30 ನಿಮಿಷದಲ್ಲಿ 7 ಸಾವಿರ ಕೋಟಿ ಕಳೆದುಕೊಂಡ ಎಲ್ ಐಸಿǃ

Posted By:
Subscribe to Oneindia Kannada

ಮುಂಬೈ, ಜುಲೈ 18: ಐಟಿಸಿ ಷೇರುಗಳ ಮೇಲೆ ಅವಲಂಬಿತವಾಗಿದ್ದ ಜೀವವಿಮಾ ನಿಗಮ (ಎಲ್ ಐಸಿ) ಸಂಸ್ಥೆಯು ಮಂಗಳವಾರ ಮಧ್ಯಾಹ್ನದ ವೇಳೆಗೆ ಭಾರಿ ನಷ್ಟ ಅನುಭವಿಸಿದೆ. ಷೇರುಪೇಟೆಯಲ್ಲಿ 30 ನಿಮಿಷಗಳಲ್ಲಿ 7,000 ಕೋಟಿ ರು ಕಳೆದುಕೊಂಡಿದೆ.

ಐಟಿಸಿ ಷೇರುಗಳು ಬೆಳಗ್ಗಿನ ವಹಿವಾಟಿನಲ್ಲಿ ಶೇ 15ರಷ್ಟು ಕುಸಿತ ಕಂಡಿದ್ದು, ಎಲ್ ಐಸಿಗೆ ಮಾರಕವಾಗಿ ಪರಿಣಮಿಸಿದೆ. ಜೂನ್ 30, 2017ರಂತೆ ಸಿಗರೇಟ್ ತಯಾರಕದ ಸಂಸ್ಥೆಯಲ್ಲಿ ಶೇ 16.29ರಷ್ಟು ಪಾಲನ್ನು ಎಲ್ ಐಸಿ ಹೊಂದಿದೆ. 1992ರ ನಂತರ ಇದೇ ಮೊದಲ ಬಾರಿಗೆ ಐಟಿಸಿ ಈ ಪ್ರಮಾಣದಲ್ಲಿ ಕುಸಿತ ಕಂಡಿದೆ.

15 per cent drop in the ITC shares, LIC loses 7,000 crore in 30 minutes

ಐಟಿಸಿಯಲ್ಲಿ ಹೂಡಿಕೆ ಮಾಡುತ್ತಿರ ಎಲ್ ಐಸಿ ವಿರುದ್ಧ ಪ್ರತಿಭಟನೆಗಳು ನಡೆಯುತ್ತಲೇ ಇವೆ.ಬಾಂಬಾ ಹೈಕೋರ್ಟಿನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಯಲ್ಲಿ ಕಳೆದ ಏಪ್ರಿಲ್ ನಲ್ಲೇ ಹಾಕಲಾಗಿದೆ. ಎಲ್ ಐಸಿ ಸೇರಿದಂತೆ ನಾಲ್ಕು ಸರ್ಕಾರಿ ಸ್ವಾಮ್ಯದ ಜೀವ ವಿಮಾ ಸಂಸ್ಥೆಗಳು ಸಿಗರೇಟು ತಯಾರಕ ಸಂಸ್ಥೆ ಐಟಿಸಿ ಮೇಲೆ ಹೂಡಿಕೆ ಮಾಡಿರುವುದನ್ನು ವಿರೋಧಿಸಲಾಗಿದೆ.

Do not drink coffee at the wrong time | Watch video | Oneindia Kannada

ಸರಕು ಮತ್ತು ಸೇವಾ ತೆರಿಗೆ (ಜಿಎಸ್ ಟಿ) ಘೋಷಣೆ ನಂತರ ಮಂಗಳವಾರದಂದು ಐಟಿಸಿ ಷೇರುಗಳು ಶೇ 15ರಷ್ಟು ಕುಸಿತ ಕಂಡಿದೆ.ಬಿಎಸ್ಇ ನಲ್ಲಿ 276ರುಗೆ ಕುಸಿದಿದ್ದು, ಮಾರುಕಟ್ಟೆ ಮೌಲ್ಯ 45,000 ಕೋಟಿ ರು ರಷ್ಟಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
A steep 15 per cent drop in the ITC shares in morning trade on Tuesday weighed heavy on its largest shareholder, Life Insurance Corporation of India (LIC), which suffered a notional loss of over Rs 7,000 crore within the first half-an-hour reports Economics times
Please Wait while comments are loading...