ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದಸರಾ ಹಬ್ಬಕ್ಕೆ ನೌಕರರಿಗೆ ತುಟ್ಟಿಭತ್ಯೆ ಹೆಚ್ಚಳದ ಕೊಡುಗೆ ನೀಡಲಿದೆಯಾ ಕೇಂದ್ರ ಸರ್ಕಾರ?

|
Google Oneindia Kannada News

ಕೇಂದ್ರ ಸರ್ಕಾರಿ ನೌಕರರು ಕಾತರದಿಂದ ಕಾಯುತ್ತಿರುವ ತುಟ್ಟಿಭತ್ಯೆ ಹೆಚ್ಚಳಕ್ಕೆ ಸಮಯ ಹತ್ತಿರವಾಗಿದೆ. ಇತ್ತೀಚಿನ ವರದಿಗಳ ಪ್ರಕಾರ ಕೇಂದ್ರ ಸರ್ಕಾರ ತನ್ನ ಉದ್ಯೋಗಿಗಳಿಗೆ ಶೇಕಡ 4 ರಷ್ಟು ಡಿಎ ಹೆಚ್ಚಳ ನೀಡಲಾಗುತ್ತದೆ. ಈ ಮೂಲಕ ಕೇಂದ್ರ ಸರ್ಕಾರಿ ನೌಕರರಿಗೆ ಒಟ್ಟು 38 ಪ್ರತಿಶತ ಡಿಎ ಹೆಚ್ಚಳವಾದಂತಾಗುತ್ತದೆ.

ಇತ್ತೀಚಿನ ಹಣದುಬ್ಬರ ಡೇಟಾವನ್ನು ಆಧರಿಸಿ ಈ ಅಂಕಿಅಂಶವನ್ನು ನಿರೀಕ್ಷಿಸಲಾಗಿದೆ. ಅಖಿಲ-ಭಾರತೀಯ ಗ್ರಾಹಕ ಬೆಲೆ ಸೂಚ್ಯಂಕ (AICPI) 129 ಕ್ಕಿಂತ ಹೆಚ್ಚಿದೆ. ಅಖಿಲ-ಭಾರತೀಯ ಗ್ರಾಹಕ ಬೆಲೆ ಸೂಚ್ಯಂಕ ಡೇಟಾದ ಆಧಾರದ ಮೇಲೆ ತುಟ್ಟಿಭತ್ಯೆ ಹೆಚ್ಚಳವನ್ನು ನಿರ್ಧರಿಸಲಾಗುತ್ತದೆ ಮತ್ತು 2022 ರ ಜನವರಿಯಲ್ಲಿ ಕೇಂದ್ರ ಸರ್ಕಾರಿ ನೌಕರರು ಶೇಕಡ 3ರಷ್ಟು ತುಟ್ಟಿಭತ್ಯೆ ಹೆಚ್ಚಳ ಪಡೆದಿದ್ದರು. ಈಗ ಅದು ಶೇಕಡ 4ಕ್ಕೆ ಹೆಚ್ಚಾಗುತ್ತದೆ.

7th Pay Commission: ಸರ್ಕಾರಿ ನೌಕರರ ಕಾಯುವಿಕೆ ಶೀಘ್ರದಲ್ಲೇ ಅಂತ್ಯ!7th Pay Commission: ಸರ್ಕಾರಿ ನೌಕರರ ಕಾಯುವಿಕೆ ಶೀಘ್ರದಲ್ಲೇ ಅಂತ್ಯ!

ನಿರೀಕ್ಷಿತ ಡಿಎ ಅಂಕಿಅಂಶವನ್ನು ಆಧರಿಸಿದ ಲೆಕ್ಕಾಚಾರಗಳ ಪ್ರಕಾರ, ರೂ 31,550 ರ ಮೂಲ ವೇತನ ಹೊಂದಿರುವ ಉದ್ಯೋಗಿಗಳು ವಾರ್ಷಿಕವಾಗಿ ರೂ 15,144 ಹೆಚ್ಚಳವನ್ನು ಪಡೆಯುತ್ತಾರೆ. ಮತ್ತೊಂದೆಡೆ, ಗರಿಷ್ಠ 56,900 ರೂಗಳ ಮೂಲ ವೇತನವು ವಾರ್ಷಿಕವಾಗಿ ರೂ 27,312 ಹೆಚ್ಚಳವನ್ನು ಪಡೆಯುತ್ತದೆ ಎಂದು ವರದಿಯಾಗಿದೆ.

 ತುಟ್ಟಿಭತ್ಯೆ ಹೆಚ್ಚಳ ಘೋಷಣೆ ಯಾವಾಗ?

ತುಟ್ಟಿಭತ್ಯೆ ಹೆಚ್ಚಳ ಘೋಷಣೆ ಯಾವಾಗ?

ಕೇಂದ್ರ ಉದ್ಯೋಗಿಗಳ ಕಾಯುವಿಕೆ ಮುಂದುವರಿದಿದ್ದು, ಮುಂದಿನ ಸುತ್ತಿನ ಕ್ಯಾಬಿನೆಟ್ ಸಭೆಗಳ ನಂತರ ಘೋಷಣೆ ಮಾಡಬಹುದೆಂದು ಇತ್ತೀಚಿನ ವರದಿಗಳು ಖಚಿತಪಡಿಸಿವೆ.

ಸೆಪ್ಟೆಂಬರ್ ಅಂತ್ಯದಲ್ಲಿ ನವರಾತ್ರಿಯ ಸಂಭ್ರಮ ಆರಂಭವಾಗಲಿದ್ದು, ಆ ವೇಳೆಗೆ ಅಧಿಕೃತ ಘೋಷಣೆ ಬರಬಹುದು. ಕೇಂದ್ರ ಸರ್ಕಾರಿ ನೌಕರರು ತಮ್ಮ ಸೆಪ್ಟೆಂಬರ್ ಪಾವತಿಗಳೊಂದಿಗೆ ಡಿಎ ಹೆಚ್ಚಳದ ಪ್ರಯೋಜನಗಳನ್ನು ಪಡೆಯಬಹುದು ಎಂದು ವರದಿಯಾಗಿದೆ.

ಸ್ವಾತಂತ್ರೋತ್ಸವ ಉಡುಗೊರೆ: ಈ ರಾಜ್ಯಗಳಲ್ಲಿ ಸರ್ಕಾರಿ ನೌಕರರ ತುಟ್ಟಿ ಭತ್ಯೆ ಹೆಚ್ಚಳಸ್ವಾತಂತ್ರೋತ್ಸವ ಉಡುಗೊರೆ: ಈ ರಾಜ್ಯಗಳಲ್ಲಿ ಸರ್ಕಾರಿ ನೌಕರರ ತುಟ್ಟಿ ಭತ್ಯೆ ಹೆಚ್ಚಳ

 ಡಿಎ ಬಾಕಿ ಬಿಡುಗಡೆ ಬಗ್ಗೆ ಕೇಂದ್ರದ ಸ್ಪಂದನೆ ಇಲ್ಲ

ಡಿಎ ಬಾಕಿ ಬಿಡುಗಡೆ ಬಗ್ಗೆ ಕೇಂದ್ರದ ಸ್ಪಂದನೆ ಇಲ್ಲ

18 ತಿಂಗಳ ಅವಧಿಯ ಡಿಎ ಬಾಕಿ ಬಿಡುಗಡೆ ಮಾಡಬೇಕೆಂಬ ಕೇಂದ್ರ ಸರ್ಕಾರಿ ನೌಕರರ ಬಹುಕಾಲದ ಬೇಡಿಕೆಗೆ ಇನ್ನೂ ಯಾವುದೇ ಸ್ಪಂದನೆ ದೊರೆತಿಲ್ಲ. ಆದರೆ, ಕೇಂದ್ರ ನೌಕರರು ತಮ್ಮ ಬೇಡಿಕೆ ಮುಂದುವರೆಸಿದ್ದಾರೆ.

ಕೋವಿಡ್-19 ಸಾಂಕ್ರಾಮಿಕ ರೋಗದ ಉಲ್ಬಣದ ಮಧ್ಯೆ ಜನವರಿ 2020 ಮತ್ತು ಜೂನ್ 2021 ರ ನಡುವೆ ತುಟ್ಟಿಭತ್ಯೆ ಹೆಚ್ಚಳವನ್ನು ಸ್ಥಗಿತಗೊಳಿಸಲಾಗಿದೆ. ಸ್ಥಗಿತಗೊಂಡ ಡಿಎ ಬಾಕಿ ನೀಡುವ ಬಗ್ಗೆ ಯಾವುದೇ ನಿಲುವು ಇಲ್ಲ ಎಂದು ಹೇಳಲಾಗಿದೆ.

 ನೌಕರರಿಂದ ಸುಪ್ರೀಂಕೋರ್ಟ್ ತೀರ್ಪಿನ ಉಲ್ಲೇಖ

ನೌಕರರಿಂದ ಸುಪ್ರೀಂಕೋರ್ಟ್ ತೀರ್ಪಿನ ಉಲ್ಲೇಖ

ನೌಕರರು ತಮ್ಮ ನಿಲುವಿನಲ್ಲಿ ದೃಢವಾಗಿದ್ದಾರೆ. ಡಿಎ ಸ್ಥಗಿತ ಅವಧಿಯ ಬಾಕಿಯನ್ನು ಪರಿಗಣಿಸಬೇಕು ಎಂದು ಜೆಸಿಎಂ ರಾಷ್ಟ್ರೀಯ ಮಂಡಳಿ ಅಭಿಪ್ರಾಯಪಟ್ಟಿದೆ ಎಂದು ಸಿಬ್ಬಂದಿ ವಿಭಾಗ ಕಾರ್ಯದರ್ಶಿ ಶಿವ ಗೋಪಾಲ್ ಮಿಶ್ರಾ ಈ ಹಿಂದೆ ತಿಳಿಸಿದ್ದರು. ಸರಕಾರ ಸಂಧಾನದ ಮೂಲಕ ಇತ್ಯರ್ಥಕ್ಕೆ ಮುಂದಾಗಬೇಕು ಎಂಬುದು ನೌಕರರು ನಿರೀಕ್ಷೆ ಮಾಡಿದ್ದಾರೆ ಎಂದು ಹೇಳಿದ್ದಾರೆ.

ಇತ್ತೀಚಿನ ವರದಿಗಳ ಪ್ರಕಾರ, ಜೆಸಿಎಂ ಕಾರ್ಯದರ್ಶಿ ಸರ್ಕಾರಕ್ಕೆ ಇತ್ತೀಚಿನ ಅಧಿಕೃತ ಪತ್ರದಲ್ಲಿ ಸುಪ್ರೀಂಕೋರ್ಟ್ ತೀರ್ಪನ್ನು ಉಲ್ಲೇಖಿಸಿದ್ದಾರೆ. ಡಿಎ ವೇತನದ ಒಂದು ಭಾಗವಾಗಿದೆ ಮತ್ತು ವೇತನದಲ್ಲಿ ಯಾವುದೇ ವಿಳಂಬವು ಬಡ್ಡಿಯನ್ನು ಪಾವತಿಸಬೇಕಾಗುತ್ತದೆ ಮತ್ತು ಅದು ನೌಕರರ ಹಕ್ಕು ಎಂದು ಸೂಚಿಸಲಾಗಿದೆ. ಬಾಕಿ ಪಾವತಿ ವಿಧಾನದ ಬಗ್ಗೆ ಸರ್ಕಾರದೊಂದಿಗೆ ಚರ್ಚಿಸಲು ನೌಕರರ ಕಡೆಯವರು ಸಿದ್ಧರಾಗಿದ್ದಾರೆ ಎಂದು ವರದಿಯಾಗಿದೆ.

 ಕೇಂದ್ರ ಸರ್ಕಾರಿ ನೌಕರರ ವೇತನ ಎಷ್ಟು ಹೆಚ್ಚಳ?

ಕೇಂದ್ರ ಸರ್ಕಾರಿ ನೌಕರರ ವೇತನ ಎಷ್ಟು ಹೆಚ್ಚಳ?

7ನೇ ವೇತನ ಆಯೋಗದ ಪ್ರಕಾರ ತುಟ್ಟಿಭತ್ಯೆ(ಡಿಎ) ಶೇಕಡಾ 4 ರಷ್ಟು ಹೆಚ್ಚಾದರೆ ವೇತನದ ಲೆಕ್ಕಾಚಾರ ಹೀಗಿರಲಿದೆ. ಒಂದು ವೇಳೆ ನೌಕರನ ಮೂಲ ವೇತನ 56,900 ರುಪಾಯಿ ಆಗಿದ್ದರೆ ಪ್ರಸ್ತುತ ನೌಕರ 19,346 ರುಪಾಯಿ ತುಟ್ಟಿಭತ್ಯೆ ಪಡೆಯುತ್ತಿರುತ್ತಾರೆ. ಶೇಕಡ 4 ರಷ್ಟು ತುಟ್ಟಿಭತ್ಯೆ ಹೆಚ್ಚಳದ ನಂತರ 21,622 ರುಪಾಯಿ ಪಡೆಯಲಿದ್ದಾರೆ.

ಶೇಕಡಾ 4 ರಷ್ಟು ತುಟ್ಟಿಭತ್ಯೆ ಹೆಚ್ಚಳದಿಂದ ವೇತನ 2,276 ರೂಪಾಯಿ ಹೆಚ್ಚಳವಾಗಲಿದೆ. ವಾರ್ಷಿಕವಾಗಿ ವೇತನ 27,312 ರೂಪಾಯಿ ಹೆಚ್ಚಳವಾಗಲಿದೆ. ಸುಮಾರು 50 ಲಕ್ಷ ಕೇಂದ್ರ ಸರ್ಕಾರದ ನೌಕರರು ಪ್ರಯೋಜನ ಪಡೆಯಲಿದ್ದಾರೆ.

English summary
As per latest reports, the central employees will likely be awarded a 4 percent hike this time, taking their overall DA figure to 38 percent. The wait is ongoing for central employees and latest reports suggest that the announcement could be made after the next round of cabinet meetings. The official announcement could come around the end of next month when the festival of Navratri begins in late September.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X