ರಾಹುಲ್ ಅವರ 'ನ್ಯಾಯ್' ಬಳಸಿ ಜೀವನಾಂಶ ನೀಡುವೆ: ನಿರುದ್ಯೋಗಿ ಪತಿ

ಇಂದೋರ್, ಮಾರ್ಚ್ 31: ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಭರವಸೆ ನೀಡಿರುವ ನ್ಯಾಯ್ (ಕನಿಷ್ಠ ಆದಾಯ ಖಾತ್ರಿ) ಯೋಜನೆ ಬಗ್ಗೆ ಬಿಜೆಪಿ ಸತತ ವಾಗ್ದಾಳಿ ನಡೆಸುತ್ತಿದೆ. ಇನ್ನೊಂದೆಡೆ ಆರ್ಥಿಕ ತಜ್ಞರ ಮೂಲಕ ಕಾಂಗ್ರೆಸ್ ಸಮರ್ಥನೆ ನೀಡುತ್ತಿದೆ. ಈ ನಡುವೆ ನಿರುದ್ಯೋಗಿ ಪತಿಯೊಬ್ಬ, ನ್ಯಾಯ್ ಬಳಸಿ, ವಿಚ್ಛೇದಿತ ಪತ್ನಿಗೆ ಜೀವನಾಂಶ ರೂಪದಲ್ಲಿ ನೀಡುವುದಾಗಿ ಕೋರ್ಟಿನಲ್ಲಿ ಹೇಳಿದ್ದಾನೆ.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

Nyuntam Aay Yojana (NYAY) ದಿಂದ ದೊರೆಯುವ ಹಣವನ್ನು ವಿಚ್ಛೇದಿತ ಪತ್ನಿ ಮತ್ತು ಹೆಣ್ಣು ಮಗುವಿಗೆ ಜೀವನಾಂಶ ನೀಡುವುದಾಗಿ ನಿರುದ್ಯೋಗಿ ಪತಿಯೊಬ್ಬರು ಕೌಟುಂಬಿಕ ನ್ಯಾಯಾಲಯದಲ್ಲಿ ಹೇಳಿರುವ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.

ಆನಂದ ಶರ್ಮಾ ಮತ್ತು ಪತ್ನಿ ದೀಪಾಮಾಲಾ ದಂಪತಿ ವಿಚ್ಛೇದನ ಪ್ರಕರಣವನ್ನು ಇತ್ಯರ್ಥಗೊಳಿಸಿದ ಕೋರ್ಟ್, ಪತ್ನಿಗೆ ಪ್ರತಿ ತಿಂಗಳು 3 ಸಾವಿರ ರು ಮತ್ತು ಮಗಳು ಆರ್ಯಾಗೆ 1,500 ರು ನೀಡುವಂತೆ ಆದೇಶಿಸಿತ್ತು.

Will Pay Maintenance Money to Wife With Rahul Gandhis Nyay Scheme: Jobless Man to Court

' ಕೋರ್ಟ್ ಆದೇಶವನ್ನು ಸದ್ಯಕ್ಕೆ ಪಾಲಿಸಲು ಸಾಧ್ಯವಿಲ್ಲ. ನಿರುದ್ಯೋಗಿಯಾದ ಕಾರಣ ಈ ಆದೇಶ ಪಾಲಿಸಲು ನನಗೆ ಆಗುವುದಿಲ್ಲ. ಆದರೆ, ರಾಹುಲ್ ಗಾಂಧಿ ಅಧಿಕಾರಕ್ಕೆ ಬಂದರೆ ನ್ಯಾಯ್ ಯೋಜನೆಯಡಿ ನೀಡುವ 6 ಸಾವಿರ ರೂ. ಭತ್ಯೆಯನ್ನು ಪತ್ನಿ ಖಾತೆಗೆ ವರ್ಗಾವಣೆ ಮಾಡಲು ಸರ್ಕಾರಕ್ಕೆ ಸೂಚಿಸಬೇಕು' ಎಂದು ಆನಂತ್ ಶರ್ಮ ಹೇಳಿದ್ದಾರೆ.

2006ರಲ್ಲಿ ಮದುವೆಯಾಗಿದ್ದ ದೀಪಮಾಲಾ ಹಾಗೂ ಆನಂದ್ ಅವರು ಕೌಟುಂಬಿಕ ಕಲಹದ ಕಾರಣದಿಂದ ವಿಚ್ಛೇದನ ಬಯಸಿದ್ದರು. ಪ್ರಕರಣದ ವಿಚಾರಣೆ ಏಪ್ರಿಲ್ 29ರಂದು ನಡೆಯಲಿದೆ. ಮಾರ್ಚ್ 25ರಂದು ರಾಹುಲ್ ಗಾಂಧಿ ಅವರು ಘೋಷಿಸಿದಂತೆ ವಾರ್ಷಿಕ 72 ಸಾವಿರ ರು ಗಳನ್ನು ನ್ಯಾಯ್ (ಕನಿಷ್ಠ ಆದಾಯ ಖಾತ್ರಿ) ಯೋಜನೆಯಡಿಯಲ್ಲಿ ನೀಡಲಾಗುತ್ತದೆ. ಸುಮಾರು 25 ಕೋಟಿ ಮಂದಿಗೆ ಇದರ ಲಾಭ ಸಿಗಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+