ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರಿ ಮೊತ್ತದ ಸಾಲಗಾರರ ಹೆಸರು ಬಹಿರಂಗ ಪಡಿಸಿ : ಸುಪ್ರೀಂಕೋರ್ಟ್

ಸುಮಾರು 57 ಮಂದಿ ಸುಸ್ತಿದಾರರು 85 ಸಾವಿರ ಕೋಟಿ ರೂಪಾಯಿ ಬಾಕಿ ಇರಿಸಿಕೊಂಡಿರುವ ಮಾಹಿತಿಯುಳ್ಳ ಮುಚ್ಚಿದ ಲಕೋಟೆಯನ್ನು ಸುಪ್ರೀಂಕೋರ್ಟಿಗೆ ಭಾರತೀಯ ರಿಸರ್ವ್ ಬ್ಯಾಂಕ್ ಸಲ್ಲಿಸಿದೆ.

By Mahesh
|
Google Oneindia Kannada News

ನವದೆಹಲಿ, ಅಕ್ಟೋಬರ್ 25: ಸುಮಾರು 57 ಮಂದಿ ಸುಸ್ತಿದಾರರು 85 ಸಾವಿರ ಕೋಟಿ ರೂಪಾಯಿ ಬಾಕಿ ಇರಿಸಿಕೊಂಡಿರುವ ಮಾಹಿತಿಯುಳ್ಳ ಮುಚ್ಚಿದ ಲಕೋಟೆಯನ್ನು ಸುಪ್ರೀಂಕೋರ್ಟಿಗೆ ಭಾರತೀಯ ರಿಸರ್ವ್ ಬ್ಯಾಂಕ್ ಸಲ್ಲಿಸಿದೆ.

ಈ ಪೈಕಿ 500 ಕೋಟಿ ರೂಪಾಯಿಗಿಂತ ಹೆಚ್ಚು ಮೊತ್ತದ ಸುಸ್ತಿ ಬಾಕಿ ಹೊಂದಿರುವವರ ವ್ಯಕ್ತಿ ಅಥವಾ ಸಂಸ್ಥೆಗಳ ಹೆಸರನ್ನು ಏಕೆ ಬಹಿರಂಗಗೊಳಿಸಬಾರದು ಎಂದು ಆರ್ ಬಿಐಗೆ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಟಿಎಸ್ ಠಾಕೂರ್ ಪ್ರಶ್ನಿಸಿದ್ದಾರೆ.

57 defaulters owe banks a whopping Rs 85,000 cr: RBI to SC

ಫೆಬ್ರವರಿ 16ರಂದು ಸುಪ್ರೀಂಕೋರ್ಟ್ ನಿರ್ದೇಶನದಂತೆ ಆರ್‌ಬಿಐ ಈ ಪಟ್ಟಿ ಸಲ್ಲಿಸಿತ್ತು. ಮುಖ್ಯ ನ್ಯಾಯಮೂರ್ತಿ ಟಿ.ಎಸ್.ಠಾಕೂರ್ ಹಾಗೂ ನ್ಯಾಯಮೂರ್ತಿಗಳಾದ ಡಿ.ವೈ.ಚಂದ್ರಚೂಡ್ ಹಾಗೂ ಎಲ್.ಎನ್.ರಾವ್ ಅವರು ಸುದೀರ್ಘ ಚರ್ಚೆ ಬಳಿಕ 57 ಸಾಲಗಾರರ ಪಟ್ಟಿಯನ್ನು ಬಹಿರಂಗಪಡಿಸಿ, ಇವರು ಪಾವತಿಸಬೇಕಾಗಿರುವ ಸುಸ್ತಿಸಾಲ 85 ಸಾವಿರ ಕೋಟಿ ರು ಎಂದು ಪ್ರಕಟಿಸಿದ್ದಾರೆ. ಆದರೆ, ಸಾಲಗಾರರ ಹೆಸರು ಬಹಿರಂಗವಾಗಿಲ್ಲ.[62,250 ಕೋಟಿ ರು ಕಪ್ಪುಹಣ ಘೋಷಣೆ: ಅರುಣ್ ಜೇಟ್ಲಿ]

ಅರ್ಜಿದಾರ ಸ್ವಯಂಸೇವಾ ಸಂಸ್ಥೆಯ ವಕೀಲ ಪ್ರಶಾಂತ್ ಭೂಷಣ್ ಅವರು, ಈ ಹೆಸರುಗಳನ್ನು ಬಹಿರಂಗಪಡಿಸುವಂತೆ ಒತ್ತಾಯಿಸುತ್ತಲೇ ಇದ್ದಾರೆ. ಇದೇ ರೀತಿ ಆರ್ ಟಿಐ ಕಾರ್ಯಕರ್ತರು ಮನವಿ ಸಲ್ಲಿಸಿದರೆ, ದೇಶದ ಹಿತದೃಷ್ಟಿಯಿಂದ ಹೆಸರುಗಳನ್ನು ಬಹಿರಂಗಪಡಿಸಬೇಕಾಗುತ್ತದೆ ಎಂದು ಆರ್ ಬಿಐಗೆ ಸೂಚಿಸಲಾಗಿದೆ.

ಕನಿಷ್ಟ ಸುಸ್ತಿ ಮೊತ್ತವನ್ನು 500 ಕೋಟಿ ರುಗಳಿಗಿಂತ ಕಡಿಮೆ ಮಾಡಿದರೆ, ಸುಸ್ತಿ ಪ್ರಮಾಣ 1 ಲಕ್ಷ ಕೋಟಿಯನ್ನು ಮೀರಲಿದೆ. ಈ ಸುಸ್ತಿದಾರರ ಪಟ್ಟಿಯನ್ನು ಏಕೆ ಬಹಿರಂಗಪಡಿಸಬಾರದು? ಎಂದು ನ್ಯಾಯಪೀಠ, ಭಾರತೀಯ ರಿಸರ್ವ್ ಬ್ಯಾಂಕನ್ನು ಪ್ರಶ್ನಿಸಿದೆ. ಗೌಪ್ಯತೆಯ ಹಿನ್ನೆಲೆಯಲ್ಲಿ ಈ ಹೆಸರುಗಳನ್ನು ಬಹಿರಂಗಪಡಿಸಬಾರದು ಎನ್ನುವುದು ಆರ್‌ಬಿಐ ನಿಲುವಾಗಿದೆ.

English summary
Only 57 borrowers have defaulted on bank loans worth a whopping Rs 85,000 crore. The Supreme Court said this after perusing a report submitted by the Reserve Bank of India (RBI) about persons who have taken loans worth over Rs 500 crore and defaulted
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X