ಬಿಜೆಪಿ ಹಿರಿಯ ನಾಯಕರ ಸಾವಿಗೆ ಕಾರಣ ಬಹಿರಂಗ ಪಡಿಸಿದ ಸಾಧ್ವಿ ಪ್ರಜ್ಞಾ!
Recommended Video
ಭೋಪಾಲ್, ಆಗಸ್ಟ್ 26: ಮಾಜಿ ವಿತ್ತ ಸಚಿವ ಅರುಣ್ ಜೇಟ್ಲಿ ಅವರ ನಿಧನಕ್ಕೆ ಶ್ರದ್ಧಾಂಜಲಿ ಅರ್ಪಿಸುವ ಸಮಯದಲ್ಲಿ ಮಾತನಾಡುತ್ತಿದ್ದ ಸಾಧ್ವಿ ಪ್ರಜ್ಞಾ ಸಿಂಗ್ ನೀಡಿದ ಹೇಳಿಕೆ ಇದೀಗ ಅಂತರ್ಜಾಲ ಲೋಕದಲ್ಲಿ ಸಾಕಷ್ಟು ಚರ್ಚೆಗೊಳಗಾಗಿದೆ.
"ನನಗೆ ಗುರುಗಳು ಒಮ್ಮೆ ಹೇಳಿದ್ದರು, ನಮ್ಮ(ಬಿಜೆಪಿ) ಎದುರು ಕೆಟ್ಟ ಕಾಲವಿದೆ. ವಿಪಕ್ಷಗಳು ನಮ್ಮ ವಿರುದ್ಧ 'ಮಾರಕ ಶಕ್ತಿ'ಯನ್ನು ಉಪಯೋಗಿಸಿಕೊಂಡು ಸೇಡು ತೀರಿಸಿಕೊಳ್ಳಲು ನೋಡುತ್ತವೆ ಎಂದು. ಆದರೆ ನಾನು ಅದನ್ನು ಮರೆತಿದ್ದೆ. ಆದರೆ ನಮ್ಮ ಮಹಾನ್ ನಾಯಕರೆಲ್ಲ ನಮ್ಮನ್ನು ಅಕಾಲಿಕವಾಗಿ ಅಗಲುತ್ತಿರುವುದನ್ನು ನೋಡಿದರೆ ಗುರುಗಳು ಅಂದು ಹೇಳಿದ್ದ ಮಾತು ನಿಜವೇನೋ ಅನ್ನಿಸುತ್ತಿದೆ ಎಂದು ಸಾದ್ವಿ ಪ್ರಗ್ಯಾ ಸಿಂಗ್ ಹೇಳಿದ್ದರು.
ಈ ಆಗಸ್ಟ್ ತಿಂಗಳಲಿನಲ್ಲೇ ಕೇಂದ್ರದ ಮಾಜಿ ಸಚಿವರಾದ, ಬಿಜೆಪಿ ಹಿರಿಯ ನಾಯಕಿ ಸುಷ್ಮಾ ಸ್ವರಾಜ್ ಮತ್ತು ಮಾಜಿ ವಿತ್ತ ಸಚಿವ ಅರುಣ್ ಜೇಟ್ಲಿ ವಿಧಿವಶರಾದರು. ಕಳೆದ ಒಂದು ವರ್ಷಗಳಲ್ಲಿ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ, ಗೋವಾದ ಮಾಜಿ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್, ಮಾಜಿ ಕೇಂದ್ರ ಸಚಿವ ಅನಂತ್ ಕುಮಾರ್ ಅವರು ವಿಧಿವಶರಾಗಿದ್ದಾರೆ.

ಈ ಎಲ್ಲವುಗಳನ್ನು ಮನಸ್ಸಿನಲ್ಲಿಟ್ಟುಕೊಂಡು ಹೇಳಿಕೆ ನೀಡಿದ ಪ್ರಜ್ಞಾ ಸಿಂಗ್, "ವಿರೋಧಪಕ್ಷಗಳೇ ಮಾರಕ ಶಕ್ತಿಗಳನ್ನು ಪ್ರಯೋಗಿಸಿ ಬಿಜೆಪಿ ಹಿರಿಯ ನಾಯಕರ ಸಾವಿಗೆ ಕಾರಣವಾಗುತ್ತಿವೆ" ಎಂದಿದ್ದಾರೆ.
"ನನಗೆ ಜೈಲಿನಲ್ಲಿ ಹಿಂಸೆ ನೀಡಿದ್ದಕ್ಕೆ ನಾನು ಹೇಮಂತ್ ಕರ್ಕರೆ ಅವರಿಗೆ ಶಾಪ ನೀಡಿದ್ದೇ ಅವರು ಮುಂಬೈ ಸ್ಫೋಟದ ಸಮಯದಲ್ಲಿ ಸಾವಿಗೀಡಾಗಲು ಕಾರಣ" ಎಂಬ ಹೇಳಿಕೆ ನೀಡಿ ಇತ್ತೀಚೆಗಷ್ಟೇ ಸಾಧ್ವಿ ಪ್ರಜ್ಞಾ ಸಿಂಗ್ ವಿವಾದ ಸೃಷ್ಟಿಸಿದ್ದನ್ನು ಇಲ್ಲಿ ಸ್ಮರಿಸಬಹುದು.












Click it and Unblock the Notifications