ಭುವನೇಶ್ವರದಲ್ಲಿ ರೈಲು ಸೇವೆ ಆರಂಭ, ಪುರಿಗೆ ಮೇ 10ರ ತನಕ ಇಲ್ಲ
ಭುವನೇಶ್ವರ, ಮೇ 05: ಫೋನಿ ಚಂಡಮಾರುತದ ಅಬ್ಬರ ಕಡಿಮೆಯಾದ ಹಿನ್ನಲೆಯಲ್ಲಿ ಭುವನೇಶ್ವರದಲ್ಲಿ ಭಾನುವಾರದಂದು ಭಾರತೀಯ ರೈಲ್ವೆ ತನ್ನ ಸೇವೆ ಆರಂಭಿಸಲಿದೆ, ಆದರೆ, ಪುರಿಯಲ್ಲಿ ಮೇ 10ರ ತನಕ ಯಾವುದೇ ರೈಲು ಓಡಾಟ ಸಾಧ್ಯವಿಲ್ಲ ಎಂದು ಇಲಾಖೆ ಹೇಳಿದೆ.
ಫೋನಿ ಚಂಡಮಾರುತದ ಅಬ್ಬರದ ತಣ್ಣಗಾದ 24 ಗಂಟೆಗಳಲ್ಲೇ ಹೌರಾ-ಚೆನ್ನೈ ಮೇನ್ ಲೈನ್ ಆರಂಭಿಸಿರುವುದು ಪ್ರಯಾಣಿಕರಿಗೆ ಶುಭ ಸುದ್ದಿಯಾಗಿದೆ.
ಆದರೆ, ಭುವನೇಶ್ವರದಿಂದ ಹೊರಡಲಿರುವ ಎರಡು ರೈಲುಗಳು ಸ್ಥಗಿತಗೊಂಡಿವೆ. ಭುವನೇಶ್ವರ-ತಿರುಪತಿ, ವಿಶಾಪಟ್ಟಣಂ ಇಂಟರ್ ಸಿಟಿ ಕ್ಯಾನ್ಸಲ್ ಮಾಡಲಾಗಿದೆ. ಈ ಎರಡು ರೈಲುಗಳಿಗೆ ಹೊಂದಾಣಿಕೆ ರೈಲುಗಳು ಇನ್ನು ಸಿಕ್ಕಿಲ್ಲ ಎಂದು ಪೂರ್ವ ಕರಾವಲಿ ರೈಲು ವಿಭಾಗದ ವಕ್ತಾರ ಜೆಪಿ ಮಿಶ್ರಾ ಹೇಳಿದ್ದಾರೆ.

ಭುವನೇಶ್ವರದಿಂದ ಪ್ರಶಾಂತಿ ಎಕ್ಸ್ ಪ್ರೆಸ್, ವಿಶಾಖ ಎಕ್ಸ್ ಪ್ರೆಸ್, ರಾಜಧಾನಿ ಎಕ್ಸ್ ಪ್ರೆಸ್, ಕೊನಾರ್ಕ್ ಎಕ್ಸ್ ಪ್ರೆಸ್ ಹಾಗೂ ಹೀರಾಖಂಡ್ ಎಕ್ಸ್ ಪ್ರೆಸ್ ಸಂಚರಿಸುತ್ತವೆ. ಭಾನುವಾರದಂದು 14 ಪ್ಯಾಸೆಂಜರ್ ರೈಲು ಸಂಚರಿಸಲಿವೆ ಕೆಲ ಎಕ್ಸ್ ಪ್ರೆಸ್ ರೈಲುಗಳೂ ಈ ಮಾರ್ಗಗಳಲ್ಲಿ ಎಂದಿನಂತೆ ಸಂಚಾರ ಆರಂಭಿಸಿದರೂ, ಪುರಿ ಕಡೆಗೆ ಇನ್ನು ಸಂಚಾರ ಸಾಧ್ಯವಿಲ್ಲ ಎಂದು ಮಿಶ್ರಾ ಹೇಳಿದ್ದಾರೆ.
ಕಳೆದ 20 ವರ್ಷಗಳಲ್ಲೇ ಭೀಕರ ಎನ್ನಲಾದ ಫೋನಿ ಚಂಡಮಾರುತ ಸದ್ಯ ಬಾಂಗ್ಲಾದೇಶದ ಕರಾವಳಿಯತ್ತ ಸಾಗಿ, ತನ್ನ ಅಬ್ಬರ ನಿಲ್ಲಿಸಲಿದೆ. ಇದಕ್ಕೂ ಮುನ್ನ ಚಂಡಮಾರುತದ ಹೊಡೆತಕ್ಕೆ ಸಿಲುಕಿ 20ಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದು, ಅನೇಕ ಮಂದಿ ನಿರ್ಗತಿಕರಾಗಿದ್ದಾರೆ. ಆದರೆ, 12 ಲಕ್ಷಕ್ಕೂ ಅಧಿಕ ಮಂದಿಯನ್ನು ಸುರಕ್ಷಿತವಾಗಿ ಸ್ಥಳಾಂತರ ಮಾಡಿದ ಒಡಿಶಾ ಹಾಗೂ ಕೇಂದ್ರ ಸರ್ಕಾರದ ಬಗ್ಗೆ ಪ್ರಶಂಸೆ ವ್ಯಕ್ತವಾಗಿದೆ.
-
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
March 24 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru Land: ಕಾಡುಗೋಡಿಯಲ್ಲಿ 78 ಜಾಗ ಹಿಂತಿರುಗಿಸುವಂತೆ ಎಂಬೆಸ್ಸಿಗೆ ಕೆಐಎಸಿಬಿ ಆದೇಶ -
Train Ticket: ರೈಲು ಟಿಕೆಟ್ ರದ್ದತಿ, ಮರುಪಾವತಿ ರೂಲ್ಸ್ ಬದಲಾವಣೆ: ಏಪ್ರಿಲ್ನಿಂದ ಹೊಸ ನಿಯಮ -
Mutton: ಕುಕ್ಕರ್ 20 ಬಾರಿ ಕೂಗಿದರೂ ಬೇಯದ ತಲೆ ಮಟನ್: ಪೊಲೀಸ್ ಠಾಣೆಗೆ ಪಾತ್ರೆ ಹಿಡಿದು ಬಂದು ರಾದ್ಧಾಂತ -
Viral Post: 'ಬೆಂಗಳೂರು ಟ್ರಾಫಿಕ್' ಕಿರಿಕಿರಿ ತಪ್ಪಿಸಲು ಆಫೀಸ್ನಿಂದ ಮನೆಗೆ ನಡೆದುಕೊಂಡು ಹೋಗುತ್ತಿರುವ ಮಹಿಳೆ -
Gas: ಬೆಳಗಾವಿಯಲ್ಲಿ ಸಿಲಿಂಡರ್, ಇಂಧನ ಲಭ್ಯತೆಯ ಬಗ್ಗೆ: ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅಪ್ಡೇಟ್ಸ್












Click it and Unblock the Notifications