ಜಿಎಸ್ಟಿ ಲೆಕ್ಕಾಚಾರ ಇನ್ನು ಸುಲಭ, ಇಲ್ಲಿದೆ ಉಚಿತ ಸಾಫ್ಟ್ ವೇರ್
ಬೆಂಗಳೂರು, ನವೆಂಬರ್ 24: ಎಸಿ ಟಚ್ ಭಾರತದ ಪ್ರಮುಖ ಕ್ಲೌಡ್ ಇಆರ್ ಪಿ (ಎಂಟರ್ ಪ್ರೈಸ್ ರಿಸೋರ್ಸ್ ಪ್ಲಾನಿಂಗ್) ಕಂಪನಿಗಳಲ್ಲಿ ಒಂದು. ಸಣ್ಣ ಮತ್ತು ಮಧ್ಯಮ ಗಾತ್ರದ ಉದ್ಯಮಗಳಿಗಾಗಿ ಸಂಪೂರ್ಣ ಉಚಿತವಾದ ಕ್ಲೌಡ್ ಆಧಾರಿತ ಜಿಎಸ್‍ಟಿ ಸಾಫ್ಟ್‍ವೇರ್‍ನ್ನು ಪರಿಚಯಿಸಿದೆ. ಗ್ರಾಹಕರು ಸಂಸ್ಥೆಯ ವೆಬ್ ತಾಣದಲ್ಲಿ ನೋಂದಣಿ ಮಾಡಿ ಜಿಎಸ್‍ಟಿ ವರದಿ ಸಿದ್ದಪಡಿಸಬಹುದಾಗಿದೆ.
ಸಣ್ಣ ಮತ್ತು ಮಧ್ಯಮ ಗಾತ್ರದ ಉದ್ಯಮಗಳು, ಸಣ್ಣ ವ್ಯಾಪಾರದ ಮಾಲೀಕರು ಹಾಗೂ ಸ್ವ ಉದ್ಯೋಗ ಮಾಡುವ ಸಲಹೆಗಾರರು, ಉಪ ಗುತ್ತಿಗೆದಾರರು, ಜಾಬ್ ವರ್ಕ್, ಪ್ರೀಲಾನ್ಸರ್ , ಬುಕ್ ಕೀಪರ್ಸ್, ಸಣ್ಣ ಉದ್ದಿಮೆದಾರರು ಹಾಗೂ ಉತ್ಪಾದಕರಿಗೆ ಉಚಿತ ಜಿಎಸ್‍ಟಿ ಸಾಫ್ಟ್ ವೇರ್ ಹೆಚ್ಚು ನೆರವಾಗಲಿದೆ.
ಆರ್ಥಿಕ ವರ್ಷ ಸರಾಗವಾಗಿ ಅಂತ್ಯವಾಗುವಂತೆ, ಒತ್ತಡ ಹಾಗೂ ಹಣ ಮುಕ್ತವಾಗಿ ಜಿಎಸ್‍ಟಿ ವರದಿಯನ್ನು ಕೂಡಲೆ ತಯಾರಿಸಬಹುದು. ಸುಲಭವಾಗಿ ಉಪಯೋಗಿಸಬಹುದಾದ ಈ ಸಾಫ್ಟ್ ವೇರ್ ನಿಂದ ಇನ್ವಾಯಿಸಿಂಗ್, ಬಿಲ್ಲಿಂಗ್, ಪೇಮೆಂಟ್ ಹಾಗೂ ರೆಸಿಪ್ಟ್ ಟ್ರಾಕಿಂಗ್‍ನ್ನು ಐದು ನಿಮಿಷದೊಳಗೆ ದೋಷ ಮುಕ್ತವಾಗಿ ಜಿಎಸ್‍ಟಿ ವರದಿಯನ್ನು ಉಚಿತವಾಗಿ ಪಡೆಯಬಹುದು. ಗ್ರಾಹಕರು ತಮ್ಮ ವ್ಯಾಪಾರದತ್ತ ನಿಶ್ಚಿಂತೆಯಿಂದ ಗಮನ ಹರಿಸಲು ಕಂಪನಿಯು ಡಾಟಾ ಬ್ಯಾಕ-ಅಪ್ ಹಾಗೂ ಬ್ಯಾಂಕ್ ಲೆವೆಲ್ ಡಾಟಾ ಸುರಕ್ಷತೆಯ ಹೊಣಗಾರಿಕೆ ಎಸಿ ಟಚ್ ತೆಗೆದುಕೊಂಡಿದೆ.

ಎಸಿ ಟಚ್‍ನ ಸಿಇಒ ನಿತ್ಯಾನಂದ ರಾವ್
ಉಚಿತ ಕೊಡುಗೆಯ ಹಿಂದಿರುವ ಪ್ರಮುಖ ಅಂಶ ಕುರಿತು ಎಸಿ ಟಚ್‍ನ ಸಿಇಒ ನಿತ್ಯಾನಂದ ರಾವ್ ಹೇಳುತ್ತಾರೆ, "ಭಾರತದ ಮಾರುಕಟ್ಟೆಯಲ್ಲಿ ಸಣ್ಣ ಮತ್ತು ಮಧ್ಯಮ ಗಾತ್ರದ ಉದ್ಯಮ ಅಂದಾಜು 6.8 ಕೋಟಿ ಇದೆ ಇದರಲ್ಲಿ ಶೇ 90ರಷ್ಟು ವ್ಯವಹಾರ ಒಬ್ಬರೇ ಮಾಲೀಕರು ನಿರ್ವಹಿಸುತ್ತಿದ್ದು ಐವರಿಗಿಂತ ಕಡಿಮೆ ನೌಕರರನ್ನು ಹೊಂದಿರುವ ಸಂಸ್ಥೆಗಳಾಗಿವೆ.
ನಾವು ಈ ವಲಯವನ್ನು ಗುರಿಯಾಗಿಸಿಕೊಂಡಿದ್ದೇವೆ, ಜಿಎಸ್‍ಟಿ ವ್ಯಾಪ್ತಿಗೆ ತರುವತ್ತ ಗಮನ ಹರಿಸುವ ಜತೆಗೆ ಅವರ ಹಣ ಉಳಿಸುವಂತೆ ಮಾಡುವುದು ಹಾಗೂ ಒತ್ತಡ ಮುಕ್ತ ಸಮಯವನ್ನು ನೀಡುವುದಾಗಿದೆ.
ಗ್ರಾಹಕರ ಬಗ್ಗೆ ನಮಗಿರುವ ಆಸಕ್ತಿಯನ್ನು ತೋರುವ ಹೆಜ್ಜೆ ಇದಾಗಿದೆ ಮತ್ತು ಸಣ್ಣ ಪ್ರಮಾಣದ ವ್ಯಾಪಾರ ನೋಡುವ ಮಾಲೀಕರಲ್ಲಿ ಕ್ಲೌಡ್ ಇಆರ್‍ಪಿ ಸಲ್ಯೂಷನ್ಸ್ ನೀಡುವ ಪ್ರಯೋಜನ ಕುರಿತ ಅರಿವು ಮೂಡಿಸುವುದಾಗಿದೆ.

ಎಸಿ ಟಚ್ ಟೆಕ್ನಾಲಜೀಸ್
ಎಸಿ ಟಚ್ ಕುರಿತು: ಎಸಿ ಟಚ್ ಟೆಕ್ನಾಲಜೀಸ್ ಭಾರತದ ಪ್ರಮುಖ ಸಂಪೂರ್ಣ ಕ್ಲೌಡ್ ಇಆರ್‍ಪಿ(ಎಂಟರ್‍ಪ್ರೈಸ್ ರಿಸೋರ್ಸ್ ಪ್ಲಾನಿಂಗ್) ವೇದಿಕೆ. ಬೆಂಗಳೂರಿನಲ್ಲಿ ನೆಲೆಯೂರಿರುವ ಎಸಿಟಚ್ ಸಂಸ್ಥೆಯನ್ನು ನಿತ್ಯಾನಂದ ರಾವ್‍ರವರ ಎರಡು ದಶಕದ ಅನುಭವ ಹಾಗೂ ಸುನಿಶ್ ಅಂಕೋಲೆಕರ್ ರವರ ವ್ಯಾಪಾರ ತಂತ್ರಗಾರಿಯೊಂದಿಗೆ ಜತೆಗೂಡಿ ಸ್ಥಾಪಿಸಿದ್ದಾರೆ.
ಇಆರ್‍ಪಿ ಮಾರುಕಟ್ಟೆಯಲ್ಲಿ ಕೇವಲ ಅಕೌಂಟಿಂಗ್ ಸಲ್ಯೂಷನ್ಸ್ ಸೇವಗಳಿದ್ದು, ಮಾಲಿಕರ ಅವಶ್ಯಕತೆಗಳಿಗೆ ಸ್ವಂದಿಸುವ ಯಾವುದೇ ಸೇವೆಗಳು ಇರಲಿಲ್ಲ. ಮಾರುಕಟ್ಟೆಯ ಈ ಅಂತರವನ್ನು ಕಡಿತಗೊಳಿಸಲು ಎಸಿ ಟಚ್ 2014ರಲ್ಲಿ ಸಣ್ಣ ಮತ್ತು ಮದ್ಯಮ ಉದ್ಯಮಗಳಿಗೆ ನೈಜ ಮೌಲ್ಯ ನೀಡಲು ತನ್ನ ಇಆರ್‍ಪಿ ಸಾಫ್ಟ್ ವೇರ್ ಬಿಡುಗಡೆ ಮಾಡಿತು.

ಉತ್ಪನ್ನ ಹಾಗೂ ಸೇವೆಯ ನಿರ್ವಹಣೆ ಸುಲಭ
ಎಸಿ ಟಚ್ ಸಂಸ್ಥೆ ಉತ್ಪನ್ನ ಹಾಗೂ ಸೇವೆಯ ಪಟ್ಟಿಯಲ್ಲಿ ಇನ್ವೆಂಟರಿ ಮ್ಯಾನೇಜ್‍ಮೆಂಟ್, ಆಮದು-ರಫ್ತು, ಬಿಲ್ಲಿಂಗ್ ಮತ್ತು ಇನ್‍ವಾಯ್ಸಿಂಗ್ ತಯಾರಿ - ಉತ್ಪಾದನೆ, ಉಪ ಗುತ್ತಿಗೆ ಮತ್ತು ಜಾಬ್ ವಕ್ರ್ಸ್ - ಪೇಮೆಂಟ್ ಮತ್ತು ರಸೀದಿ ಹಾಗೂ ಇನ್ನೂ ಅನೇಕ ಸೇವೆಗಳು. ಮೊಬೈಲ್ ಆ್ಯಪ್ಸ್ ಫಾರ್ ಸೇಲ್ಸ್ ಫೋರ್ಸ್ ಮತ್ತು ಡೀಲರ್ ಮ್ಯಾನೇಜ್‍ಮೆಂಟ್ ಪ್ರೋಗ್ರಾಮ್ಸ್ ಸೇವೆಗಳನ್ನು ಇತ್ತೀಚಿಗೆ ಸೇರಿಸಲಾಗಿದೆ.

200ಕ್ಕೂ ಅಧಿಕ ಗ್ರಾಹಕರನ್ನು ಹೊಂದಿದೆ
ಕಂಪನಿಯ ಗ್ರಾಹಕರ ಪಟ್ಟಿಯಲ್ಲಿ ಇ ಕಾಮರ್ಸ್, ನ್ಯೂ ಏಜ್ ಟೆಕ್ಯಾಲಜಿಯಿಂದ ಹಿಡಿದು ಮ್ಯಾನುಫ್ಯಾಕ್ಟರಿಂಗ್ ಕಂಪನಿಗಳ ವರಗೆ ವ್ಯಾಪರಸ್ಥರಿಂದ ಸಲಹೆಗಾರರ ತನಕ ಸೇರಿದ 200ಕ್ಕೂ ಅಧಿಕ ಗ್ರಾಹಕರನ್ನು ಎಸಿ ಟಚ್ ಹೊಂದಿದೆ. ಅದರಲ್ಲಿ IIM Bangalore (MARS Team), URDoorstep, Magiccrate, RenewIT, Energy Efficient Lights, AdPac ಮೊದಲಾದ ಗ್ರಾಹಕರಿಗೆ ಸೇವೆ ಒದಗಿಸುತ್ತಿದೆ.
-
Karnataka Weather: ರಾಜ್ಯದ 14 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಿದ ಹವಾಮಾನ ಇಲಾಖೆ -
Pooja Gandhi: ಹಿಂದಿ ಒಂದು ಭಾಷೆಯಾಗಿ ಕಲಿಯಲಿ, ಆದ್ರೆ ಕನ್ನಡದ ಮಕ್ಕಳ ಮೇಲೆ ಹೇರಿಕೆ ಬೇಡ: ನಟಿ ಪೂಜಾ ಗಾಂಧಿ -
RCB: ಆರ್ಸಿಬಿ ಪಂದ್ಯದ ನಡುವೆಯೆ ಮತ್ತೊಮ್ಮ ಅಭಿಮಾನಿಗಳ ಮನಗೆದ್ದ 'ಕ್ರಶ್' ಅನನ್ಯಾ ಬಿರ್ಲಾ -
Khushbu Sundar: ಲವ್ ಜಿಹಾದ್ ಆರೋಪ ಹೊತ್ತಿದ್ದ ನಟಿ ಖುಷ್ಬೂ ಪತಿ ಸುಂದರ್ ರಾಜಕೀಯಕ್ಕೆ ಎಂಟ್ರಿ: ಮಧುರೈ ಸೆಂಟ್ರಲ್ನಿಂದ ಸ್ಪರ್ಧೆ -
Gold Rate : ಆಭರಣ ಪ್ರಿಯರ ಗಮನಕ್ಕೆ: ಮಾರುಕಟ್ಟೆಯಲ್ಲಿ ಇಂದಿನ ಚಿನ್ನ-ಬೆಳ್ಳಿ ಬೆಲೆ ಇಷ್ಟಿದೆ? ಇಲ್ಲಿದೆ ಮಾಹಿತಿ -
April Monthly Horoscope: ಏಪ್ರಿಲ್ ಮಾಸ ಭವಿಷ್ಯ: ಉದ್ಯೋಗ, ಹಣಕಾಸು ಮತ್ತು ಆರೋಗ್ಯದ ಸೂಚನೆಗಳು -
ನಮ್ಮ ಮೆಟ್ರೋ-ಬಾಗ್ಮನೆ ಗ್ರೂಪ್ ಮಧ್ಯೆ ₹40 ಕೋಟಿ ಒಪ್ಪಂದ: ಮೆಟ್ರೋ ನಿಲ್ದಾಣಕ್ಕೆ 'ಬಾಗ್ಮನೆ' ಹೆಸರು -
EPFO 3.0: ಇನ್ಮುಂದೆ UPI, ATM ಮೂಲಕವೇ ಪಿಎಫ್ ಹಣ ಪಡೆಯಬಹುದು; ಏಪ್ರಿಲ್ 1 ರಿಂದಲೇ ಹೊಸ ನಿಯಮ ಜಾರಿ -
Karnataka Weather: ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ -
Chicken Leg Piece: ಚಿಕನ್ ಲೆಗ್ ಪೀಸ್ ಸಿಗಲಿಲ್ಲ ಎಂದು ಮದುವೆ ಮಂಟಪದಲ್ಲೇ ಮಾರಾಮಾರಿ, ವಿಡಿಯೋ ಇಲ್ಲಿದೆ -
March 29 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
ಬೆಂಗಳೂರಿನ ಫುಟ್ಪಾತ್ಗಳ ದುರಸ್ತಿಗೆ ಶ್ರಮಿಸಿದ್ದ ಕೆನಡಾ ಪ್ರಜೆ ಈಗ ಮಿಜೋರಾಂಗೆ ಶಿಫ್ಟ್: 'ಬೆಂಗಳೂರಿಗೆ ವಿದಾಯ' ಎಂದ Vlogger












Click it and Unblock the Notifications