ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆದಾಯ ತೆರಿಗೆ ಇಳಿಕೆ? ಬಜೆಟ್ ನಿಂದ ನಿರೀಕ್ಷಿಸಬಹುದಾದ 9 ಸಂಗತಿಗಳು

|
Google Oneindia Kannada News

Recommended Video

Union Budget 2018 : ಆದಾಯ ತೆರಿಗೆ ಬಗ್ಗೆ ನಿರೀಕ್ಷಿಸಬಹುದಾದ 9 ಸಂಗತಿಗಳು

ನವದೆಹಲಿ, ಜನವರಿ 30: 2018ರ ಕೇಂದ್ರ ಬಜೆಟ್ ನಲ್ಲಿ ಆದಾಯ ತೆರಿಗೆ ಮಿತಿಯನ್ನು ಏರಿಕೆ ಮಾಡುವುದರೊಂದಿಗೆ ಜನರ ಮೇಲಿನ ಭಾರವನ್ನು ಕಡಿಮೆ ಮಾಡುವ ಸಾಧ್ಯತೆ ಇದೆ ಎಂದು ತೆರಿಗೆ ಮತ್ತು ಸಲಹಾ ಸಂಸ್ಥೆ 'ಇವೈ' ತನ್ನ ಸಮೀಕ್ಷೆಯಲ್ಲಿ ಹೇಳಿದೆ.

ಆದಾಯ ತೆರಿಗೆ ಮತಿಯನ್ನು ಏರಿಕೆ ಮಾಡುವುದರಿಂದ ಜನರ ಬಳಸಬಹುದಾದ ಆದಾಯದಲ್ಲಿ ಏರಿಕೆಯಾಗಲಿದೆ ಎಂದು ಸಮೀಕ್ಷೆಯಲ್ಲಿ ಪಾಲ್ಗೊಂಡ ಶೇಕಡಾ 69ರಷ್ಟು ಜನರು ಹೇಳಿದ್ದಾರೆ.

ಒನ್ಇಂಡಿಯಾದಲ್ಲಿ ಮೋದಿ ಸರ್ಕಾರದ ಕೇಂದ್ರ ಬಜೆಟ್ 2018 ಲೈವ್ ಒನ್ಇಂಡಿಯಾದಲ್ಲಿ ಮೋದಿ ಸರ್ಕಾರದ ಕೇಂದ್ರ ಬಜೆಟ್ 2018 ಲೈವ್

2017-18ನೇ ಬಜೆಟ್ ನಲ್ಲಿ ಆದಾಯ ತೆರಿಗೆ ಮಿತಿಯನ್ನು ಅರುಣ್ ಜೇಟ್ಲಿ ಏರಿಕೆ ಮಾಡಿರಲಿಲ್ಲ. ಆದರೆ ತೆರಿಗೆ ಪ್ರಮಾಣವನ್ನು ಇಳಿಕೆ ಮಾಡುವ ಮೂಲಕ ಜನರಿಗೆ ಲಾಭವನ್ನು ದಾಟಿಸಿದ್ದರು. ಇದೀಗ 2018-19ರ ಬಜೆಟ್ ನ್ನು ಫೆಬ್ರವರಿ 1ರಂದು ಜೇಟ್ಲಿ ಮಂಡಿಸಲಿದ್ದು ತೆರಿಗೆ ಮಿತಿಯನ್ನು ಹಾಲಿ 2.5 ಲಕ್ಷದಿಂದ 5 ಲಕ್ಷದವರೆಗೆ ಏರಿಕೆ ಮಾಡಬಹುದು ಎಂಬ ನಿರೀಕ್ಷೆ ಜನರಲ್ಲಿದೆ.

ಬಜೆಟ್ ನಿಂದ ನಿರೀಕ್ಷಿಸಬಹುದಾದ ಇನ್ನೂ ಹಲವು ಅಂಶಗಳು ಇಲ್ಲಿವೆ,

 ಸ್ಟಾಂಟರ್ಡ್ ಡೆಡಕ್ಷನ್ ಮಿತಿ ಏರಿಕೆ

ಸ್ಟಾಂಟರ್ಡ್ ಡೆಡಕ್ಷನ್ ಮಿತಿ ಏರಿಕೆ

ಹಳೆಯದಾಗಿರುವ ಡಿಡಕ್ಷನ್ಸ್ ಅನ್ನು ಸ್ಟಾಂಡರ್ಡ್ ಡಿಡಕ್ಷನ್ ಗೆ ಬದಲಾಯಿಸಬೇಕು. ಈ ಮೂಲಕ ನೌಕರರ ತೆರಿಗೆ ಹೊರೆಯನ್ನು ತಗ್ಗಿಸಬೇಕು ಎಂದು ಸರ್ವೆಯಲ್ಲಿ ಭಾಗವಹಿಸಿದ ಹೆಚ್ಚಿನವರು ಹೇಳಿದ್ದಾರೆ. ಸ್ಟಾಂಡರ್ಡ್ ಡಿಡಕ್ಷನ್ ಅಂದರೆ ತಮ್ಮ ಉದ್ಯೋಗಕ್ಕೆ ಸಂಬಂಧಿಸಿದ ಖರ್ಚುಗಳನ್ನು ಸಂಬಳ ಪಡೆಯುವ ನೌಕರರಿಗೆ ಫ್ಲ್ಯಾಟ್ ಡಿಡಕ್ಷನ್ ರೂಪದಲ್ಲಿ ನೀಡಲಾಗುತ್ತದೆ.
ಕನಿಷ್ಠ 1 ಲಕ್ಷ ರೂಪಾಯಿಗಳ ಸ್ಟಾಂಡರ್ಡ್ ಡೆಡಕ್ಷನ್ ಯೋಜನೆಯನ್ನು ಮತ್ತೆ ಪರಿಚಯಿಸಿ ಚೇಂಬರ್ ಆಫ್ ಕಾಮರ್ಸ್ ಸಲಹೆ ನೀಡಿದೆ.

ಬಜೆಟ್ ಮಂಡಿಸಲಿರುವ ಜೇಟ್ಲಿ ಬಗ್ಗೆ ಇಂಟ್ರೆಸ್ಟಿಂಗ್ ಸಂಗತಿ ಬಜೆಟ್ ಮಂಡಿಸಲಿರುವ ಜೇಟ್ಲಿ ಬಗ್ಗೆ ಇಂಟ್ರೆಸ್ಟಿಂಗ್ ಸಂಗತಿ

 ಆದಾಯ ತೆರಿಗೆ ಮಿತಿ ಏರಿಕೆ

ಆದಾಯ ತೆರಿಗೆ ಮಿತಿ ಏರಿಕೆ

ಆದಾಯ ತೆರಿಗೆ ಮಿತಿಯನ್ನು ಹಾಲಿ 2.5 ಲಕ್ಷ ರೂಪಾಯಿಂದ ಕನಿಷ್ಠ 3 ಲಕ್ಷ ರೂಪಾಯಿವರೆಗೆ ಏರಿಸುವ ನಿರೀಕ್ಷೆ ಇದೆ. ಈ ಮೂಲಕ ಮಧ್ಯಮ ವರ್ಗದ ಜನರಿಗೆ ಮತ್ತಷ್ಟು ಖರೀದಿ ಬಲ ನೀಡುವ ಸಾಧ್ಯತೆ ಇದೆ.

ಬಜೆಟ್ ದಿನ ಭರ್ಜರಿ ಏರಿಳಿತ ಕಾಣಬಹುದಾದ ಷೇರುಗಳು!ಬಜೆಟ್ ದಿನ ಭರ್ಜರಿ ಏರಿಳಿತ ಕಾಣಬಹುದಾದ ಷೇರುಗಳು!

 ವೈದ್ಯಕೀಯ ಬಿಲ್ ಗಳ ಮೇಲೆ ತೆರಿಗೆ ಮಿತಿ

ವೈದ್ಯಕೀಯ ಬಿಲ್ ಗಳ ಮೇಲೆ ತೆರಿಗೆ ಮಿತಿ

1999ರಲ್ಲಿ ವೈದ್ಯಕೀಯ ಬಿಲ್ ಗಳ ಮೇಲೆ ತೆರಿಗೆ ಮಿತಿಯನ್ನು 15,000 ರೂಪಾಯಿಗಳಿಗೆ ಏರಿಸಲಾಗಿತ್ತು. ಇದೀಗ ಈ ಮಿತಿಯನ್ನು ರೂ. 50 ಸಾವಿರಕ್ಕೆ ಏರಿಕೆ ಮಾಡಬಹುದು ಎಂಬ ನಿರೀಕ್ಷೆ ಇಟ್ಟುಕೊಳ್ಳಲಾಗಿದೆ.

ಕೇಂದ್ರ ಬಜೆಟ್: ಡಿಜಿಟಲ್ ವ್ಯವಹಾರ ಹೆಚ್ಚಿಸಲು ಏನು ಮಾಡಬಹುದು?ಕೇಂದ್ರ ಬಜೆಟ್: ಡಿಜಿಟಲ್ ವ್ಯವಹಾರ ಹೆಚ್ಚಿಸಲು ಏನು ಮಾಡಬಹುದು?

ಸೆಕ್ಷನ್ 80ಸಿ

ಸೆಕ್ಷನ್ 80ಸಿ

ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 80ಸಿ ಉಳಿತಾಯಕ್ಕೆ ಸಹಾಯ ಮಾಡುತ್ತದೆ. 2014-15ರಲ್ಲಿ ಕೊನೆಯಬಾರಿಗೆ ಉಳಿತಾಯದ ಮೇಲಿನ ಆದಾಯ ತೆರಿಗೆ ಮಿತಿ ಪ್ರಮಾಣವನ್ನು 1 ಲಕ್ಷದಿಂದ 1.5 ಲಕ್ಷ ರೂಪಾಯಿಗಳಿಗೆ ಏರಿಕೆ ಮಾಡಲಾಗಿತ್ತು. ಇದೀಗ ಪಿಪಿಎಫ್, ತೆರಿಗೆ ಉಳಿತಾಯದ ಎಫ್ ಡಿ ಗಳಲ್ಲಿ ಹೂಡಿಕೆ ಮಾಡುವ 2 ಲಕ್ಷ ರೂಪಾಯಿಗಳವರೆಗೆ ತೆರಿಗೆ ವಿನಾಯಿತಿ ನೀಡುವ ನಿರೀಕ್ಷೆ ಇದೆ.

ಡಿವಿಡೆಂಡ್ ವಿತರಣೆ ಮೇಲಿನ ತೆರಿಗೆ

ಡಿವಿಡೆಂಡ್ ವಿತರಣೆ ಮೇಲಿನ ತೆರಿಗೆ

ಕಂಪನಿಗಳು ನೀಡುವ ಡಿವಿಡೆಂಡ್ ಗಳಿಗೆ ಶೇಕಡಾ 15 ತೆರಿಗೆ ಇದೆ. ಇದಕ್ಕೆ ಸೆಸ್, ಸರ್ ಚಾರ್ಚ್ ಸೇರಿ ಒಟ್ಟು ಶೇಕಡಾ 20.35ರವರೆಗೆ ತೆರಿಗೆ ಕಟ್ಟಬೇಕಾಗುತ್ತದೆ. ಒಂದೊಮ್ಮೆ ಡಿವಿಡೆಂಡ್ ಆದಾಯ 10 ಲಕ್ಷ ರೂ ದಾಟಿದರೆ ಹೆಚ್ಚುವರಿ ಶೇಕಡಾ 10 ತೆರಿಗೆ (ಸರ್ ಚಾರ್ಜ್, ಸೆಸ್) ಪಾವತಿಸಬೇಕಾಗುತ್ತದೆ. ಈ ತೆರಿಗೆಯನ್ನು ಅರುಣ್ ಜೇಟ್ಲಿ ತಮ್ಮ ಬಜೆಟ್ ನಲ್ಲಿ ಇಳಿಸುವ ಸಾಧ್ಯತೆ ಇದೆ.

ಮನೆ ಬಾಡಿಗೆ ಮೇಲೆ ವಿನಾಯಿತಿ (ಎಚ್ಆರ್ ಎ)

ಮನೆ ಬಾಡಿಗೆ ಮೇಲೆ ವಿನಾಯಿತಿ (ಎಚ್ಆರ್ ಎ)

ಸದ್ಯ ಮುಂಬೈ, ದೆಹಲಿ, ಕೊಲ್ಕೊತ್ತಾ ಮತ್ತು ಚೆನ್ನೈ ನಗರಗಳಲ್ಲಿ ವಾಸಿಸುತ್ತಿರುವ ಉದ್ಯೋಗಸ್ಥರಿಗೆ ಮನೆ ಬಾಡಿಗೆ ಮೇಲೆ (ಎಚ್ಆರ್ ಎ) ಹೆಚ್ಚಿನ ವಿನಾಯಿತಿ ಸಿಗಲಿದೆ. ಇದೀಗ ಈ ಪಟ್ಟಿಗೆ ಬೆಂಗಳೂರು, ಹೈದರಾಬಾದ್, ಪುಣೆ, ಅಹಮದಾಬಾದ್, ಜೈಪುರ, ನೋಯ್ಡಾ, ಗುರ್ಗಾಂವ್ ಕೂಡ ಸೇರಿಸಬೇಕು ಎಂಬ ಬೇಡಿಕೆ ಇದೆ.

ಕೆಲಸ ಬದಲಾಯಿಸುವವರಿಗಾಗಿ

ಕೆಲಸ ಬದಲಾಯಿಸುವವರಿಗಾಗಿ

ಕೆಲವೊಮ್ಮೆ ಕೆಲಸ ಬದಲಾಯಿಸುವ ನೌಕರರು ನೋಟಿಸ್ ಅವಧಿ ಮುಗಿಸದಿದ್ದಲ್ಲಿ ಒಂದಷ್ಟು ಹಣವನ್ನು ಸಂಸ್ಥೆಗೆ ದಂಡ ರೂಪದಲ್ಲಿ ಕಟ್ಟಬೇಕಾಗುತ್ತದೆ. ಆದರೆ ಇದಕ್ಕೆ ಆದಾಯ ತೆರಿಗೆ ವಿನಾಯಿತಿ ಸಿಗುವುದಿಲ್ಲ. ಹೀಗಾಗಿ ಇತ್ತೀಚೆಗೆ ಆದಾಯ ತೆರಿಗೆ ನ್ಯಾಯಾಧೀಕರಣ ಉದ್ಯೋಗಿ ತಾನು ಪಡೆದ ಸಂಬಳಕ್ಕೆ ಮಾತ್ರ ತೆರಿಗೆ ಪಾವತಿ ಮಾಡಬೇಕು ಎಂದು ಹೇಳಿರುವುದರಿಂದ ಕಾಯ್ದೆಯ ಸೆಕ್ಷನ್ 16ಕ್ಕೆ ತಿದ್ದುಪಡಿ ಮಾಡಬೇಕಾಗಿದೆ.

 ರಜೆಯಲ್ಲಿನ ಪ್ರಯಾಣ ಭತ್ಯೆ (ಎಲ್ ಟಿಸಿ)

ರಜೆಯಲ್ಲಿನ ಪ್ರಯಾಣ ಭತ್ಯೆ (ಎಲ್ ಟಿಸಿ)

4 ವರ್ಷದಲ್ಲಿ ಉದ್ಯೋಗಿಯು ಪ್ರಯಾಣ ಮಾಡಿದ ಭಾರತದ ದೇಶದೊಳಗಿನ ಎರಡು ಪ್ರಯಾಣಗಳಿಗೆ ತೆರಿಗೆ ವಿನಾಯಿತಿ ಸಿಗಲಿದೆ. ಇದನ್ನು ವರ್ಷಕ್ಕೆ ಒಂದು ಪ್ರಯಾಣಕ್ಕೆ ಹೆಚ್ಚಿಸಬೇಕು ಎಂಬುದು ತೆರಿಗೆ ತಜ್ಞರ ಅಭಿಮತವಾಗಿದೆ.

ಶಿಕ್ಷಣ ವೆಚ್ಚಗಳ ಮೇಲೆ ತೆರಿಗೆ ವಿನಾಯಿತಿ

ಶಿಕ್ಷಣ ವೆಚ್ಚಗಳ ಮೇಲೆ ತೆರಿಗೆ ವಿನಾಯಿತಿ

ಸದ್ಯದ ಕಾನೂನು ಪ್ರಕಾರ ಗರಿಷ್ಠ ಇಬ್ಬರು ಮಕ್ಕಳ ತಿಂಗಳ ಶೈಕ್ಷಣಿಕ ವೆಚ್ಚ 100 ರೂ. ಹಾಗೂ ಹಾಸ್ಟೆಲ್ ವೆಚ್ಚ 300 ರೂ. ಗಳಿಗೆ ತೆರಿಗೆ ವಿನಾಯಿತಿ ಸಿಗಲಿದೆ. ಆದರೆ ಸದ್ಯ ಈ ದರಗಳು ಎಲ್ಲೂ ಇಲ್ಲದೇ ಇರುವುದರಿಂದ ಈ ವೆಚ್ಚಗಳ ಮಿತಿಯನ್ನು ಏರಿಕೆ ಮಾಡಬಹುದು ಎಂಬ ನಿರೀಕ್ಷೆ ಇದೆ.

English summary
Finance Minister Arun Jaitley reducing the tax rate for individuals from 10% to 5% falling in the tax slab of Rs. 2.5 Lakh to Rs. 5 Lakh in Union budget 2017. Expectations are now set high in the Corporate or Salaried class of taxpayers from Budget 2018.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X