• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಮಲ್ಯ, ನೀರವ್ ಸೇರಿ 51 ಮಂದಿ ಪರಾರಿ, 17 ಸಾವಿರ ಕೋಟಿ ಬಾಕಿ!

|

ನವದೆಹಲಿ, ಡಿಸೆಂಬರ್ 04: ಉದ್ಯಮಿಗಳಾದ ವಿಜಯ್ ಮಲ್ಯ, ನೀರವ್ ಮೋದಿ ಸೇರಿದಂತೆ ಸುಮಾರು 51 ಮಂದಿ ದೇಶದಿಂದ ಪರಾರಿಯಾಗಿದ್ದು, ಸರಿ ಸುಮಾರು 17, 900 ಕೋಟಿ ರು ಮೊತ್ತ ಬಾಕಿ ಪಾವತಿಸಬೇಕಿದೆ ಎಂದು ಸಂಸತ್ತಿನಲ್ಲಿ ತಿಳಿಸಲಾಗಿದೆ.

ವಿತ್ತ ಸಚಿವಾಲಯದ ರಾಜ್ಯ ಸಚಿವ ಅನುರಾಗ್ ಠಾಕೂರ್ ಅವರು ಈ ಕುರಿತಂತೆ ರಾಜ್ಯಸಭೆಯಲ್ಲಿ ಲಿಖಿತ ಉತ್ತರ ನೀಡಿ, ವಿವಿಧ ರೀತಿಯಲ್ಲಿ ಆರ್ಥಿಕ ಅಪರಾಧ ಎಸಗಿ ದೇಶಭ್ರಷ್ಟ ಎನಿಸಿಕೊಂಡಿರುವವರ ಪಟ್ಟಿಯನ್ನು ನೀಡಿದರು.

SPG ಪಾಸ್: ರಾಜ್ಯಸಭೆಯಲ್ಲಿ ರಗಡ್ ಗಲಾಟೆ, ಕಾಂಗ್ರೆಸ್ ಸಭಾತ್ಯಾಗ!SPG ಪಾಸ್: ರಾಜ್ಯಸಭೆಯಲ್ಲಿ ರಗಡ್ ಗಲಾಟೆ, ಕಾಂಗ್ರೆಸ್ ಸಭಾತ್ಯಾಗ!

ಕೇಂದ್ರ ತನಿಖಾ ಸಂಸ್ಥೆ ಸಿಬಿಐ ನೀಡಿರುವ ಮಾಹಿತಿ ಪ್ರಕಾರ 51 ಮಂದಿ ಮೇಲೆ 66ಕ್ಕೂ ಅಧಿಕ ಪ್ರಕರಣಾಗಳಿವೆ. ಭಾರತ ತೊರೆದು ಬೇರೆ ದೇಶಗಳಲ್ಲಿ ಆಶ್ರಮ ಪಡೆದುಕೊಂಡಿದ್ದಾರೆ. ಈ ಎಲ್ಲಾ ವ್ಯಕ್ತಿಗಳಿಂದ ಸರ್ಕಾರಕ್ಕೆ ಅಂದಾಜು 17,947.11 ಕೋಟಿ ರು ಬಾಕಿ ಮೊತ್ತ ಸಿಗಬೇಕಿದೆ ಎಂದು ಸಚಿವರು ಹೇಳಿದರು.

ಸರ್ಕಾರಿ ಸ್ವಾಮ್ಯದ ಬ್ಯಾಂಕುಗಳು ಅನುತ್ಪಾದಕ ಆಸ್ತಿಗಳನ್ನು ಗುರುತಿಸತೊಡಗಿದ್ದು, ನಷ್ಟದ ಮೊತ್ತವನ್ನು ಅಂದಾಜಿಸಲಾಗುತ್ತಿದೆ ಎಂದರು.

ಜಾರಿ ನಿರ್ದೇಶನಾಲಯ ಹಾಗೂ ಸಿಬಿಐ ಈ ಎಲ್ಲಾ ಪರಾರಿಯಾದವರ ವಿರುದ್ದ ಪ್ರಕರಣ ದಾಖಲಿಸಿಕೊಂಡು ಭಾರತ ಹಾಗೂ ವಿದೇಶದ ನ್ಯಾಯಾಲಯಗಳಲ್ಲಿ ಕಾನೂನು ಹೋರಾಟ ನಡೆಸಿವೆ. ಇದಲ್ಲದೆ ಕೇಂದ್ರ ಪರೋಕ್ಷ ತೆರಿಗೆ ಹಾಗೂ ಸುಂಕ ಬೋರ್ಡ್ ಕೂಡಾ 6 ಮಂದಿಯನ್ನು ಆರ್ಥಿಕ ಅಪರಾಧಿಗಳು ಎಂದು ಗುರುತಿಸಿದ್ದು, ದೇಶದಿಂದ ಅಕ್ರಮವಾಗಿ ಪರಾರಿಯಾಗಿದ್ದಾರೆ.

ವಿದೇಶದಿಂದ ಆರೋಪಿಗಳನ್ನು ಕರೆ ತರುವ ಪ್ರಕ್ರಿಯೆ ಜಾರಿಯಲ್ಲಿದ್ದು, ಹಲವರಿಗೆ ಇಂಟರ್ ಪೋಲ್ ನಿಂದ ರೆಡ್ ಕಾರ್ನರ್ ನೋಟಿಸ್ ನೀಡಲಾಗಿದೆ. ಸಿಬಿಐಸಿಯಿಂದ ಎರಡು, ಜಾರಿ ನಿರ್ದೇಶನಾಲಯದಿಂದ 8 ಮಂದಿಯನ್ನು ಭಾರತಕ್ಕೆ ಕರೆ ತರಲು ಮನವಿ ಸಲ್ಲಿಸಲಾಗಿದೆ ಎಂದು ತಿಳಿಸಿದರು.

English summary
A total amount of Rs 17,900 crore was defrauded by 51 absconders, who have run away from the country, the government informed the Parliament on Tuesday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X