7th Pay Commission: ದೀಪಾವಳಿಗೂ ಮುನ್ನ ಕೇಂದ್ರ ಉದ್ಯೋಗಿಗಳಿಗೆ ಸಿಹಿ ಸುದ್ದಿ, ಡಿಎಗೆ ಅನುಮೋದನೆ!
ದೀಪಾವಳಿಗೂ ಮುನ್ನ ಒಂದು ಕೋಟಿಗೂ ಹೆಚ್ಚು ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರಿಗೆ ಸಂತಸದ ಸುದ್ದಿಯೊಂದು ಹೊರಬಿದ್ದಿದೆ. ತುಟ್ಟಿಭತ್ಯೆ ಹೆಚ್ಚಳಕ್ಕಾಗಿ ಹಲವಾರು ತಿಂಗಳುಗಳಿಂದ ಕಾಯುತ್ತಿದ್ದ ನೌಕರರಿಗೆ ಕೇಂದ್ರ ಸರ್ಕಾರ ಸಿಹಿ ಸುದ್ದಿಯನ್ನು ನೀಡಲು ನಿರ್ಧರಿಸಿದೆ. ಇಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಡಿಎ ಮತ್ತು ಡಿಆರ್ ಶೇ.4ರಷ್ಟು ಹೆಚ್ಚಿಸಲು ನಿರ್ಧರಿಸಲಾಗಿದೆ. ಆದರೆ ಈ ಬಗ್ಗೆ ಇನ್ನೂ ಅಧಿಕೃತ ಘೋಷಣೆ ಹೊರಬಿದ್ದಿಲ್ಲ.
ಇಂದು ಒಂದು ವೇಳೆ ಇದು ಘೋಷಣೆಯಾದರೆ ಜುಲೈ 1, 2023 ರಿಂದ ಉದ್ಯೋಗಿಗಳು ಹೆಚ್ಚಿನ ಡಿಎ ಪ್ರಯೋಜನವನ್ನು ನೌಕರರು ಪಡೆಯುತ್ತಾರೆ. ಪ್ರಸ್ತುತ ಸರ್ಕಾರ ನೌಕರರಿಗೆ 42% ದರದಲ್ಲಿ ತುಟ್ಟಿಭತ್ಯೆಯನ್ನು ನೀಡುತ್ತಿದ್ದು, ಅದು ಈಗ 46% ಕ್ಕೆ ಹೆಚ್ಚಾಗುತ್ತದೆ.

48 ಲಕ್ಷಕ್ಕೂ ಹೆಚ್ಚು ಕೇಂದ್ರ ನೌಕರರಿಗೆ ಪ್ರಯೋಜನ
ಅಕ್ಟೋಬರ್ ತಿಂಗಳಿಗೆ ಹೆಚ್ಚಿಸಿದ ವೇತನದ ಜತೆಗೆ ಮೂರು ತಿಂಗಳ ಬಾಕಿ ವೇತನವನ್ನೂ ನೌಕರರಿಗೆ ನೀಡಲಾಗುವುದು ಎಂದು ಚರ್ಚಿಸಲಾಗಿದೆ. ಸರ್ಕಾರದ ಈ ನಿರ್ಧಾರದಿಂದ ಕೇಂದ್ರ ನೌಕರರಿಗೆ ನೆಮ್ಮದಿ ಸಿಕ್ಕಿದೆ.
ನೌಕರರ ಸಂಘಟನೆ ಶೇ.4ರಷ್ಟು ತುಟ್ಟಿಭತ್ಯೆ ಹೆಚ್ಚಳಕ್ಕೆ ಒತ್ತಾಯಿಸಿತ್ತು. ಇದಕ್ಕೆ ಕೊನೆಗೂ ಜಯ ಸಿಕ್ಕಂತಾಗಿದೆ. ಈ ಹೆಚ್ಚಳದಿಂದ 48 ಲಕ್ಷಕ್ಕೂ ಹೆಚ್ಚು ಕೇಂದ್ರ ನೌಕರರು ಮತ್ತು 65 ಲಕ್ಷ ಪಿಂಚಣಿದಾರರು ಪ್ರಯೋಜನ ಪಡೆಯಲಿದ್ದಾರೆ. ಈ ಕುರಿತು ಸಂಪುಟ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದ್ದು ಇಂದು ಮಧ್ಯಾಹ್ನ 3 ಗಂಟೆ ಸುಮಾರಿಗೆ ಪತ್ರಿಕಾಗೋಷ್ಠಿಯಲ್ಲಿ ಸರ್ಕಾರದಿಂದ ಈ ಕುರಿತು ಪ್ರಕಟಣೆ ಹೊರಡಿಸಲಾಗುವುದು ಎನ್ನಲಾಗುತ್ತಿದೆ.

ಒಮ್ಮೆ ಇದರ ಹೆಚ್ಚಳ ಘೋಷಣೆಯಾದರೆ, ಜುಲೈ 1 ರಿಂದ ಇದು ಜಾರಿಯಾಗುವ ಸಾಧ್ಯತೆಯಿದೆ. ಬಹುನಿರೀಕ್ಷಿತ ಘೋಷಣೆ ಅಕ್ಟೋಬರ್‌ನಲ್ಲಿ ಬರಲಿದೆ ಎಂದು ಭಾವಿಸಲಾಗಿದೆ. ಶೇಕಡಾ 4 ರಷ್ಟು ಡಿಎ ಹೆಚ್ಚಳವು ಕೇಂದ್ರ ಸರ್ಕಾರಿ ನೌಕರರಿಗೆ ಭಾರಿ ವೇತನ ಹೆಚ್ಚಳ ಆಗಲಿದೆ. ಪ್ರಸ್ತುತ ಇರುವ ಡಿಎ 42 ರಿಂದ ಹೆಚ್ಳವು 46 ಕ್ಕೆ ಇರುತ್ತದೆ ಎಂದು ತಿಳಿದು ಬಂದಿದೆ.
ಎಷ್ಟು ಸಂಬಳ ಹೆಚ್ಚಾಗುತ್ತದೆ?
18,000 ರೂ.ಗಳ ಕನಿಷ್ಠ ಮೂಲ ವೇತನ ಹೊಂದಿರುವ ಉದ್ಯೋಗಿಗೆ ಪ್ರಸ್ತುತ 42 ಶೇಕಡಾ ಡಿಎ 7,560 ರೂಪಾಯಿಗಳ ಮಾಸಿಕ ಹೆಚ್ಚಳವನ್ನು ಪಾವತಿಸಲಾಗುತ್ತದೆ. ಒಮ್ಮೆ ಡಿಎ 46 ಪರ್ಸೆಂಟ್ ಹೆಚ್ಚಳವಾದರೆ ಈ ಮಾಸಿಕ ಹೆಚ್ಚಳವು ರೂ 8,640 ಕ್ಕೆ ಏರುತ್ತದೆ.
ಇತ್ತೀಚೆಗೆ ಕರ್ನಾಟಕ ಸರ್ಕಾರಿ ಸಚಿವಾಲಯದ ನೌಕರರ ಸಂಘವು ವೇತನ ಹೆಚ್ಚಳ ಸೇರಿದಂತೆ ಹಲವು ಬೇಡಿಕೆಗಳ ಈಡೇರಿಕೆಗಾಗಿ 7ನೇ ವೇತನ ಆಯೋಗಕ್ಕೆ ಮನವಿ ಸಲ್ಲಿಸಿತ್ತು. ಮಾಜಿ ಮುಖ್ಯ ಕಾರ್ಯದರ್ಶಿ ಕೆ ಸುಧಾಕರ್ ರಾವ್ ಅವರು 7ನೇ ವೇತನ ಆಯೋಗದ ಮುಖ್ಯಸ್ಥರಾಗಿದ್ದು, ನಿವೃತ್ತ ಐಎಎಸ್ ಅಧಿಕಾರಿ ಪಿ ಬಿ ರಾಮಮೂರ್ತಿ, ನಿವೃತ್ತ ಕರ್ನಾಟಕ ರಾಜ್ಯ ಲೆಕ್ಕ ಪರಿಶೋಧನೆ ಮತ್ತು ಲೆಕ್ಕಪತ್ರ ಇಲಾಖೆಯ ಪ್ರಧಾನ ನಿರ್ದೇಶಕ ಶ್ರೀಕಾಂತ್ ಬಿ ವನಹಳ್ಳಿ ಮತ್ತು ಐಎಎಸ್ ಅಧಿಕಾರಿ ಹೆಪ್ಸಿಬಾ ರಾಣಿ ಕೊರ್ಲಪಾಟಿ ಸದಸ್ಯ-ಕಾರ್ಯದರ್ಶಿಗಳಾಗಿದ್ದಾರೆ.












Click it and Unblock the Notifications