ಶೇ 97ರಷ್ಟು ಹಳೇ ನೋಟು ವಾಪಸ್, ನಂಗೊತ್ತಿಲ್ಲ ಅಂದರು ವಿತ್ತಸಚಿವ ಜೇಟ್ಲಿ

Posted By:
Subscribe to Oneindia Kannada

ನವದೆಹಲಿ, ಜನವರಿ 5: ನಿಷೇಧಿಸಲಾದ 500, 1000 ರುಪಾಯಿ ನೋಟುಗಳು ಸಂಪೂರ್ಣವಾಗಿ ಬ್ಯಾಂಕ್ ಗಳಿಗೆ ವಾಪಸ್ ಬಂದಿವೆ. 'ಬ್ಲೂಮ್ ಬರ್ಗ್' ಈ ಬಗ್ಗೆ ವರದಿ ಮಾಡಿದ್ದು, ಸರಕಾರದ ಅಪನಗದೀಕರಣ ನಿರ್ಧಾರವು ಕಪ್ಪುಹಣ ಪತ್ತೆ ಮಾಡುವಲ್ಲಿ ಹಾಗೂ ನಾಶಪಡಿಸುವುದರಲ್ಲಿ ವಿಫಲವಾಗಿದೆ.

ಈ ಅಂದಾಜು ಸರಿಯಿದೆಯಾ ಎಂಬ ಪ್ರಶ್ನೆಗೆ "ನನಗೆ ಈ ಬಗ್ಗೆ ಗೊತ್ತಿಲ್ಲ" ಎಂದು ವಿತ್ತ ಸಚಿವ ಅರುಣ್ ಜೇಟ್ಲಿ ಪ್ರತಿಕ್ರಿಯಿಸಿದ್ದಾರೆ. ನವೆಂಬರ್ 8ರಂದು ರಾತ್ರಿ ದಿಢೀರ್ ಆಗಿ 500, 1000 ರುಪಾಯಿ ನೋಟುಗಳನ್ನು ನಿಷೇಧಿಸಲಾಗಿತ್ತು. ಅದಕ್ಕಾಗಿ ಡಿಸೆಂಬರ್ 30 ಕೊನೆ ದಿನವಾಗಿತ್ತು.[ಕೇಂದ್ರ ಸರಕಾರಕ್ಕೆ 2017 ಅಳಿವು-ಉಳಿವಿನ ವರ್ಷ, ಏಕೆ ಗೊತ್ತಾ?]

97% Of Banned Notes Back In Banks? 'I Don't Know' Says Jaitley

ಆಗ ಚಲಾವಣೆಯಲ್ಲಿ 15.5 ಲಕ್ಷ ಕೋಟಿ ರುಪಾಯಿ ಪೈಕಿ 15 ಲಕ್ಷ ಕೋಟಿ ಬ್ಯಾಂಕ್ ಗಳಲ್ಲಿ ಜಮೆಯಾಗಿವೆ ಎಂದು ಹೆಸರು ಹೇಳಲು ಇಚ್ಛಿಸದ ಮೂಲವೊಂದು ಬ್ಲೂಮ್ ಬರ್ಗ್ ಗೆ ಮಾಹಿತಿ ನೀಡಿದೆ. ಕೇಂದ್ರ ಸರಕಾರವಾಗಲೀ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಆಗಲೀ ಅಧಿಕೃತವಾಗಿ ಈ ಬಗ್ಗೆ ಯಾವುದೇ ಪ್ರಕಟಣೆ ಅಥವಾ ಹೇಳಿಕೆ ನೀಡಿಲ್ಲ.

ಆದರೆ, ಡಿಸೆಂಬರ್ 14ರಂದು ಆರ್ ಬಿಐ ಹೇಳಿಕೆ ಪ್ರಕಾರ 12.5 ಲಕ್ಷ ಕೋಟಿ ರುಪಾಯಿ ಬ್ಯಾಂಕ್ ಗಳಿಗೆ ಜಮೆಯಾಗಿತ್ತು. ಹಳೆ ನೋಟು ಬದಲಿಸಿಕೊಳ್ಳಲು ನಿಗದಿಯಾಗಿದ್ದ ದಿನದ ಕೊನೆಗೆ ಎಲ್ಲ ಬ್ಯಾಂಕ್ ಗಳು ಮಾಹಿತಿಯ ವರದಿ ಸಲ್ಲಿಸಬೇಕು ಎಂದು ರಿಸರ್ವ್ ಬ್ಯಾಂಕ್ ಇಂಡಿಯಾ ಸೂಚನೆ ನೀಡಿತ್ತು.[ಹಳೆ ನೋಟು ಇಸಿದುಕೊಳ್ಳದ ಆರ್ಬಿಐ, ರೊಚ್ಚಿಗೆದ್ದ ಜನರು]

ಕಪ್ಪುಹಣದ ನಿಯಂತ್ರಣ ಹಾಗೂ ತೆರಿಗೆ ಕದಿಯುವುದನ್ನು ತಪ್ಪಿಸಲು ಪ್ರಧಾನಿ ನರೇಂದ್ರ ಮೋದಿ ಅವರು ತೆಗೆದುಕೊಂಡ ಕ್ರಮ ದಿಟ್ಟತನದ್ದು ಎಂದು ತಜ್ಞರು, ಸಾರ್ವಜನಿಕರು ಹೊಗಳುತ್ತಿದ್ದಾರೆ. ಇದೇ ವೇಳೆ ವಿರೋಧ ಪಕ್ಷಗಳು, ಅಪನಗದೀಕರಣದಿಂದ ಭ್ರಷ್ಟ ಶ್ರೀಮಂತರಿಗಿಂತ ಪ್ರಾಮಾಣಿಕ ಹಾಗೂ ಜನಸಾಮಾನ್ಯರಿಗೆ ತೊಂದರೆಯಾಗಿದೆ ಎಂದು ಆರೋಪಿಸಿವೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Virtually all the banned 500 and 1,000-rupee notes have been turned into banks, "I don't know" was Finance Minister Arun Jaitley's response when asked if the estimate is correct.
Please Wait while comments are loading...