪಿತು. ಎನ್‌ಎಸ್‌ಇ ಸೂಚ್ಯಂಕದಲ್ಲಿ ಈ ಷೇರು 10.79 ಶೇಕಡಾ ಏರಿಕೆಯಾಗಿದ್ದು ಪ್ರತಿ ಷೇರು 1,112 ರೂಪಾಯಿಗೆ ತಲುಪಿದೆ. ಮಂಗಳವಾರ, ಅದಾನಿ ಗ್ರೀನ್ ಎನರ್ಜಿ ಲಿಮಿಟೆಡ್‌ನ ನವೀಕರಿಸಬಹುದಾದ ವಿದ್ಯುತ್ ವ್ಯವಹಾರದ ಮೂಲಕ ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ನಿವ್ವಳ ಲಾಭ ಶೇ. 28 ಏರಿಕೆ ಆಗಿದ್ದು, ಈ ಮೂಲಕ 644 ಕೋಟಿ ಎಂದು ಪ್ರಕಟಿಸಲಾಗಿದೆ.

2024-25ರ ಆರ್ಥಿಕ ವರ್ಷದ ಜುಲೈ ಮತ್ತು ಸೆಪ್ಟೆಂಬರ್ ಅವಧಿಯಲ್ಲಿ ಕಂಪನಿ 515 ಕೋಟಿ ರೂ. ನಿವ್ವಳ ಲಾಭ ದಾಖಲಿಸಿತ್ತು ಎಂದು ಅದಾನಿ ಗುಂಪಿನ ಘಟಕ ವಿನಿಮಯದ ದಾಖಲೆಯಲ್ಲಿ ತಿಳಿಸಿದೆ ಈ ಮೂಲಕ ಹೊಸ ದಾಖಲೆ ನಿರ್ಮಾಣವಾಗಿದೆ. ಕಂಪನಿ ವಿದ್ಯುತ್ ಪೂರೈಕೆ ಆದಾಯವು ಕಳೆದ ವರ್ಷದ 2ನೇ ತ್ರೈಮಾಸಿಕದಲ್ಲಿ ಇದ್ದ 2,308 ಕೋಟಿ ರೂಪಾಯಿಯಿಂದ ಇದೀಗ 2,776 ಕೋಟಿಗೆ ಏರಿಕೆ ಆಗಿದೆ.
ಒಟ್ಟಾರೆ ಆದಾಯ ಹಿಂದಿನ ವರ್ಷದ 3,396 ಕೋಟಿ ರೂಪಾಯಿಯಿಂದ ಈಗ 3,249 ಕೋಟಿ ರೂಗೆ ಇಳಿಕೆ ಕಂಡಿದೆ. ಒಟ್ಟಾರೆ ವೆಚ್ಚ Q2 FY25ರಲ್ಲಿ 2,857 ಕೋಟಿ ರೂಪಾಯಿಗೆ ಹೋಲಿಕೆ ಮಾಡಿದರೆ 2,874 ಕೋಟಿ ರೂಪಾಯಿಗೆ ಏರಿಕೆ ಆಗಿದೆ.
ಸಂಸ್ಥೆಯ ಸಾಧನೆ ಬಗ್ಗೆ ಅದಾನಿ ಗ್ರೀನ್ ಎನರ್ಜಿ ಸಿಇಓ ಅವರು ಪ್ರಮುಖ ಮಾಹಿತಿ ನೀಡಿದ್ದಾರೆ. ಪ್ರತ್ಯೇಕ ಹೇಳಿಕೆಯಲ್ಲಿ ಅದಾನಿ ಗ್ರೀನ್ ಎನರ್ಜಿ ಸಿಇಓ ಆಗಿರುವ ಅಶೀಷ್ ಖನ್ನ ಅವರು "ಗುಜರಾತ್ ಖವಡಾದ 30 ಜಿಡಬ್ಲ್ಯು ನವೀಕರಿಸಬಹುದಾದ ಶಕ್ತಿ ಯೋಜನೆ ಅಭಿವೃದ್ಧಿಯಲ್ಲಿ ಸ್ಥಿರ ಪ್ರಗತಿಯನ್ನು ಸಾಧಿಸಿದ್ದೇವೆ. ನಿರಂತರ, ಹೊಸ ನವೀಕರಿಸಬಹುದಾದ ತಂತ್ರಜ್ಞಾನ ಅಳವಡಿಸಿಕೊಂಡು ನಮ್ಮ ವ್ಯವಹಾರದ ಹೆಚ್ಚಿನ ಭಾಗವನ್ನ ಡಿಜಿಟಲ್ ಮಾಡುತ್ತಿದ್ದೇವೆ, ಇದರಿಂದ ಕಾರ್ಯಾಚರಣೆ ಯೋಜನೆ ನಿರ್ವಹಣೆ & ಭದ್ರತೆ ಸುಧಾರಣೆಗೆ ಸಹಾಯವಾಗುತ್ತದೆ" ಎಂದು ಮಾಹಿತಿಯನ್ನ ನೀಡಿದ್ದಾರೆ.
ಹಾಗೇ ಅದಾನಿ ಸಂಸ್ಥೆಯ ಬಾಕಿ ಷೇರುಗಳು ಕೂಡ ಭಾರಿ ದೊಡ್ಡ ಏರಿಕೆ ಕಾಣುವ ಮೂಲಕ ಈ ದಿನ ಸಾಕಷ್ಟು ಗಮನ ಸೆಳೆದವು. ಅದಾನಿ ಎನರ್ಜಿ ಸಲ್ಯೂಷನ್ಸ್ ಶೇ. 5.05, ಎನ್‌ಡಿಟಿವಿ ಶೇ. 3.26 ಸೇರಿ ಅಂಬುಜಾ ಸಿಮೆಂಟ್ಸ್ ಶೇ. 2.95, ಅದಾನಿ ಪೋರ್ಟ್ಸ್ ಶೇ. 2.68, ಅದಾನಿ ಟೋಟಲ್ ಗ್ಯಾಸ್ ಶೇ. 2.15, ಸಂಗ್ಘಿ ಇಂಡಸ್ಟ್ರೀಸ್ ಶೇ. 1.69, ಅದಾನಿ ಎಂಟರ್‌ಪ್ರೈಸಸ್ ಶೇ. 1.65 ಹಾಗೂ ಎಸಿಸಿ ಶೇ. 0.96 ಏರಿಕೆ ಕಂಡಿದೆ.
ಗಮನಿಸಿ: ಈ ಸಂದೇಶ & ಅದಕ್ಕೆ ಸಂಬಂಧಿತವಾಗಿರುವ ಯಾವುದೇ ದಾಖಲೆಗಳಲ್ಲಿ ಗೌಪ್ಯ ಅಥವಾ ಸ್ವಂತತ್ವದ ವಸ್ತುಗಳಿರಬಹುದು. ಹೀಗಾಗಿ ಇದು ಉದ್ದೇಶಿತ ಸ್ವೀಕಾರರಿಗಾಗಿ ಮಾತ್ರ ನೀವು ಉದ್ದೇಶಿತ ಸ್ವೀಕಾರರಲ್ಲದಿದ್ದರೆ, ಈ ಸಂದೇಶದ ಪರಿಶೀಲನೆ, ಬಳಕೆ, ಬಹಿರಂಗಪಡಿಸುವಿಕೆ, ಪ್ರಸಾರ ಮತ್ತು ಹಂಚಿಕೆ, ಅಥವಾ ಪ್ರತಿಕೃತಿ ನಿರ್ಮಾಣ ನಿಷೇಧಿಸಲಾಗಿದೆ. ತಪ್ಪಾಗಿ ಸ್ವೀಕರಿಸಿದರೆ, ದಯವಿಟ್ಟು ಕಳುಹಿಸಿದವರನ್ನ ತಕ್ಷಣ ಮಾಹಿತಿ ನೀಡಿ ಮತ್ತು ಈ ಇಮೇಲನ್ನು ಯಾವುದೇ ಮಾದರಿಯಲ್ಲಾದರೂ (ಇಲೆಕ್ಟ್ರಾನಿಕ್ ಅಥವಾ ಮುದ್ರಿತ) ಅಳಿಸಿ. ಈ ಸಂದೇಶದಲ್ಲಿನ ಅಭಿಪ್ರಾಯಗಳು, ತೀರ್ಮಾನಗಳು ಅಥವಾ ಬದ್ಧತೆಗಳು ಕಳುಹಿಸಿದ ವ್ಯಕ್ತಿಯದೇ ಆಗಿದ್ದು, ಅವು ವರ್ಸೆ ಇನೋವೆಶನ್ ಪ್ರೈವೇಟ್ ಲಿಮಿಟೆಡ್‌ನ ನಿಲುವನ್ನು ಪ್ರತಿನಿಧಿಸುವುದಿಲ್ಲ.












Click it and Unblock the Notifications