Adani Foundation: ಭಾರತದ ಆರೋಗ್ಯ ಕ್ಷೇತ್ರಕ್ಕೆ ಮಹತ್ವದ ಕೊಡುಗೆ ನೀಡುತ್ತಿರುವ ಅದಾನಿ ಗ್ರೂಪ್‌

ಅದಾನಿ ಫೌಂಡೇಶನ್ ಭಾರತದ ಹಲವು ವಿಭಾಗಗಳಲ್ಲಿ ಸೇವೆ ಸಲ್ಲಿಸುತ್ತಾ, ಸಮಾಜಮುಖಿ ಕಾರ್ಯಗಳನ್ನು ಮಾಡುತ್ತಿದೆ. ಇದೇ ರೀತಿ ಅದಾನಿ ಫೌಂಡೇಶನ್ ವತಿಯಿಂದ ಈಗ ಆರೋಗ್ಯ ಕ್ಷೇತ್ರದಲ್ಲಿ ಮಹತ್ವದ ಸೇವೆ ಸಲ್ಲಿಸಲು ಒಪ್ಪಂದ ಮಾಡಿಕೊಳ್ಳಲಾಗಿದೆ. ಮಹಾರಾಷ್ಟ್ರದ ದತ್ತ ಮೇಘೆ ಇನ್ಸ್ಟಿಟ್ಯೂಟ್ ಆಫ್ ಹೈಯರ್ ಎಜುಕೇಶನ್ ಅಂಡ್ ರಿಸರ್ಚ್ (DMIHER) ಜೊತೆಗೆ ಅದಾನಿ ಫೌಂಡೇಶನ್ ಈಗ ಮಹತ್ವದ ಒಪ್ಪಂದವನ್ನು ಮಾಡಿಕೊಂಡಿದೆ. ಅದಾನಿ ಗ್ರೂಪ್‌ನ ಪರವಾಗಿ ಸಾಮಾಜಿಕ ಕಾರ್ಯಗಳನ್ನ ಮಾಡುವ ಅದಾನಿ ಫೌಂಡೇಶನ್ ಈಗ ಆರೋಗ್ಯ ಕ್ಷೇತ್ರದಲ್ಲಿ ಕೊಡುಗೆ ನೀಡಲು ಮುಂದಾಗಿದೆ. ಈ ಮಹತ್ವದ ಒಪ್ಪಂದದ ಮೂಲಕ ಸುಲಭ ಮತ್ತು ಕಡಿಮೆ ದರದಲ್ಲಿ ಆರೋಗ್ಯ ಶಿಕ್ಷಣ ಮತ್ತು ಸೇವೆಗಳಿಗೆ ಜಾಗತಿಕ ಮಟ್ಟದ ಸೆಂಟರ್ ಆಫ್ ಎಕ್ಸಲೆನ್ಸ್ ಸ್ಥಾಪಿಸಲು ಗುರಿ ಹೊಂದಲಾಗಿದೆ.

ಅದಾನಿ ಗ್ರೂಪ್ ಚೇರ್‌ಮನ್ ಆಗಿರುವ ಗೌತಮ್ ಅದಾನಿ ಅವರ ಆದರ್ಶವಾಗಿರುವ 'ಸೇವೆಯೇ ಪೂಜೆ' ಎಂಬ ಆಧಾರದಲ್ಲಿ, ಆರೋಗ್ಯ ಕ್ಷೇತ್ರದಲ್ಲೂ ಮಹತ್ವದ ಸೇವೆ ಸಲ್ಲಿಸಲು ಇದೀಗ ಅದಾನಿ ಫೌಂಡೇಶನ್ ಮುಂದಾಗಿದೆ. ಈ ಸಹಭಾಗಿತ್ವ ಗುಣಮಟ್ಟದ ಆರೋಗ್ಯ ಸೇವೆ ಮತ್ತು ಶಿಕ್ಷಣ ಸಮಾಜದ ಬೆಳವಣಿಗೆಗೆ ಬಹು ಮುಖ್ಯ ಎಂಬುದನ್ನು ಕೂಡ ಪ್ರತಿಬಿಂಬಿಸುತ್ತದೆ, ಹಾಗೇ ಆರೋಗ್ಯ ಸೇವೆ ಮತ್ತು ಶಿಕ್ಷಣ ರಾಷ್ಟ್ರ ನಿರ್ಮಾಣಕ್ಕೆ ಮುಖ್ಯವಾಗಿದೆ ಎಂಬ ಗೌತಮ್ ಅದಾನಿ ಅವರ ಆದರ್ಶಕ್ಕೆ ಬೆನ್ನೆಲುಬಾಗಲಿದೆ.

Adani Foundation DMIHER Launch Healthcare Centre of Excellence

DMIHER ಜೊತೆಗಿನ ಈ ಪಾಲುದಾರಿಕೆ ಶೈಕ್ಷಣಿಕ ನಾವೀನ್ಯತೆ ಸೇರಿದಂತೆ, ಕ್ಲಿನಿಕಲ್ ಸಂಶೋಧನೆ ಹಾಗೂ ಸಮುದಾಯ ಆರೋಗ್ಯದಲ್ಲಿ ಸಂಸ್ಥೆ ವ್ಯಾಪ್ತಿ ಮತ್ತು ಪ್ರಭಾವವನ್ನು ಬಲಪಡಿಸುವ ಗುರಿಯನ್ನು ಹೊಂದಿದೆ.

15 ಇನ್ಸ್ಟಿಟ್ಯೂಟ್‌ಗಳು ಮತ್ತು 5 ಬೋಧನಾ ಆಸ್ಪತ್ರೆಗಳ ನಿರ್ಮಾಣದ ಜೊತೆಗೆ, 13 ವಿಷಯಗಳಲ್ಲಿ 217 ಶೈಕ್ಷಣಿಕ ಕೋರ್ಸ್ ಜಾರಿಗೆ ತರಲು ನಿರ್ಧಾರ ಕೈಗೊಳ್ಳಲಾಗಿದೆ. ಹಾಗೇ ಪದವಿ, ಸ್ನಾತಕೋತ್ತರ ಪದವಿ, ಸೂಪರ್ ಸ್ಪೆಷಾಲಿಟಿ, ಡಾಕ್ಟರೇಟ್ ಸೇರಿದಂತೆ ಫೆಲೋಷಿಪ್ ಸ್ಥಾಪನೆಗೆ ಕೂಡ ನಿರ್ಧಾರ ಕೈಗೊಳ್ಳಲಾಗಿದೆ.

ಈ ಸಹಯೋಗವು ಆದಾನಿ ಸಮೂಹದ 'ಟೆಂಪಲ್ ಆಫ್ ಹೆಲ್ತ್‌ಕೇರ್' ಪರಿಕಲ್ಪನೆಯಲ್ಲಿ ಆಧರಿತವಾಗಿದ್ದು, ಈ ಸಹಯೋಗ ಆರೋಗ್ಯ ಸೌಲಭ್ಯಗಳನ್ನ ಚಿಕಿತ್ಸಾ ಕೇಂದ್ರಗಳಾಗಿ ಮಾತ್ರವಲ್ಲದೆ, ಸೇವೆ, ಗೌರವ ಹಾಗೂ ಕರುಣೆಯ ಸಂಸ್ಥೆಗಳನ್ನಾಗಿ ಪುನರಾವಿಷ್ಕರಿಸಲು ಸಹಾಯ ಮಾಡಲಿದೆ.

ಸಮೂಹದ ಪ್ರಗತಿಗಾಗಿ ಒಂದು ಸಾಮೂಹಿಕ ದೃಷ್ಟಿ

ಅದಾನಿ ಫೌಂಡೇಶನ್ ಮತ್ತು DMIHER ನಡುವಿನ ಈ ಮಹತ್ವದ ಸಹಯೋಗದ ಮೂಲಕ, ಹೆಚ್ಚು ಜನರಿಗೆ ತಲುಪುವಂತಹ, ಸುಲಭ ಬೆಲೆ ಮತ್ತು ಗುಣಮಟ್ಟದ ಆರೋಗ್ಯ ಜೊತೆ ಶಿಕ್ಷಣಕ್ಕೆ ದಾರಿ ಮಾಡಿಕೊಡಲು ಕೂಡ ಸಹಾಯ ಆಗಲಿದೆ. ಹಾಗೂ ಈ ಮಹತ್ವದ ಸಹಯೋಗ ಅದಾನಿ ಫೌಂಡೇಶನ್‌ನ ಇತರ ಉದ್ದೇಶಪೂರ್ಣ ಸೇವೆಗಳ ಮೂಲಕ ಸಮುದಾಯಗಳನ್ನು ಏಳಿಗೆಗೆ ಕೊಂಡೊಯ್ಯುವ ಗುರಿಯಾಗಿ ಪ್ರತಿಬಿಂಬಿಸುತ್ತದೆ - ಹೀಗೆ ಅವಕಾಶ, ಪ್ರವೇಶ ಮತ್ತು ಕರುಣೆ ಒಂದಾಗುತ್ತವೆ.

ನಾಯಕತ್ವದ ಒಳನೋಟಗಳು

ಅದಾನಿ ಫೌಂಡೇಶನ್ ಅಧ್ಯಕ್ಷರಾದ ಡಾ. ಪ್ರೀತಿ ಅದಾನಿ ಅವರು ಈ ಮಹತ್ವದ ಸಹಯೋಗದ ಕುರಿತಾಗಿ ಮಾತನಾಡಿದ್ದು, 'ಈ ಸಹಯೋಗವು ಉತ್ತಮ ಆರೋಗ್ಯ ಮತ್ತು ಶಿಕ್ಷಣಕ್ಕೆ ಪ್ರವೇಶವು ಮೂಲಭೂತ ಹಕ್ಕು-ಕೇವಲ ಸವಲತ್ತಲ್ಲ ಎಂಬ ನಮ್ಮ ನಂಬಿಕೆಯನ್ನು ಪ್ರತಿಬಿಂಬಿಸುತ್ತದೆ. ಶೈಕ್ಷಣಿಕ ನಾವೀನ್ಯತೆ, ಕ್ಲಿನಿಕಲ್ ಸಂಶೋಧನೆ ಮತ್ತು ಸಮುದಾಯ ಸಂರಕ್ಷಣೆಯನ್ನು ಒಂದುಗೂಡಿಸುವ ಉತ್ಕೃಷ್ಟ ಕೇಂದ್ರವನ್ನು ಸ್ಥಾಪಿಸಲು ನಾವು ಬೆಂಬಲಿಸುತ್ತಿದ್ದೇವೆ ಎಂಬುದರಲ್ಲಿ ನಾವು ಹೆಮ್ಮೆಪಡುತ್ತೇವೆ. ಒಟ್ಟಾಗಿ, ನಾವು ಗೌರವದಿಂದ ಸೇವೆ ಸಲ್ಲಿಸುವ ಮತ್ತು 2047ರ ವೇಳೆಗೆ 'ವಿಕಸಿತ ಭಾರತ'ದ ಗುರಿಗೆ ಅರ್ಥಪೂರ್ಣವಾಗಿ ಕೊಡುಗೆಯನ್ನ ನೀಡುವ ಪ್ರಮಾಣೀಕರಿಸಬಲ್ಲ ಮಾದರಿಯನ್ನು ನಿರ್ಮಿಸುವ ಗುರಿ ಹೊಂದಿದ್ದೇವೆ.' ಎಂದು ತಿಳಿಸಿದ್ದಾರೆ.

DMIHER ಸಂಸ್ಥಾಪಕರಾದ ಶ್ರೀ ದತ್ತಾ ಮೇಘೆ ಅವರು, 'ಈ ಸಹಭಾಗಿತ್ವ ರೂಪುಗೊಳ್ಳುವುದನ್ನು ನೋಡಿದಾಗ ನನಗೆ ಅಪಾರ ಹೆಮ್ಮೆಯಾಗುತ್ತದೆ. 35 ವರ್ಷಗಳಿಗೂ ಹೆಚ್ಚು ಕಾಲ, ಸ್ವಾವಲಂಬಿ ಆರೋಗ್ಯ ಮತ್ತು ಶಿಕ್ಷಣ ಪರಿಸರದ ನಮ್ಮ ದೃಷ್ಟಿ ಈಗ ಶಕ್ತಿಶಾಲಿ ವಾಸ್ತವವಾಗಿ ಬೆಳೆದಿದೆ. ಅದಾನಿ ಫೌಂಡೇಶನ್‌ ಜೊತೆಗೆ ಸಹಯೋಗ ಮಾಡಿಕೊಳ್ಳುವುದು ಪ್ರಾದೇಶಿಕ ಹಾಗೂ ರಾಷ್ಟ್ರೀಯ ಅಭಿವೃದ್ಧಿಯನ್ನು ಮುನ್ನಡೆಸುವಲ್ಲೂ ಒಂದು ಪ್ರಮುಖ ಹೆಜ್ಜೆಯಾಗಿದೆ. 2047ರ ವೇಳೆಗೆ 'ವಿಕಸಿತ ಭಾರತ'ದ ಭಾವನೆಯೊಂದಿಗೆ, ಈ ಒಪ್ಪಂದ ಸಮಗ್ರ ಮತ್ತು ಸುಸ್ಥಿರ ಪ್ರಗತಿಗೆ ನಮ್ಮ ಹಂಗಾಮಿ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ.' ಎಂದಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+