Bidar Elections: ಮುಸ್ಲಿಂ ಪ್ರಾಬಲ್ಯದ ಕ್ಷೇತ್ರದಲ್ಲಿ ಕೈ-ಕಮಲ ಫೈಟ್‌; ಈ ಬಾರಿ ವಿಜಯಮಾಲೆ ಯಾರಿಗೆ?

ಕರ್ನಾಟಕ ರಾಜ್ಯದ ತುತ್ತ ತುದಿಯಲ್ಲಿರುವ ಜಿಲ್ಲೆ ಬೀದರ್. ಬೀದರ್‌ಗೆ ಹೋದರೆ ಕೋಟೆ ನೋಡದೇ ವಾಪಸ್ ಬರಬೇಡ ಎಂಬ ಮಾತಿದೆ. ತೆಲಂಗಾಣ ಮತ್ತು ಮಹಾರಾಷ್ಟ್ರ ರಾಜ್ಯಗಳ ಜೊತೆ ಬೀದರ್ ಗಡಿ ಹಂಚಿಕೊಂಡಿದೆ. ಹೈದರಾಬಾದ್-ಕರ್ನಾಟಕ ಭಾಗದ ಪ್ರಮುಖ ನಗರವಿದು.

ಬೀದರ್‌ ವೇಗವಾಗಿ ಬೆಳೆಯುತ್ತಿರುವ ನಗರಗಳಲ್ಲಿ ಒಂದಾಗಿದೆ ಮತ್ತು ಇದು ಬೀದರ್ ಮಹಾನಗರ ವಲಯಕ್ಕೆ ಸೇರುತ್ತದೆ. ಈ ನಗರವು ಅನೇಕ ವಾಸ್ತುಶಿಲ್ಪ, ಐತಿಹಾಸಿಕ ಮತ್ತು ಧಾರ್ಮಿಕ ಪ್ರಾಮುಖ್ಯತೆಯನ್ನು ಹೊಂದಿರುವ ಅನೇಕ ಸ್ಥಳಗಳಿಗೆ ಹೆಸರುವಾಸಿಯಾಗಿದೆ.

bidar constituency map

ಕ್ಷೇತ್ರದ ರಾಜಕೀಯ ಹಿನ್ನೆಲೆ

ಬೀದರ್‌ ಕ್ಷೇತ್ರದಲ್ಲಿ ಉತ್ತಮ ಪ್ರಭಾವ ಹೊಂದಿರುವ ರಹೀಮ್ ಖಾನ್. 2009ರಲ್ಲಿ ಬಿಜೆಪಿ ಸರ್ಕಾರವಿದ್ದಾಗ 10,814, 2016ರಲ್ಲಿ ಕಾಂಗ್ರೆಸ್ ಸರ್ಕಾರವಿದ್ದಾಗ ನಡೆದ ಉಪ ಚುನಾವಣೆಯಲ್ಲಿ 22,721 ಮತಗಳನ್ನು ಪಡೆದು ಜಯಗಳಿಸಿದ್ದಾರೆ.

2013ರ ಚುನಾವಣೆಯಲ್ಲಿ ಕೆಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಗುರುಪಾದಪ್ಪ ನಾಗಮಾರಪಲ್ಲಿ 50,718 ಮತಗಳನ್ನು ಪಡೆದು ಜಯಗಳಿಸಿದ್ದರು. ಕಾಂಗ್ರೆಸ್‌ನ ರಹೀಮ್ ಖಾನ್ 48,147 ಮತ ಪಡೆದಿದ್ದರು. ಜೆಡಿಎಸ್‌ನ ಡಾ.ಅಮರ್ ಯೆರೋಲ್ಕರ್ 2,420 ಮತ ಪಡೆದಿದ್ದರು.

ರಾಜಕೀಯವಾಗಿ ಯಡಿಯೂರಪ್ಪ ಪ್ರಭಾವ ಬೀದರ್ ಕ್ಷೇತ್ರದಲ್ಲಿ ಹೆಚ್ಚಿದೆ. ಯಡಿಯೂರಪ್ಪ ಕಟ್ಟಾ ಬೆಂಬಲಿಗರಾಗಿದ್ದ ಗುರುಪಾದಪ್ಪ ನಾಗಮಾರಪಲ್ಲಿ 2013ರ ಚುನಾವಣೆಯಲ್ಲಿ ಕ್ಷೇತ್ರದಲ್ಲಿ ಗೆದಿದ್ದರು. 2016ರಲ್ಲಿ ಅವರು ಹೃದಯಾಘಾತದಿಂದಾಗಿ ಮೃತಪಟ್ಟಿದ್ದಾರೆ. ನಂತರ ನಡೆದ ಉಪ ಚುನಾವಣೆಯಲ್ಲಿ ಕಾಂಗ್ರೆಸ್‌ನ ರಹೀನ್ ಖಾನ್ 70,138 ಮತಗಳನ್ನು ಪಡೆದು ಜಯಗಳಿಸಿದ್ದಾರೆ.

Bidar Karnataka Elections

ವರ್ಷ ಗೆದ್ದವರು ಮತಗಳು ಸೋತವರು ಮತಗಳು
2018td> ರಹೀಮ್ ಖಾನ್ (ಕಾಂಗ್ರೆಸ್ ) 73,270 ಸೂರ್ಯಕಾಂತ ನಾಗಮಾರಪಲ್ಲಿ (ಬಿಜೆಪಿ ) 63,025
2013 ಗುರುಪಾದಪ್ಪ ನಾಗಮಾರಪಲ್ಲಿ (ಕೆಜೆಪಿ ) 50,718 ರಹೀಂ ಖಾನ್ (ಕಾಂಗ್ರೆಸ್ ) 48,147
2008 ಗುರುಪಾದಪ್ಪ ನಾಗಮಾರಪಲ್ಲಿ (ಕಾಂಗ್ರೆಸ್) 33,557 ರಹೀಂ ಖಾನ್ ( ಕಾಂಗ್ರೆಸ್ ) 30,627
bjp jds congress logos

ಇನ್ನೂ 2023 ಕ್ಕೆ ಬೀದರ್‌ ಜಿಲ್ಲೆಯ ಬೀದರ್ ಕೇತ್ರದಲ್ಲಿ ರಾಜಕೀಯ ಕಾವು ಹೆಚ್ಚಾಗಿದ್ದು, ಕ್ಷೇತ್ರದಲ್ಲಿ ಹಿಡಿತವನ್ನ ಸಾಧಿಸಲು ಮೂರು ಪಕ್ಷಗಳು ಭರ್ಜರಿ ತಯಾರಿಯನ್ನ ನಡೆಸುತ್ತಿವೆ. ಈಗಾಗಲೇ ಪ್ರಾದೇಶಿಕ ಪಕ್ಷ ಜೆಡಿಎಸ್ ಬೀದರ್ ಕ್ಷೇತ್ರದಿಂದ ರಮೇಶ ಪಾಟೀಲ ಸೋಲಪುರ ಅವರಿಗೆ ಜೆಡಿಎಸ್ ಟಿಕೆಟ್ ಘೋಷಿಸಲಾಗಿದೆ. ಜೆಡಿಎಸ್‌ ಅಭ್ಯರ್ಥಿಗಳ ಕ್ಷೇತ್ರದಲ್ಲಿ ಚುನಾವಣಾ ಪ್ರಚಾರ ಶುರು ಮಾಡಿದ್ದಾರೆ.

ಜೆಡಿಎಸ್ ಅಭ್ಯರ್ಥಿಗಳು ಚುನಾವಣೆಯಲ್ಲಿ ಗೆಲ್ಲುವುದೋ ಅಥವಾ ಸೋಲುವುದೋ ಎಂಬುದು ಬೇರೆ ಪ್ರಶ್ನೆ, ಆದರೆ, ಮತಗಳು ವಿಭಜನೆಯಾಗುವ ಸಾಧ್ಯತೆ ಹೆಚ್ಚಿದೆ. ಎಂಬುದು ಇತರ ರಾಜಕೀಯ ಪಕ್ಷಗಳ ವಲಯದಲ್ಲಿ ಚರ್ಚೆ ಜೋರಾಗಿದೆ.

ಈಗಾಗಲೇ ಹಾಲಿ ಶಾಸಕರಾಗಿರುವ ರಹೀಂ ಖಾನ್ ಅವರಿಗೆ ಕಾಂಗ್ರೆಸ್‌ ಹೈಕಮಾಂಡ್‌ ಟಿಕೆಟ್‌ ಘೋಷಿಸಿದ್ದು, ರಹೀಂ ಖಾನ್ ಟಿಕೆಟ್‌ ನೀಡಿರುವ ಕುರಿತು ಪಕ್ಷದಲ್ಲಿ ಸಾಕಷ್ಟು ಅಸಮಾಧಾನಗಳು ಕೇಳಿ ಬಂದಿವೆ. ಜನ ಬದಲಾವಣೆ ಬಯಸಿದ್ದಾರೆ. ಹಿಂದಿನ ಐದು ಚುನಾವಣೆಗಳಲ್ಲಿ ಮುಸ್ಲಿಂ ಅಭ್ಯರ್ಥಿಗೆ ಕಾಂಗ್ರೆಸ್ ಟಿಕೆಟ್ ಕೊಡಲಾಗಿದೆ. ಈ ಬಾರಿ ಲಿಂಗಾಯತ ಅಭ್ಯರ್ಥಿಗೆ ಟಿಕೆಟ್ ಕೊಡಬೇಕು, ಬೀದರ್ ಕ್ಷೇತ್ರದಲ್ಲಿ 72 ಸಾವಿರ ಲಿಂಗಾಯತ ಹಾಗೂ 55 ಸಾವಿರ ಮುಸ್ಲಿಂ ಮತದಾರರು ಇದ್ದಾರೆ. ಲಿಂಗಾಯತರನ್ನು ಕಡೆಗಣಿಸಬಾರದು ಎಂದು ಕಾಂಗ್ರೆಸ್‌ ಸ್ಥಳೀಯ ನಾಯಕರು ಹೇಳಿದ್ದಾರೆ ಎನ್ನಲಾಗಿದೆ.

ಇನ್ನೂ ಕಾಂಗ್ರೆಸ್ ಮುಖಂಡರಾದ ಶೇಖಹಾಜಿ, ನಿಸ್ಸಾರ ಅಹಮದ್‌ ಮತ್ತು ಮನ್ನಾನ್ ಶೀಟ್ ಅವರು ಹಾಲಿ ಶಾಸಕರ ವಿರುದ್ಧ ಪರೋಕ್ಷ ಧ್ವನಿ ಎತ್ತಿದ್ದಾರೆ. ಇಂದಿನ ಪರಿಸ್ಥಿತಿ ಅವಲೋಕಿಸಿದರೆ ಕಾಂಗ್ರೆಸ್‌ ಹಾದಿ ಸುಲಭವಿಲ್ಲ ಎಂದು ಕಾಂಗ್ರೆ‌ಸ್‌ ನವರೇ ಹೇಳುತ್ತಿದ್ದಾರೆ. ಹಾಲಿ ಶಾಸಕ ರಹೀಂ ಖಾನ್ ಅವರನ್ನೇ ಪುನಃ ಚುನಾವಣಾ ಕಣಕ್ಕೆ ಕಾಂಗ್ರೆಸ್ ಇಳಿಸಿದ್ದು, ಆದರೆ, ರಹೀಂ ಖಾನ್ ಅವರು ಗೆದ್ದ ಬಳಿಕ ನಮ್ಮ ಸಮುದಾಯವನ್ನೇ ಮರೆತಿದ್ದಾರೆ' ಎಂಬ ಬೇಸರ ಮುಸ್ಲಿಮರಲ್ಲಿದೆ.

bidar mla rahim khan

ಇನ್ನೂ ಆಡಳಿತರೂಡ ಬಿಜೆಪಿ ಪಕ್ಷದಲ್ಲಿಯೂ ಟಿಕೆಟ್‌ಗಾಗಿ ಪೈಪೋಟಿ ಜೋರಾಗಿದ್ದು, ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಲು ಕಲಬುರಗಿ ವಿಭಾಗದ ಸಹ ಪ್ರಭಾರಿ ಈಶ್ವರ ಸಿಂಗ್ ಠಾಕೂರ್ ಮತ್ತು ಬಿಜೆಪಿ ಕಾರ್ಯಕಾರಣಿ ಸದಸ್ಯ ಸೂರ್ಯಕಾಂತ ನಾಗಮಾರಪಳ್ಳಿ ಹೆಸರು ಮುಂಚೂಣಿಯಲ್ಲಿವೆ.

ಪಕ್ಷ ಬಯಸಿದರೆ ನಾನೂ ಚುನಾವಣೆಯಲ್ಲಿ ಸ್ಪರ್ಧಿಸಲು ಸಿದ್ಧ' ಎಂದು ರಘುನಾಥ ಮಲ್ಕಾಪುರೆ ಅವರೂ ಹಲವು ಬಾರಿ ಬಹಿರಂಗವಾಗಿ ಹೇಳಿಕೊಂಡಿದ್ದಾರೆ. ಸೂರ್ಯಕಾಂತ ನಾಗಮಾರಪಳ್ಳಿ ಮತ್ತು ಈಶ್ವರ ಸಿಂಗ್ ಠಾಕೂರ್ ಇಬ್ಬರೂ ಸಾಮಾಜಿಕ ಚಟುವಟಿಕೆಗಳಲ್ಲಿ ನಿರತರಾಗಿದ್ದಾರೆ. ಈಶ್ವರ ಸಿಂಗ್ ಠಾಕೂರ್ ಪರ ಆರ್‌ಸ್ಎಸ್ ಮುಖಂಡರು ಇದ್ದಾರೆ. ಹಿಂದುತ್ವ ನೆಲೆಯಲ್ಲೇ ಟಿಕೆಟ್ ನಿರೀಕ್ಷೆಯಲ್ಲಿದ್ದಾರೆ. ಬಿಜೆಪಿ ಮುಖಂಡರ ಜೊತೆ ಉತ್ತಮ ಬಾಂಧವ್ಯ ಹೊಂದಿರುವ ಸೂರ್ಯಕಾಂತ ನಾಗಮಾರಪಳ್ಳಿ ಅವರು ಬಡವರಿಗೆ ನೆರವು, ಉದ್ಯೋಗ ಮೇಳದಂತಹ ಸಾಮಾಜಿಕ ಕಾರ್ಯ ಆಯೋಜಿಸಿ ಜನರ ವಿಶ್ವಾಸ ಪಡೆಯಲು ಯತ್ನಿಸಿದ್ದಾರೆ.

ಕಾಂಗ್ರೆಸ್‌ನಲ್ಲಿ ಮೂರು ಬಾರಿ ಗೆದ್ದಿರುವ ಹಾಲಿ ಶಾಸಕ ರಹೀಮ್‌ಖಾನ್‌ ಅವರು ಈ ಬಾರಿಯೂ ಕಣದಲ್ಲಿದ್ದು, ಇನ್ನು ಕೆಲ ವರ್ಷಗಳಿಂದ ಬಿಜೆಪಿ ಸರ್ಕಾರದ ಸಾಧನೆಗಳನ್ನು ಪ್ರತಿ ಗ್ರಾಮ, ಗ್ರಾಮಗಳಿಗೂ ಮುಟ್ಟಿಸುವ ಕಾರ್ಯ ನಡೆಸುವ ಮೂಲಕ ಮಾಜಿ ಸಚಿವ ದಿ.ಗುರುಪಾದಪ್ಪ ನಾಗ್ಮಾರಪಳ್ಳಿ ಪುತ್ರ ಸೂರ್ಯಕಾಂತ ಅವರು ಮತ್ತೊಮ್ಮೆ ಬಿಜೆಪಿಯಲ್ಲಿ ಅದೃಷ್ಟಪರೀಕ್ಷೆಗಿಳಿಯುವ ಇಂಗಿತ ವ್ಯಕ್ತಪಡಿಸಿದ್ದಾರೆ.

ವಿಧಾನ ಪರಿಷತ್‌ ಸಭಾಪತಿಯಾಗಿರುವ ರಘುನಾಥರಾವ್‌ ಮಲ್ಕಾಪೂರೆ, ಬಿಜೆಪಿಯ ವಿಭಾಗೀಯ ಪ್ರಭಾರಿ ಈಶ್ವರಸಿಂಗ್‌ ಠಾಕೂರ್‌, ಹಿರಿಯ ಮುಖಂಡ ಗುರುನಾಥ ಕೊಳ್ಳೂರ್‌, ಸೋಮಶೇಖರ ಪಾಟೀಲ್‌, ಕೇಂದ್ರ ಸಚಿವ ಭಗವಂತ ಖೂಬಾ ಸಹೋದರ ಜಗದೀಶ ಖೂಬಾ ಸೇರಿದಂತೆ ಹಲವರು ಬಿಜೆಪಿ ಟಿಕೆಟ್‌ಗಾಗಿ ಪೈಪೋಟಿ ನಡೆಸಿದ್ದಾರೆ. ಜೆಡಿಎಸ್‌ ಈಗಾಗಲೇ ಘೋಷಿಸಿದಂತೆ ರಮೇಶ ಪಾಟೀಲ್‌ ಸೋಲಾಪುರ್‌ ಹೆಸರು ಸದ್ಯಕ್ಕೆ ಪಕ್ಕಾ. ಆದರೆ, ಬಿಜೆಪಿಯಿಂದ ಟಿಕೆಟ್‌ ವಂಚಿತರಿಗಾಗಿ ಗಾಳ ಹಾಕಿ ಕುಳಿತಂತಿರುವ ಆ ಪಕ್ಷದ ವರಿಷ್ಠರ ನಿರ್ಧಾರ ಕೊನೇ ಕ್ಷಣದಲ್ಲಿ ಬದಲಾದರೂ ಅಚ್ಚರಿ ಇಲ್ಲ. ‌

ಬೀದರ್‌ ಕ್ಷೇತ್ರದ ಮತದಾರರ ವಿವರ

ಕ್ಷೇತ್ರದ ಒಟ್ಟು ಮತದಾರರು 1348019
ಪುರುಷ ಮತದಾರರು 696687
ಮಹಿಳಾ ಮತದಾರರು 651332
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+