• search
For Quick Alerts
ALLOW NOTIFICATIONS  
For Daily Alerts

  ಬ್ಯಾಂಕ್ ಅಧಿಕಾರಿಗಳ 10 ಪರ್ಸೆಂಟ್ ಆಸೆಗೆ 11 ಸಾವಿರ ಕೋಟಿ ವಂಚನೆ ಬಯಲು

  |
    ಪಂಜಾಬ್ ನ್ಯಾಷನಲ್ ಬ್ಯಾಂಕ್ ನ 11 ಸಾವಿರ ಕೋಟಿ ರೂಪಾಯಿ ವಂಚನೆ ಪ್ರಕರಣ ಬಯಲು | Oneindia Kannada

    ಪಂಜಾಬ್ ನ್ಯಾಷನಲ್ ಬ್ಯಾಂಕ್ ನಲ್ಲಿನ 11 ಸಾವಿರ ಕೋಟಿ ರುಪಾಯಿ ಹಗರಣದಲ್ಲಿ ಇನ್ನೂ ಕನಿಷ್ಠ ಮೂರು ಬ್ಯಾಂಕ್ ಗಳು ತೊಂದರೆಯಲ್ಲಿ ಸಿಕ್ಕಿವೆ. ಆ ಪೈಕಿ ಎರಡು ಸಾರ್ವಜನಿಕ ವಲಯದ್ದಾದರೆ, ಮತ್ತೊಂದು ಖಾಸಗಿ ಬ್ಯಾಂಕ್ ಎಂಬ ಮಾಹಿತಿ ಬರುತ್ತಿದೆ. ಪಿಎನ್ ಬಿ ಸಾಲ ನೀಡುತ್ತದೆ ಎಂಬ ಆಧಾರದಲ್ಲಿ ನಾವೂ ಸಾಲ ನೀಡುವುದಾಗಿ ಹೇಳಿದೆವು ಎಂದು ಬ್ಯಾಂಕ್ ಗಳು ಬುಧವಾರ ತಿಳಿಸಿವೆ.

    10% ಹೇಳಿಕೆ ಬಗ್ಗೆ 100% ತಲೆಕೆಡಿಸಿಕೊಂಡಿರುವ ಕಾಂಗ್ರೆಸ್

    ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ, ಅಲಹಾಬಾದ್ ಬ್ಯಾಂಕ್ ಹಾಗೂ ಆಕ್ಸಿಸ್ ಬ್ಯಾಂಕ್ ಈ ಹೇಳಿಕೆ ನೀಡಿವೆ. ಒಂದು ಬ್ಯಾಂಕ್ ನವರು ಸಾಲ ನೀಡಿದ್ದರ ಆಧಾರದಲ್ಲಿ ವಿದೇಶದಲ್ಲಿರುವ ಇತರ ಬ್ಯಾಂಕ್ ಗಳ ಶಾಖೆಯಿಂದಲೂ ಸಾಲ ನೀಡಲು ಮುಂದಾಗಿದ್ದಾರೆ. ಅದರಲ್ಲೂ ಅಭರಣ ತಯಾರಿಕಾ ಕಂಪೆನಿಗಳ ಜತೆ ವ್ಯವಹಾರ ಹೊಂದಿರುವ ಬ್ಯಾಂಕ್ ಗಳದ್ದೇ ರಂಕಲಾಗಿದೆ.

    ಹಗರಣದ ಆರೋಪ, ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ ಷೇರುಗಳು ಪತನ

    ವಿದೇಶದಲ್ಲಿರುವ ಬ್ಯಾಂಕ್ ನ ಶಾಖೆಗಳು ನಿಯಮಾನುಸಾರ ಕಾರ್ಯ ನಿರ್ವಹಿಸುತ್ತಿವೆಯೇ ಎಂಬ ಬಗ್ಗೆ ಪರಿಶೀಲಿಸಲು ದೂರು ದಾಖಲಾದ ನಂತರ ಬ್ಯಾಂಕ್ ಅಧಿಕಾರಿಗಳು ಮುಂದಾಗಿದ್ದಾರೆ. ವಂಚನೆಯ ಸಾಲ ನೀಡಿಕೆ ಪತ್ರ ಮೊದಲಿಗೆ ಜನವರಿ ಹದಿನಾರರಂದು ವಿತರಿಸಲಾಗಿದೆ ಎಂದು ಸಿಬಿಐಗೆ ಪಿಎನ್ ಬಿ ತಿಳಿಸಿದೆ.

    ಎಂಟು ವರ್ಷಗಳಿಂದ ನಡೆದುಕೊಂಡು ಬಂದ ವ್ಯವಹಾರ

    ಎಂಟು ವರ್ಷಗಳಿಂದ ನಡೆದುಕೊಂಡು ಬಂದ ವ್ಯವಹಾರ

    ಹಾಂಕಾಂಗ್, ದುಬೈ, ನ್ಯೂಯಾರ್ಕ್ ನಂಥ ಕಡೆ ಆಭರಣ ಕಂಪೆನಿಗಳು ಇಂಥ ಸಾಲ ನೀಡಿಕೆ ಪತ್ರಗಳ ಆಧಾರದಲ್ಲಿ ಖರೀದಿದಾರರ ಸಾಲ ಪಡೆಯುತ್ತಿದ್ದವು. ಇದು ಕಳೆದ ಎಂಟು ವರ್ಷಗಳಿಂದ ನಡೆದುಕೊಂಡು ಬಂದಿದೆ. ಇಂಥದ್ದೇ ವ್ಯವಹಾರವೊಂದನ್ನು ಕಳೆದ ತಿಂಗಳ ಐದನೇ ತಾರೀಕು ಕೂಡ ಪುರಸ್ಕರಿಸಲಾಗಿದೆ. ಆದರೆ ಸಮಸ್ಯೆ ಶುರುವಾಗಿರುವುದು ಪಾವತಿ ಮಾಡಬೇಕಾಗಿದ್ದ ಕಳೆದ ಜನವರಿ 25ನೇ ತಾರೀಕಿನಿಂದ ಈಚೆಗೆ.

    ಹತ್ತು ಪರ್ಸೆಂಟ್ ಕೇಳಿದ್ದಾರೆ ಎನ್ನುತ್ತವೆ ಮೂಲಗಳು

    ಹತ್ತು ಪರ್ಸೆಂಟ್ ಕೇಳಿದ್ದಾರೆ ಎನ್ನುತ್ತವೆ ಮೂಲಗಳು

    ಈ ರೀತಿಯ ಅನುಕೂಲ ಮುಂದುವರಿಸಬೇಕು ಅಂದರೆ ಹೆಚ್ಚುವರಿಯಾಗಿ ಇನ್ನೂ ಹತ್ತು ಪರ್ಸೆಂಟ್ ಕೊಡಬೇಕು ಎಂದು ಪಂಜಾಬ್ ನ್ಯಾಷನಲ್ ಅಧಿಕಾರಿಗಳು ಕೇಳಿದ್ದರು ಎಂದು ಮೂಲಗಳು ತಿಳಿಸಿವೆ. ಆದರೆ ಯಾವಾಗ ಜುವೆಲ್ಲರಿ ಕಂಪೆನಿಗಳು ಆ ರೀತಿ ಹೆಚ್ಚುವರಿ ಕೊಡಲು ಸಾಧ್ಯವಿಲ್ಲ ಎಂದವೋ ಆಗ ಇಡೀ ವ್ಯವಸ್ಥೆಯ ಲೋಪ ಬಯಲಿಗೆ ಬಿದ್ದಿದೆ.

    ಎಲ್ ಒಯು ಎಂಬ ವ್ಯವಸ್ಥೆ

    ಎಲ್ ಒಯು ಎಂಬ ವ್ಯವಸ್ಥೆ

    ಮೊದಲಿಗೆ ಎಲ್ ಒಯು ಎಂಬ ವ್ಯವಸ್ಥೆ ಬಗ್ಗೆ ತಿಳಿದುಕೊಳ್ಳಬೇಕು. ಇದು ಒಂದು ಒಪ್ಪಂದ ಪತ್ರ. ಒಂದು ವೇಳೆ ಮೂರನೇ ವ್ಯಕ್ತಿ ತನ್ನ ಜವಾಬ್ದಾರಿ (ಸಾಲ) ಪೂರೈಸಲು ಸಾಧ್ಯವಿಲ್ಲದ ಪಕ್ಷದಲ್ಲಿ ನಾವು ಅದನ್ನು ಪೂರ್ಣ ಮಾಡುತ್ತೇವೆ ಎಂದು ಒಂದು ಬ್ಯಾಂಕ್ ನ ಶಾಖೆಗಳು ಮತ್ತೊಂದು ಬ್ಯಾಂಕ್ ನವರಿಗೆ ಕೊಡುವ ಭರವಸೆ.

    ವಿದೇಶದ ಬ್ಯಾಂಕ್ ಶಾಖೆಗಳು ಸಾಲ ಕೊಡುತ್ತವೆ

    ವಿದೇಶದ ಬ್ಯಾಂಕ್ ಶಾಖೆಗಳು ಸಾಲ ಕೊಡುತ್ತವೆ

    ಇದರ ಆಧಾರದಲ್ಲಿ ವಿದೇಶದಲ್ಲಿರುವ ಬ್ಯಾಂಕ್ ನ ಶಾಖೆಗಳು ಖರೀದಿದಾರರಿಗೆ ಸಾಲ ವ್ಯವಸ್ಥೆ ನೀಡುತ್ತವೆ. ಇದು ಒಂದು ಸಾಲ ವ್ಯವಸ್ಥೆ. ಭಾರತದೊಳಗೆ ಆಮದು ಮಾಡಿಕೊಳ್ಳಲು ಬಯಸುವ ವಸ್ತುಗಳಿಗೆ ಹೊರ ದೇಶದಲ್ಲಿ ಹಣ ಪಾವತಿಸಲು ಬ್ಯಾಂಕ್ ಗಳು ಅಥವಾ ಹಣಕಾಸು ಸಂಸ್ಥೆಗಳು ಇಂಥದ್ದೊಂದು ವ್ಯವಸ್ಥೆ ಮಾಡಿಕೊಡುತ್ತವೆ.

    ಬಿಲ್ ಆಧಾರದಲ್ಲಿ ಹಣ ವರ್ಗಾವಣೆ

    ಬಿಲ್ ಆಧಾರದಲ್ಲಿ ಹಣ ವರ್ಗಾವಣೆ

    ಆಮದುದಾರರ ಲೆಟರ್ ಆಫ್ ಅಂಡರ್ ಟೇಕಿಂಗ್ (ಎಲ್ ಒಯು) ಆಧಾರದಲ್ಲಿ ವಿದೇಶದ ಬ್ಯಾಂಕ್ ಗಳು ಹಣ ಪಾವತಿಸಿರುತ್ತವೆ. ಭಾರತದ ಯಾವ ಬ್ಯಾಂಕ್ ಶಾಖೆಯಲ್ಲಿ ಆಮದುದಾರ ಖಾತೆ ಹೊಂದಿರುತ್ತಾರೋ ಅಲ್ಲಿಂದ ವಸ್ತುಗಳನ್ನು ಪೂರೈಸಿದ ಬಿಲ್ ಆಧಾರದಲ್ಲಿ ಹಣ ವರ್ಗಾವಣೆ ಆಗುತ್ತದೆ.

    ಎರಡು ಸಾವಿರ ಕೋಟಿ ಪಾವತಿಸಲ್ಲ ಎಂದ ಪಿಎನ್ ಬಿ

    ಎರಡು ಸಾವಿರ ಕೋಟಿ ಪಾವತಿಸಲ್ಲ ಎಂದ ಪಿಎನ್ ಬಿ

    ಆದರೆ, ಇಂಥ ಒಂದು ಎಲ್ ಒಯುಗೆ ಯಾವಾಗ ಹಣ ಪಾವತಿಸಲ್ಲ ಎಂದು ಪಿಎನ್ ಬಿ ಹೇಳಿತೋ, ಆಗ ಹಾಂಕಾಂಗ್ ನ ಆರ್ಥಿಕ ಅಧಿಕಾರಿಗಳಿಗೆ ದೂರು ಹೋಗಿದೆ ಜತೆಗೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಗಮನಕ್ಕೂ ತರಲಾಗಿದೆ. ನಮ್ಮ ತಕರಾರು ಬ್ಯಾಂಕ್ ನ ವಿರುದ್ಧವೇ ಹೊರತು ನಮ್ಮ ಸೇವಾದಾರರ ವಿರುದ್ಧ ಅಲ್ಲ. ಎರಡು ಸಾವಿರ ಕೋಟಿಯಷ್ಟನ್ನು ಎಲ್ ಒಯು ಆಧಾರದಲ್ಲಿ ವರ್ಗಾವಣೆ ಮಾಡಿದ ಮೇಲೆ ಪಾವತಿ ಸಾಧ್ಯವಿಲ್ಲ ಎಂದು ಹೇಳಿದ್ದರಿಂದ ದೂರು ನೀಡಿದ್ದೇವೆ ಎಂದು ಬ್ಯಾಂಕರ್ ಹೇಳಿದ್ದಾರೆ.

    11 ಸಾವಿರ ಕೋಟಿ ರುಪಾಯಿ

    11 ಸಾವಿರ ಕೋಟಿ ರುಪಾಯಿ

    ಇನ್ನು ಬುಧವಾರ ಪಂಜಾಬ್ ನ್ಯಾಷನಲ್ ಬ್ಯಾಂಕ್ ತಿಳಿಸಿರುವ ಮಾಹಿತಿ ಪ್ರಕಾರ, ಮುಂಬೈನ ಕೆಲ ಶಾಖೆಗಳಲ್ಲಿ ಅನಧಿಕೃತ ಮತ್ತು ವಂಚನೆಯ ವ್ಯವಹಾರಗಳು ನಡೆದಿದ್ದು, ಆ ಮೊತ್ತ 11 ಸಾವಿರ ಕೋಟಿ ರುಪಾಯಿಯಷ್ಟಿದೆ. ಅದು ಕೂಡ ಆ ಮೊತ್ತ ಪಾವತಿಸಬೇಕಾದದ್ದು ಸಂದರ್ಭ ಹಾಗೂ ಸನ್ನಿವೇಶದ ಆಧಾರದಲ್ಲಿ. ವ್ಯವಹಾರ ಸಾಚಾ ಹಾಗೂ ನ್ಯಾಯಬದ್ಧವಾಗಿದ್ದಾಗ ಮಾತ್ರ ಎಂದು ಹೇಳಿದೆ.

    ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

    English summary
    How the PNB scam unearthed? PNB officials had sought additional margin of around 10% on the jeweller's exposure for the facilities to continue. As the jeweller was unable to provide this, the facilities were withdrawn, leading to a collapse.

    Oneindia ಬ್ರೇಕಿಂಗ್ ನ್ಯೂಸ್,
    ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X
    We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more