ಸರ್ಕಾರ ಬೀಳುತ್ತೆ ಅನ್ನೋದು 'ತೋಳ ಬಂತು' ಕತೆ ಅಷ್ಟೆ: ಈಶ್ವರ್ ಖಂಡ್ರೆ
ಬೀದರ್, ಜನವರಿ 02: ಸರ್ಕಾರ ಬೀಳುತ್ತೆ ಅನ್ನೋದು ಕೇವಲ 'ತೋಳ ಬಂತು ತೋಳ' ಕತೆ ಅಷ್ಟೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ವ್ಯಂಗ್ಯ ಮಾಡಿದರು.
ಬೀದರ್‌ನ ಬಾಲ್ಕಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಯು ಕಾಂಗ್ರೆಸ್‌ನ ಶಾಸಕರಿಗೆ ಆಮಿಷ ಒಡ್ಡುತ್ತಲೇ ಬರುತ್ತಿದೆ. ಸರ್ಕಾರ ಇಂದು ಬೀಳುತ್ತೆ, ನಾಳೆ ಬೀಳುತ್ತೆ ಎಂದು ಹೇಳುತ್ತಲೇ ಬರುತ್ತಿದೆ ಆದರೆ ಅದರ ಈ ತಂತ್ರ ಅದಕ್ಕೆ ತಿರುಮಂತ್ರ ಆಗಲಿದೆ ಎಂದು ಹೇಳಿದರು.
ಬಿಜೆಪಿಯವರು ಎಷ್ಟೇ ಆಮಿಷ ಒಡ್ಡಿದರು ಕಾಂಗ್ರೆಸ್ ಶಾಸಕರು ಬಿಜೆಪಿಗೆ ಹೋಗಲು ತಯಾರಿಲ್ಲ ಆದರೆ ಇದಕ್ಕೆ ವಿರುದ್ಧವಾಗಿ ಬಿಎಪಿ ಶಾಸಕರೇ ಕಾಂಗ್ರೆಸ್‌ನತ್ತ ಬರಲು ಉತ್ಸುಕರಾಗಿದ್ದಾರೆ ಎಂದು ಖಂಡ್ರೆ ಹೊಸ ಬಾಂಬ್ ಹಾಕಿದರು.

ಬಿಜೆಪಿ ಪಕ್ಷ ಪ್ರಜಾಪ್ರಭುತ್ವ ವಿರೋಧಿ. ಬಿಜೆಪಿ ನಾಕರು ಪ್ರಜತಂತ್ರಕ್ಕೆ ಧಕ್ಕೆ ತರುತ್ತಿದ್ದಾರೆ. ಅವರಿಗೆ ಪ್ರಜಾಪ್ರಭುತ್ವದ ಬಗ್ಗೆ ಗೌರವ ಇಲ್ಲ. ಬಿಜೆಪಿಯು ದಿನ ಬೆಳಗಾದರೆ ಸರ್ಕಾರ ಬೀಳುತ್ತೆ ಅಂತ 'ತೋಳ ಬಂತು, ತೋಳ..' ಕತೆ ಹೇಳುತ್ತಿದೆ ಎಂದು ಹೇಳಿದರು.
ಬೀದರ್ ಲೋಕಸಭೆ ಕ್ಷೇತ್ರವನ್ನು ಜೆಡಿಎಸ್‌ಗೆ ಬಿಟ್ಟುಕೊಡಬೇಕೆಂದು ದೇವೇಗೌಡರು ಕೇಳಿರುವ ಬಗ್ಗೆ ಮಾತನಾಡಿದ ಅವರು, ಜೆಡಿಎಸ್ ಈ ಬಗ್ಗೆ ಕೇಳಿರುವುದು ನಿಜ ಆದರೆ, ಆ ಬಗ್ಗೆ ಈಗಲೇ ನಿರ್ಣಯ ಸಾಧ್ಯವಿಲ್ಲ ಎಂದು ಅವರು ಹೇಳಿದ್ದಾರೆ.












Click it and Unblock the Notifications