ವಲಸೆ ಕಾರ್ಮಿಕರು ಹೋಗುತ್ತಿದ್ದ ಬಸ್ ಅಪಘಾತ; 40 ಜನರ ರಕ್ಷಣೆ

ಭುವನೇಶ್ವರ, ಮೇ 03 : ಗುಜರಾತ್‌ನ ಸೂರತ್‌ನಿಂದ ಒಡಿಶಾಕ್ಕೆ ವಲಸೆ ಕಾರ್ಮಿಕರನ್ನು ಕರೆದುಕೊಂಡು ಹೋಗುತ್ತಿದ್ದ ಬಸ್ ಅಪಘಾತಕ್ಕೀಡಾಗಿದೆ. ಒಬ್ಬ ಕಾರ್ಮಿಕ ಮೃತಪಟ್ಟಿದ್ದು, 40 ಜನರನ್ನು ರಕ್ಷಣೆ ಮಾಡಲಾಗಿದೆ.

ಒಡಿಶಾದ ಗಂಜಾಮ್-ಕಂದಮಾಲ್ ಗಡಿಯಲ್ಲಿ ಬರುವ ಕಳಿಂಗಾ ಘಾಟ್‌ನಲ್ಲಿ ಈ ಅಪಘಾತ ನಡೆದಿದೆ. ನಿಯಂತ್ರಣ ತಪ್ಪಿದ ಬಸ್ ರಸ್ತೆಯ ಪಕ್ಕದ ತಡೆಗೋಡೆಗೆ ಡಿಕ್ಕಿ ಹೊಡೆದು ಉರುಳಿ ಬಿದ್ದಿದೆ.

ಬಸ್‌ನಲ್ಲಿದ್ದ ಒಬ್ಬ ಕಾರ್ಮಿಕ ಮೃತಪಟ್ಟಿದ್ದು, 40 ಜನರನ್ನು ರಕ್ಷಣೆ ಮಾಡಲಾಗಿದೆ. ಇವರಲ್ಲಿ ಕೆಲವರು ಗಾಯಗೊಂಡಿದ್ದಾರೆ. ಒಡಿಶಾದ ಗಂಜಾಮ್‌ಗೆ ಬಸ್ ತಲುಪಬೇಕಿತ್ತು.

Bus Overturned

ಒಡಿಶಾ ದಕ್ಷಿಣ ವಲಯ ಐಜಿಪಿ ಸತ್ಯಬಾರ್ತ ಬೋಯ್ ಈ ಕುರಿತು ಮಾತನಾಡಿದ್ದು, "ಅಪಘಾತದಲ್ಲಿ ಒಬ್ಬರು ಮೃತಪಟ್ಟಿದ್ದು, ಇನ್ನೊಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ" ಎಂದು ಹೇಳಿದ್ದಾರೆ.

ಕೊರೊನಾ ಹರಡದಂತೆ ತಡೆಯಲು ಮಾರ್ಚ್‌ನಲ್ಲಿ ಲಾಕ್ ಡೌನ್ ಘೋಷಣೆ ಮಾಡಲಾಯಿತು. ಬಳಿಕ ಸಾರಿಗೆ ಸಂಚಾರ ರದ್ದಾಗಿದ್ದರಿಂದ ಹಲವು ಕಾರ್ಮಿಕರು ಬೇರೆ-ಬೇರೆ ರಾಜ್ಯಗಳಲ್ಲಿಯೇ ಉಳಿದರು.

ಈಗ ಕೇಂದ್ರ ಸರ್ಕಾರ ವಲಸೆ ಕಾರ್ಮಿಕರು, ವಿದ್ಯಾರ್ಥಿಗಳು, ಯಾತ್ರಾರ್ಥಿಗಳ ಸಂಚಾರಕ್ಕೆ ಅವಕಾಶ ನೀಡಿದೆ. ಸ್ಥಳೀಯ ರಾಜ್ಯ ಸರ್ಕಾರಗಳೇ ಕಾರ್ಮಿಕರನ್ನು ಅವರ ತವರು ರಾಜ್ಯಕ್ಕೆ ಕಳಿಸಿಕೊಡುತ್ತಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+