ಈ ಸರಣಿ ಸಂಖ್ಯೆಯ ವಿಶೇಷ ನೋಟುಗಳಿದ್ದರೆ ನೀವು ಶ್ರೀಮಂತರಾಗುವುದು ಫಿಕ್ಸ್!
ಕೇವಲ 5 ರೂಪಾಯಿಯ ನೋಟು ನಿಮ್ಮ ಜೀವನವನ್ನೇ ಬದಲಾಯಿಸಬಲ್ಲದು. ಹೌದು ಐದು ರೂಪಾಯಿ ಅಂತ ಮಾತ್ರವಲ್ಲ ಕೆಲವು ವಿಶೇಷ ಸಂಖ್ಯೆಗಳ ನೋಟುಗಳಿದ್ದರೆ ನೀವು ಕೋಟ್ಯಾಧಿಪತಿಗಳಾಗುವುದು ಗ್ಯಾರಂಟಿ. 5 ರೂಪಾಯಿ ನೋಟು ಹಾಗೂ ಸರಣಿ ಸಂಖ್ಯೆ ಇರುವ ನೋಟುಗಳು ಸಿಕ್ಕರೆ ಅದನ್ನು ಜೋಪಾನ ಮಾಡಿ ಇರಿಸಿ. ಕೆಲವು ಸಣ್ಣ ನೋಟು ಅಥವಾ ಸಣ್ಣ ಮೊತ್ತ ನಿಮಗೆ ಲಾಟರಿ ತರ ಸಿಕ್ಕು ನೀವು ದಿನ ಬೆಳಗಾಗುವುದರ ಒಳಗಾಗಿ ಶ್ರೀಮಂತರಾಗಿ ಬಿಡಬಹುದು.
ಹೌದು ಕೆಲವು ಪ್ರಮುಖ ಸಂಖ್ಯೆಗಳಲ್ಲಿ ಕೊನೆಯಾಗುವ ನೋಟುಗಳಿಗೆ ಮಾರುಕಟ್ಟೆಯಲ್ಲಿ ಸಿಕ್ಕಾಪಟ್ಟೆ ಡಿಮ್ಯಾಂಡ್ ಇದೆ. ನೀವು ಐದು ರೂಪಾಯಿ ಅಥವಾ ಕೆಲವೊಂದು ನೋಟುಗಳನ್ನು ಇಟ್ಟುಕೊಂಡಿದ್ದರೆ ಲಾಭ ಅಂತಲೇ ಲೆಕ್ಕ. ಹಾಗಾದರೆ ಯಾವ ನೋಟುಗಳು ನಿಮ್ಮನ್ನು ಶ್ರೀಮಂತ ಮಾಡಬಲ್ಲದು. ಯಾವ ಸರಣಿ ಸಂಖ್ಯೆಯ ನೋಟುಗಳಿಗೆ ಲಾಭವಿದೆ ಎನ್ನುವ ಸಂಪೂರ್ಣ ವಿವರ ಇಲ್ಲಿದೆ.

ಹಳೆಯ ಹಾಗೂ ಕೆಲವೊಂದು ಸರಣಿ ಸಂಖ್ಯೆಯ ನೋಟುಗಳಿಗೆ ಡಿಮ್ಯಾಂಡ್ ಜಾಸ್ತಿನೇ ಇದೆ. ಇತ್ತೀಚಿನ ದಿನಗಳಲ್ಲಿ ಈ ಡಿಮ್ಯಾಂಡ್ ಸ್ವಲ್ಪ ಜಾಸ್ತಿನೇ ಆಗುತ್ತಿದೆ ಎಂದು ಹೇಳಬಹುದು. ನಿಮ್ಮ ಕೈಯಲ್ಲೂ ಈ ಅದೃಷ್ಟದ ನೋಟುಗಳು ಬಂದಿರಬಹುದು. ಇದರ ಸಂಖ್ಯೆ ಮಹತ್ವ ತಿಳಿಯದೆ ನೀವು ಅದನ್ನು ಏನಾದರು ತೆಗೆದುಕೊಳ್ಳುವುದಕ್ಕೆ ಇಲ್ಲವೇ ಯಾರಿಗಾದರೂ ಕೊಟ್ಟಿರಬಹುದು. ಆದರೆ, ಅದೃಷ್ಟ ತರುವ ನೋಟುಗಳು ಹಾಗೂ ಅದರ ಸಂಖ್ಯೆಗಳ ಬಗ್ಗೆ ನೀವು ತಿಳಿದುಕೊಂಡ ಮೇಲೆ ಆ ನೋಟುಗಳನ್ನು ಕಂಡಿತ ಜೋಪಾನ ಮಾಡುತ್ತೀರಿ. ಆ ರೀತಿಯ ಪ್ರಮುಖ ಸಂಖ್ಯೆಯ ನೋಟುಗಳ ವಿವರ ನೋಡೋಣ.
786 ನಂಬರ್ ಇದ್ದರೆ ಲಕ್: ನೋಟುಗಳ ಸಂಖ್ಯೆಯಲ್ಲಿ ಸರಣಿಯಾಗಿ 786 ಅಂತ ಇದ್ದರೆ ನೀವು ಅದೃಷ್ಟವಂತರು. 786 ಎನ್ನುವ ಸಂಖ್ಯೆಯು ಇಸ್ಲಾಂನಲ್ಲಿ ವಿಶೇಷವಾಗಿದೆ. ಅಲ್ಲದೆ ಈ ನೋಟುಗಳನ್ನು ಸಂಗ್ರಹಿಸುವವರಿಗೆ ಹಾಗೂ ನೋಟುಗಳನ್ನು ಹೊಂದಿರುವವರು ಅದೃಷ್ಟವಂತರೇ ಸರಿ ಯಾಕೆಂದರೆ, ಈ ನೋಟುಗಳಿಗೆ ಬೇಡಿಕೆ ಯಾವಾಗಲೂ ಇರುತ್ತದೆ. ಅದರಲ್ಲೂ 5 ರೂಪಾಯಿ ನೋಟಿನಲ್ಲಿ 786 ಎನ್ನುವ ಸಂಖ್ಯೆ ಇದ್ದರೆ ಭಾರೀ ಡಿಮ್ಯಾಂಡ್ ಇದೆ. ಇನ್ನು ಅಚ್ಚರಿ ಏನಿಸಿದರೂ ಈ ನೋಟುಗಳಿಂದ ನೀವು ಲಕ್ಷಾಂತರ ರೂಪಾಯಿ ಗಳಿಸುವುದಕ್ಕೆ ಅವಕಾಶ ಇದೆ.

ಟ್ರ್ಯಾಕ್ಟರ್‌ನಲ್ಲಿ ರೈತ ಕುಳಿತಿರುವ ನೋಟು: ನೋಟುಗಳಲ್ಲಿ ಡಿಮ್ಯಾಂಡ್ ಇರುವ ನೋಟುಗಳಲ್ಲಿ ಟ್ರ್ಯಾಕ್ಟರ್‌ನಲ್ಲಿ ರೈತ ಕುಳಿತಿರುವ ಕೆಲವು 5 ರೂಪಾಯಿ ನೋಟುಗಳು ಸಹ ಪ್ರಮುಖವಾಗಿವೆ. ಈ ನೋಟುಗಳನ್ನು ಹೊಂದಿರುವವರಿಗೂ ಡಿಮ್ಯಾಂಡ್ ಇದೆ. ಬಹಳಷ್ಟು ಜನರಿಗೆ ಈ ರೀತಿಯ ಐಡಿಯಾ ಇರಲ್ಲ.
ಅಪರೂಪದ ನೋಟುಗಳಿವು: ಇನ್ನು ಸರಳ ಎನಿಸುವ ಹಾಗೂ ಕೆಲವೊಂದು ಪ್ರಮುಖ ಸಂಖ್ಯೆಯ ನೋಟುಗಳಿವೆ. ಈ ನೋಟುಗಳಿದ್ದರೆ ನಿಮಗೆ ಲಾಭ ಫಿಕ್ಸ್ ಅಂತಲೇ ಹೇಳಬಹುದು. 123456 ಎನ್ನುವ ಸರಣಿ ಸಂಖ್ಯೆಯಲ್ಲಿ ಇರುವ ನೋಟುಗಳು ನಿಮಗೆ ಯಾವಾಗಲೂ ಲಾಭವನ್ನೇ ತರುತ್ತವೆ. ಆದರೆ, ಈ ರೀತಿಯ ನೋಟುಗಳು ಸಿಗುವುದು ಅಪರೂಪ ಆದರೆ ಸಿಕ್ಕರೆ ಮಾತ್ರ ಭಾರೀ ಲಾಟರಿ ಸಿಕ್ಕಂತೆಯೇ ಲೆಕ್ಕ. ಇದನ್ನು ಆಸ್ತಿಗೆ ಸಮಾನ ಅಂತ ಪರಿಗಣಿಸಲಾಗುತ್ತದೆ.

ನೋಟುಗಳಿಗೆ ಡಿಮ್ಯಾಂಡ್ ಬರುವುದೇ ಆ ನೋಟಿನ ವಿಶೇಷತೆಯಿಂದ ಹಾಗೂ ಅದನ್ನು ತೆಗೆದುಕೊಳ್ಳುವವರಿಂದ. ಕೆಲವರ ಬಳಿ ಈ ರೀತಿಯ ವಿಶೇಷ ನೋಟುಗಳಿದ್ದರೂ ಅದನ್ನು ಎಲ್ಲಿ ಹಾಗೂ ಯಾವ ರೀತಿ ಮಾರಾಟ ಮಾಡಬೇಕು ಎಂದು ತಿಳಿದಿರುವುದಿಲ್ಲ. ಹೀಗಾಗಿ ಈ ನೋಟುಗಳನ್ನು ಎಲ್ಲಿ ಹಾಗೂ ಯಾವ ರೀತಿ ಮಾರಾಟ ಮಾಡಬೇಕು ಅಂತ ತಿಳಿದುಕೊಳ್ಳುವುದು ಒಳ್ಳೆಯದು. ಅದರ ವಿವರ ಮುಂದಿದೆ.
ವಿಶೇಷ ಸಂಖ್ಯೆಯ ನೋಟುಗಳನ್ನು ಎಲ್ಲಿ ಮಾರಾಟ ಮಾಡಬಹುದು
ನಿಮ್ಮ ಹಳೆಯ ಹಾಗೂ ಕೆಲವು ಪ್ರಮುಖ ಸಂಖ್ಯೆಯ ಕರೆನ್ಸಿ ನೋಟುಗಳನ್ನು ಖರೀದಿ ಮಾಡುವುದಕ್ಕೆ ಕೆಲವು ಪ್ರಮುಖ ವೆಬ್‌ಸೈಟ್‌ಗಳಿವೆ. ಈ ವೆಬ್‌ಸೈಟ್‌ನಲ್ಲಿ ಮೂಲಕ ನೀವು ಹಳೆಯ ಹಾಗೂ ವಿಶೇಷ ನಾಣ್ಯ ಮತ್ತು ನೋಟುಗಳನ್ನು ಮಾರಾಟ ಮಾಡಬಹುದಾಗಿದೆ. EBay ಹಾಗೂ CoinBazzar ಸೇರಿದಂತೆ ಹಲವು ವೆಬ್‌ಸೈಟ್‌ಗಳು ನಿಮ್ಮಂದ ವಿಶೇಷ ನೋಟು ಪಡೆದುಕೊಂಡು ಮಾರುಕಟ್ಟೆಯಲ್ಲಿ ಇರುವ ಡಿಮ್ಯಾಂಡ್ ರೇಟ್ ಕೊಡುತ್ತವೆ. ಆದರೆ ಆಯಾ ವೆಬ್‌ಸೈಟ್‌ನಲ್ಲಿ ಕೆಲವೊಂದು ನಿರ್ದಿಷ್ಟ ನಿಯಮಗಳು ಇರುತ್ತವೆ. ಮಾರಾಟ ಮಾಡುವ ಮುನ್ನ ಈ ನಿಯಮಗಳನ್ನು ಹಾಗೂ ನಿಮ್ಮ ನೋಟಿಗೆ ಮಾರುಕಟ್ಟೆಯಲ್ಲಿ ಇರುವ ಡಿಮ್ಯಾಂಡ್ ಚೆಕ್ ಮಾಡಿ.












Click it and Unblock the Notifications