7th Pay Commission: ಸರ್ಕಾರಿ ನೌಕರರಿಗೆ ಭತ್ಯೆಗಳು 25% ರಷ್ಟು ಏರಿಕೆ; ಅಂಕಿಅಂಶ, ವಿವರ
ಕೇಂದ್ರ ಸರ್ಕಾರಿ ನೌಕರರಿಗೆ ಜನವರಿ 1, 2024 ರಿಂದ 7ನೇ ವೇತನ ಆಯೋಗದ ಶಿಫಾರಸ್ಸಿನಂತೆ ತುಟ್ಟಿಭತ್ಯೆಯನ್ನು ಶೇಕಡಾ 50 ರಷ್ಟು ಹೆಚ್ಚಸಿದ ಜೊತೆಗೆ ಹಲವಾರು ಭತ್ಯೆಗಳ ಮಿತಿ ಸ್ವಯಂಚಾಲಿತವಾಗಿ ಶೇಕಡಾ 25 ರಷ್ಟು ಹೆಚ್ಚಳ ಮಾಡಲಾಗಿದೆ. ತುಟ್ಟಿಭತ್ಯೆ ಹೆಚ್ಚಳ, ಮಕ್ಕಳ ಶಿಕ್ಷಣ ಭತ್ಯೆ (ಸಿಇಎ), ಹಾಸ್ಟೆಲ್ ಸಬ್ಸಿಡಿ, ಸರಕಾರಿ ನೌಕರರ ದಿವ್ಯಾಂಗ ಮಕ್ಕಳಿಗೆ ಸಿಇಎ, ವಿಕಲಚೇತನ ಮಹಿಳೆಯರಿಗೆ ವಿಶೇಷ ಮಕ್ಕಳ ಆರೈಕೆ ಭತ್ಯೆಯಲ್ಲಿ ಹೆಚ್ಚಳವಾಗಲಿದೆ.
ಡಿಎ ಹೆಚ್ಚಳದ ಬಳಿಕ ಸಿಬ್ಬಂದಿ, ಸಾರ್ವಜನಿಕ ಕುಂದುಕೊರತೆಗಳು ಮತ್ತು ಪಿಂಚಣಿಗಳ ಸಚಿವಾಲಯವು ಜನವರಿ 1, 2024 ರಿಂದ ಕೆಲವು ಭತ್ಯೆಗಳನ್ನು ಶೇಕಡಾ 25 ರಷ್ಟು ಹೆಚ್ಚಿಸುವ ಬಗ್ಗೆ ಸ್ಪಷ್ಟೀಕರಣ ನೀಡಿದೆ.

ನಿಯಮಗಳ ಪ್ರಕಾರ, "ಮಕ್ಕಳ ಶಿಕ್ಷಣ ಭತ್ಯೆ ಮತ್ತು ಹಾಸ್ಟೆಲ್ ಸಬ್ಸಿಡಿ ಮಿತಿಗಳನ್ನು ಪ್ರತಿ ಬಾರಿ ಪರಿಷ್ಕೃತ ವೇತನ ರಚನೆಯ ಮೇಲಿನ ತುಟ್ಟಿ ಭತ್ಯೆಯು ಶೇಕಡಾ 50 ರಷ್ಟು ಹೆಚ್ಚಾದಾಗಲೆಲ್ಲಾ ಸ್ವಯಂಚಾಲಿತವಾಗಿ ಶೇಕಡಾ 25 ರಷ್ಟು ಏರಿಸಲಾಗುತ್ತದೆ" ಎಂದು ಸಚಿವಾಲಯ ಮಾಹಿತಿ ನೀಡಿದೆ.
ಡಿಎಯನ್ನು ಶೇಕಡಾ 50 ಕ್ಕೆ ಹೆಚ್ಚಿಸಿದ ನಂತರ ಕೇಂದ್ರ ಸರ್ಕಾರಿ ನೌಕರರಿಗೆ ಪಾವತಿಸಬೇಕಾದ ಮಕ್ಕಳ ಶಿಕ್ಷಣ ಭತ್ಯೆ (ಸಿಇಎ) ಮತ್ತು ಹಾಸ್ಟೆಲ್ ಸಬ್ಸಿಡಿ ಸ್ವೀಕಾರಾರ್ಹ ಮೊತ್ತಕ್ಕೆ ಸಂಬಂಧಿಸಿದಂತೆ ವಿವಿಧ ವಲಯಗಳಿಂದ ಹಲವಾರು ಪ್ರಶ್ನೆಗಳನ್ನು ಸ್ವೀಕರಿಸಲಾಗುತ್ತಿದೆ ಎಂದು ಸಚಿವಾಲಯ ಹೇಳಿದೆ. ಹಾಗಾದರೆ ಇತರೆ ಭತ್ಯೆ ಹೆಚ್ಚಳದ ಲೆಕ್ಕಾಚಾರ ಹೇಗಿದೆ ತಿಳಿಯಿರಿ.
ಮಕ್ಕಳ ಶಿಕ್ಷಣ ಭತ್ಯೆ ಮತ್ತು ಹಾಸ್ಟೆಲ್ ಸಹಾಯಧನ
ಮಕ್ಕಳ ಶಿಕ್ಷಣ ಭತ್ಯೆ ಮರುಪಾವತಿಯ ಮೊತ್ತವು ತಿಂಗಳಿಗೆ ರೂ 2,812.50 ಆಗಿರುತ್ತದೆ. ಮತ್ತು ಹಾಸ್ಟೆಲ್ ಸಬ್ಸಿಡಿ ಮೊತ್ತವು ತಿಂಗಳಿಗೆ ರೂ 8,437.50 ಆಗಿರುತ್ತದೆ. ಸರ್ಕಾರಿ ನೌಕರನು ಮಾಡುವ ನಿಜವಾದ ವೆಚ್ಚಗಳನ್ನು ಲೆಕ್ಕಿಸದೆ ಈ ಎರಡೂ ಮೊತ್ತಗಳನ್ನು ಮಿತಿಗೊಳಿಸಲಾಗುತ್ತದೆ.
ಸಚಿವಾಲಯವು ಸರ್ಕಾರಿ ನೌಕರರ ದಿವ್ಯಾಂಗ ಮಕ್ಕಳಿಗೆ ಮಕ್ಕಳ ಶಿಕ್ಷಣ ಭತ್ಯೆ (CEA) ಮರುಪಾವತಿ ಮೊತ್ತವನ್ನು ಸಾಮಾನ್ಯ ದರಕ್ಕಿಂತ ಎರಡು ಪಟ್ಟು ನಿಗದಿಪಡಿಸಿದೆ. ಸರ್ಕಾರಿ ನೌಕರನು ತಮ್ಮ ದಿವ್ಯಾಂಗ್ ಮಗುವಿಗೆ ಶಿಕ್ಷಣ ನೀಡಲು ಮಾಡುವ ನಿಜವಾದ ವೆಚ್ಚವನ್ನು ಲೆಕ್ಕಿಸದೆಯೇ ತಿಂಗಳಿಗೆ 5,625 ರೂ. ನಿಗದಿಪಡಿಸಲಾಗಿದೆ.
ಅಂಗವಿಕಲ ಮಹಿಳೆಯರಿಗೆ ಮಕ್ಕಳ ಆರೈಕೆಗಾಗಿ ವಿಶೇಷ ಭತ್ಯೆ
ಅಂಗವಿಕಲ ಮಹಿಳೆಯರಿಗೆ ಶಿಶುಪಾಲನಾ ವಿಶೇಷ ಭತ್ಯೆಯ ದರಗಳನ್ನು ಈ ಇಲಾಖೆಯ ಕಛೇರಿಯ ಜ್ಞಾಪಕ ಪತ್ರದಲ್ಲಿ ಉಲ್ಲೇಖಿಸಲಾದ ಇತರ ಷರತ್ತುಗಳಿಗೆ ಒಳಪಟ್ಟು ತಿಂಗಳಿಗೆ 3,750 ರೂ.ಗಳಿಗೆ ಪರಿಷ್ಕರಿಸಲಾಗಿದೆ.
ಈ ಪರಿಷ್ಕರಣೆಗಳು ಜನವರಿ 1, 2024 ರಿಂದ ಜಾರಿಗೆ ಬರುತ್ತವೆ, ಅಂದರೆ ಬಾಕಿ ಪಾವತಿಸಲಾಗುವುದು ಎಂದು ಇಲಾಖೆ ಮಾಹಿತಿ ನೀಡಿದೆ.












Click it and Unblock the Notifications