ಸತತ 5ನೇ ತಿಂಗಳು 8 ಕೈಗಾರಿಕಾ ವಲಯದ ಉತ್ಪಾದನೆ ಕುಸಿತ: ಜುಲೈನಲ್ಲಿ ಶೇ.9.6 ರಷ್ಟು ಇಳಿಕೆ
ನವದೆಹಲಿ, ಆಗಸ್ಟ್ 31: ಭಾರತದ ಎಂಟು ಪ್ರಮುಖ ಕೈಗಾರಿಕಾ ವಲಯದ ಉತ್ಪಾದನೆಯು ಸತತ ಐದನೇ ತಿಂಗಳು ಕುಸಿತ ಕಂಡಿದ್ದು, ಜುಲೈ ತಿಂಗಳಲ್ಲಿ ಶೇ.9.6 ರಷ್ಟು ಇಳಿಕೆ ದಾಖಲಾಗಿದೆ.
ಜುಲೈ ತಿಂಗಳಲ್ಲಿ 8 ಪ್ರಮುಖ ಮೂಲಸೌಕರ್ಯ ಕೈಗಾರಿಕೆ ವಲಯಗಳು ಒಟ್ಟಾರೆ ಸೂಚ್ಯಂಕ ಶೇ.119.9 ರಷ್ಟಿದ್ದು, 2019 ಕ್ಕೆ ಹೋಲಿಕೆ ಮಾಡಿದರೆ ಶೇ.9.6 ರಷ್ಟು ಕುಸಿದಿದೆ. 2020-21 ರ ಒಟ್ಟಾರೆ ಬೆಳವಣಿಗೆ ಶೇ.20.5 ರಷ್ಟಿತ್ತು ಎಂದು ಅಂಕಿ-ಅಂಶಗಳ ಮೂಲಕ ತಿಳಿದುಬಂದಿದೆ.
ಜುಲೈ 2019 ರಲ್ಲಿ ಎಂಟು ಪ್ರಮುಖ ವಲಯಗಳ ಉತ್ಪಾದನೆಯು ಶೇಕಡಾ 2.6 ರಷ್ಟು ವಿಸ್ತರಿಸಿದೆ ಎಂದು ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ ಸೋಮವಾರ ಬಿಡುಗಡೆ ಮಾಡಿದ ಅಂಕಿ ಅಂಶಗಳು ತಿಳಿಸಿವೆ

ರಸಗೊಬ್ಬರವನ್ನು ಹೊರತುಪಡಿಸಿ, ಎಲ್ಲಾ ಏಳು ವಲಯಗಳು - ಕಲ್ಲಿದ್ದಲು, ಕಚ್ಚಾ ತೈಲ, ನೈಸರ್ಗಿಕ ಅನಿಲ, ಸಂಸ್ಕರಣಾಗಾರ ಉತ್ಪನ್ನಗಳು, ಉಕ್ಕು, ಸಿಮೆಂಟ್ ಮತ್ತು ವಿದ್ಯುತ್, ಜುಲೈನಲ್ಲಿ ನಕಾರಾತ್ಮಕ ಬೆಳವಣಿಗೆಯನ್ನು ದಾಖಲಿಸಿದೆ.












Click it and Unblock the Notifications