ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಯಶೋಗಾಥೆ: ಶ್ರದ್ಧಾ ಐಎಎಸ್ ಕನಸು ನನಸಾಗಿದ್ದು ಹೀಗೆ!

|
Google Oneindia Kannada News

ಚತ್ತೀಸ್‌ಗಢ ಜೂನ್ 1: ಸಾಧಿಸುವ ಛಲವೊಂದಿದ್ದರೆ ಯಾವುದೇ ಗುರಿಯನ್ನು ತಲುಪಬಹುದು ಎಂಬುವುದಕ್ಕೆ ಕೇಂದ್ರ ಲೋಕ ಸೇವಾ ಆಯೋಗ ನಾಗರಿಕ ಸೇವಾ ಪರೀಕ್ಷೆಯಲ್ಲಿ 45 ನೇ ರ್‍ಯಾಂಕ್ ಪಡೆದ ಶ್ರದ್ಧಾ ಶುಕ್ಲಾ ಸಾಕ್ಷಿಯಾಗಿದ್ದಾರೆ. ಸಾಮಾನ್ಯವಾಗಿ ಉನ್ನತ ಮಟ್ಟದ ಪರೀಕ್ಷೆಗಳಲ್ಲಿ ಯಶಸ್ವಿಯಾಗಲು ಬಹುತೇಕರು ಅನೇಕ ತರಬೇತಿ ಕೇಂದ್ರಗಳಲ್ಲಿ ಪಡೆಯುತ್ತಾರೆ. ಪರೀಕ್ಷೆಗಳನ್ನು ಎದುರಿಸಲು ಇದು ಅತ್ಯಗತ್ಯ ಎನ್ನುವುದು ಬಹುತೇಕರ ಅನಿಸಿಕೆ. ಆದರೆ ಶ್ರದ್ಧಾ ಶುಕ್ಲಾ ಮಾತ್ರ ಈ ವಿಷಯದಲ್ಲಿ ಕೊಂಚ ವಿಭಿನ್ನ. ಯಾಕೆಂದರೆ ಶ್ರದ್ಧಾ ಅವರು ಆನ್‌ಲೈನ್‌ನಲ್ಲಿ ಅಧ್ಯಯನ ಮಾಡಿ UPSC ಪರೀಕ್ಷೆಯಲ್ಲಿ ರ್‍ಯಾಂಕ್ ಪಡೆದಿದ್ದಾರೆ.

ಸೋಮವಾರದಂದು (ಮೇ 30) ಕೇಂದ್ರ ಲೋಕ ಸೇವಾ ಆಯೋಗ ನಾಗರಿಕ ಸೇವಾ ಪರೀಕ್ಷೆಯ ಅಂತಿಮ ಫಲಿತಾಂಶಗಳನ್ನು ಪ್ರಕಟಿಸಿದೆ. ಈ ಪ್ರತಿಷ್ಠಿತ ಪರೀಕ್ಷೆಯಲ್ಲಿ ಒಟ್ಟು 685 ಅಭ್ಯರ್ಥಿಗಳು ಆಯ್ಕೆಯಾಗಿದ್ದಾರೆ. ಆದರೆ ಶ್ರದ್ಧಾ ಶುಕ್ಲಾ ಆನ್‌ಲೈನ್‌ನಲ್ಲಿ ಅಧ್ಯಯನ ಮಾಡಿ UPSC ಪರೀಕ್ಷೆಯಲ್ಲಿ ರ್‍ಯಾಂಕ್ ಪಡೆದಿದ್ದಾರೆನ್ನುವುದು ವಿಶೇಷ.

ಹುಬ್ಬಳ್ಳಿಯ ರೈಲ್ವೆ ಗಾರ್ಡ್ ಮಗಳಿಗೆ UPSC ಪರೀಕ್ಷೆಯಲ್ಲಿ 482ನೇ ರ್‍ಯಾಂಕ್ಹುಬ್ಬಳ್ಳಿಯ ರೈಲ್ವೆ ಗಾರ್ಡ್ ಮಗಳಿಗೆ UPSC ಪರೀಕ್ಷೆಯಲ್ಲಿ 482ನೇ ರ್‍ಯಾಂಕ್

UPSC ಪರೀಕ್ಷೆಯಲ್ಲಿ 45 ನೇ ರ್‍ಯಾಂಕ್

UPSC ಪರೀಕ್ಷೆಯಲ್ಲಿ 45 ನೇ ರ್‍ಯಾಂಕ್

UPSC CSE 2021 ಫಲಿತಾಂಶಗಳಲ್ಲಿ ರ್‍ಯಾಂಕ್ ಪಡೆದು ಸಾಧಿಸಿದ ಅನೇಕ ಮಹಿಳೆಯರಲ್ಲಿ ಚತ್ತೀಸ್‌ಗಢದ ಶ್ರದ್ಧಾ ಶುಕ್ಲಾ ಕೂಡ ಸೇರಿದ್ದಾರೆ. ಯೂನಿಯನ್ ಪಬ್ಲಿಕ್ ಸರ್ವಿಸ್ ಕಮಿಷನ್ ನಡೆಸಿದ ಭಾರತದಲ್ಲಿನ ಅತ್ಯಂತ ಪ್ರತಿಷ್ಠಿತ ಪರೀಕ್ಷೆಗಳಲ್ಲಿ ಒಂದಾದ ಈ ವರ್ಷದ ಕೇಂದ್ರ ಲೋಕ ಸೇವಾ ಆಯೋಗ ನಾಗರಿಕ ಸೇವಾ ಪರೀಕ್ಷೆಯಲ್ಲಿ ಮೊದಲ ನಾಲ್ಕು ಸ್ಥಾನಗಳನ್ನು ಮಹಿಳೆಯರು ಪಡೆದುಕೊಂಡಿದ್ದಾರೆ. ಈ ಫಲಿತಾಂಶಗಳೀಂದ ಹಲವಾರು ಸ್ಪೂರ್ತಿದಾಯಕ ಕಥೆಗಳು ಹೊರಬಂದಿವೆ. ಶ್ರದ್ಧಾ ಶುಕ್ಲಾ ಅವರು ತಮ್ಮ ಎರಡನೇ ಪ್ರಯತ್ನದಲ್ಲಿ 45 ನೇ ರ್‍ಯಾಂಕ್ ಪಡೆದು ಆನ್‌ಲೈನ್ ಅಧ್ಯಯನಗಳ ಮೂಲಕ IAS ಕನಸನ್ನು ನನಸಾಗಿಸಿಕೊಂಡಿದ್ದಾರೆ.

ತರಬೇತಿ ಅಗತ್ಯತೆ ಅರಿತ ಶ್ರದ್ಧಾ

ತರಬೇತಿ ಅಗತ್ಯತೆ ಅರಿತ ಶ್ರದ್ಧಾ

ರಾಜ್ಯದ ರಾಜಧಾನಿ ರಾಯ್‌ಪುರದಿಂದ ಬಂದಿರುವ 23 ವರ್ಷ ವಯಸ್ಸಿನ ಶುಕ್ಲಾ ಅವರು ಈ ವರ್ಷ ಎರಡನೇ ಬಾರಿಗೆ ಯುಪಿಎಸ್‌ಸಿ ನಾಗರಿಕ ಸೇವೆಗಳ ಲಿಖಿತ ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದಾರೆ. ಮೊದಲ ಬಾರಿಗೆ ವೇಟಿಂಗ್ ಲಿಸ್ಟ್‌ನಲ್ಲಿರುವ ಅರ್ಹತೆಯನ್ನು ಕಳೆದುಕೊಂಡಿದ್ದರು. ಈ ಕಠಿಣ ಪರೀಕ್ಷೆಯಲ್ಲಿ ಸಾಧಿಸಲು ತರಬೇತಿಯ ಅಗತ್ಯತೆಯನ್ನು ಅರಿತ ಶ್ರದ್ಧಾ ಹಲವಾರು ರೀತಿಯಲ್ಲಿ ಪ್ರಯತ್ನ ಮಾಡಿದ್ದಾರೆ.

ದಾವಣಗೆರೆ ಯುವಕ ಸ್ಕಾಲರ್‌ ಶಿಪ್‌ನಲ್ಲೇ ಓದಿ, ಮೊದಲ ಪ್ರಯತ್ನದಲ್ಲೇ ಯುಪಿಎಸ್‌ಸಿ ಪಾಸ್ದಾವಣಗೆರೆ ಯುವಕ ಸ್ಕಾಲರ್‌ ಶಿಪ್‌ನಲ್ಲೇ ಓದಿ, ಮೊದಲ ಪ್ರಯತ್ನದಲ್ಲೇ ಯುಪಿಎಸ್‌ಸಿ ಪಾಸ್

'ಉತ್ತೀರ್ಣರಾಗಲು ತರಬೇತಿ ಏಕೈಕ ಮಾರ್ಗವಲ್ಲ'

'ಉತ್ತೀರ್ಣರಾಗಲು ತರಬೇತಿ ಏಕೈಕ ಮಾರ್ಗವಲ್ಲ'

ಆದರೆ ಗೌರವಾನ್ವಿತ ಅಧಿಕಾರಿಯಾಗುವ ಹಾದಿಯಲ್ಲಿರುವ ಯುವ UPSC ಆಕಾಂಕ್ಷಿಯು ಆನ್‌ಲೈನ್ ಅಧ್ಯಯನದೊಂದಿಗೆ ಮನೆಯಲ್ಲಿಯೇ ತನ್ನ ಸಿದ್ಧತೆಗಳನ್ನು ಮಾಡಿಕೊಂಡಿರುವುದಾಗಿ ಹೇಳಿಕೊಳ್ಳುತ್ತಾರೆ. ನಾಗರಿಕ ಸೇವಾ ತರಬೇತಿ ಸಂಸ್ಥೆಗಳಿಂದ ಕೋಚಿಂಗ್ ಪಡೆಯಲು ದೊಡ್ಡ ಮೊತ್ತದ ಹಣವನ್ನು ಖರ್ಚು ಮಾಡುವುದು ಪರೀಕ್ಷೆಗಳಲ್ಲಿ ಉತ್ತೀರ್ಣರಾಗುವ ಏಕೈಕ ಮಾರ್ಗವಲ್ಲ ಎಂದು ಅವರು ಸುದ್ದಿವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.

ಕುಟುಂಬದ ಮಾಹಿತಿ

ಕುಟುಂಬದ ಮಾಹಿತಿ

UPSC ಪರೀಕ್ಷೆಯ ಹೊರತಾಗಿ ಶುಕ್ಲಾ ಅವರು ರಾಜ್ಯ ಮಟ್ಟದ ಖಾತೆಗಳು ಮತ್ತು ಟ್ಯಾಲಿ ಸೇವೆಗಳ ಪ್ರವೇಶ ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದಾರೆ ಎಂದು ವರದಿಯಾಗಿದೆ. ಆಕೆಯ ತಂದೆ ಸುಶೀಲ್ ಆನಂದ್ ಎಂಬ ಛತ್ತೀಸ್‌ಗಢ ಕಾಂಗ್ರೆಸ್‌ನ ನಾಯಕರಾಗಿದ್ದಾರೆ.

ರಾಯ್‌ಪುರದ MGM ಶಾಲೆಯಲ್ಲಿ ತನ್ನ ಶಾಲಾ ಶಿಕ್ಷಣವನ್ನು ಮಾಡಿದ ಶುಕ್ಲಾ ಅವರು ಪಂ.ನಿಂದ ಮಾನ್ಯತೆ ಪಡೆದ ರವಿಶಂಕರ್ ಶುಕ್ಲಾ ವಿಶ್ವವಿದ್ಯಾಲಯ ಪದವಿ ಕಾಲೇಜಿನಿಂದ BSc ಮತ್ತು MSc ಶಿಕ್ಷಣವನ್ನು ಪಡೆದರು. ನಂತರ ಅವರು ದೆಹಲಿಯ ಪಾರ್ಥ್ ಅಕಾಡೆಮಿಯಿಂದ UPSC ಗಾಗಿ ತಯಾರಿ ನಡೆಸಿದರು. ಆನ್‌ಲೈನ್ ಮಾಧ್ಯಮದ ಮೂಲಕ ಮನೆಯಿಂದಲೇ ತನ್ನ ಸಂಪೂರ್ಣ ಅಧ್ಯಯನವನ್ನು ಮಾಡುತ್ತಿದ್ದರು. ತನ್ನ ಮೂರನೇ ಪ್ರಯತ್ನದಲ್ಲಿ 45 ನೇ ರ್‍ಯಾಂಕ್ ಪಡೆದಿದ್ದಾರೆ ಎಂದು ವರದಿಯಾಗಿದೆ.

(ಒನ್ಇಂಡಿಯಾ ಸುದ್ದಿ)

Recommended Video

Match Finisher Dinesh Karthik ಗೆ ಹುಟ್ಟುಹಬ್ಬದ ಸಂಭ್ರಮ | #Cricket | Oneindia Kannada

English summary
Here is the UPSC success story of Shraddha Shukla from Chattisgarh: she secured All India Rank 45.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X