ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಂದೇ ಮಾತರಂ ಹಾಡಿಗೆ ಕೊನೆಗೂ ತಲೆಬಾಗಿದ ಕಮಲ್ ನಾಥ್!

|
Google Oneindia Kannada News

ಭೋಪಾಲ್, ಜನವರಿ 03: ಸೆಕ್ರೆಟರಿಯೇಟ್ ಕಚೇರಿಯಲ್ಲಿ ವರ್ಷದ ಮೊದಲ ದಿನವೇ ಸಂಪ್ರದಾಯದಂತೆ ವಂದೇ ಮಾತರಂ ಹಾಡಲು ವಿರೋಧಿಸಿದ್ದ ಮಧ್ಯಪ್ರದೇಶ ಮುಖ್ಯಮಂತ್ರಿ ಕಮಲ್ ನಾಥ್ ಕೊನೆಗೂ ತಲೆಬಾಗಿದ್ದಾರೆ.

ವಂದೇ ಮಾತರಂ ರದ್ದು : ಶವಪೆಟ್ಟಿಗೆಗೆ ಕಾಂಗ್ರೆಸ್ ಹೊಡೆದುಕೊಂಡ ಕೊನೆಯ ಮೊಳೆ?ವಂದೇ ಮಾತರಂ ರದ್ದು : ಶವಪೆಟ್ಟಿಗೆಗೆ ಕಾಂಗ್ರೆಸ್ ಹೊಡೆದುಕೊಂಡ ಕೊನೆಯ ಮೊಳೆ?

ಪ್ರತಿ ತಿಂಗಳ ಮೊದಲ ದಿನ ಮಧ್ಯಪ್ರದೇಶದ ಸೆಕ್ರೆಟರಿಯೇಟ್ ಕಚೇರಿಯಲ್ಲಿ ವಂದೇ ಮಾತರಂ ಹಾಡಲಾಗುತ್ತಿತ್ತು. ಕಳೆದ ಹದಿನೈದು ವರ್ಷಗಳಿಂದ ಶಿವರಾಜ್ ಸಿಂಗ್ ಚೌಹಾಣ್ ಅವರು ಈ ಪದ್ಧತಿಯನ್ನು ರೂಢಿಸಿಕೊಂಡು, ಪಾಲಿಸಿಕೊಂಡು ಬಂದಿದ್ದರು. ಆದರೆ 'ವಂದೇ ಮಾತರಂ' ಹಾಡಿಯೇ ದೇಶಭಕ್ತಿಯನ್ನು ವ್ಯಕ್ತಪಡಿಸುವ ಅಗತ್ಯವಿಲ್ಲ ಎಂದ ಕಮಲ್ ನಾಥ್ ಈ ಪದ್ಧತಿಯನ್ನು ಮುಂದುವರಿಸುವುದಿಲ್ಲ ಎಂದಿದ್ದರು.

ಮಧ್ಯಪ್ರದೇಶದಲ್ಲಿ ವರ್ಷದ ಮೊದಲ ದಿನ 'ವಂದೇ ಮಾತರಂ' ವಿವಾದ ಮಧ್ಯಪ್ರದೇಶದಲ್ಲಿ ವರ್ಷದ ಮೊದಲ ದಿನ 'ವಂದೇ ಮಾತರಂ' ವಿವಾದ

MP CM Kamal Nath gives permission to sing Vande Mataram!

ಅವರ ನಡೆಗೆ ಸಾಕಷ್ಟು ವಿರೋಧ ವ್ಯಕ್ತವಾಗಿತ್ತು. ಸೆಕ್ರೆಟರಿಯೇಟ್ ಕಚೇರಿಯಲ್ಲಿ ನಾನೇ ವಂದೇ ಮಾತರಂ ಹಾಡುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಹೇಳಿದ್ದರು. ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬರುತ್ತಿದ್ದಂತೆಯೇ ತೆಗೆದುಕೊಂಡ ಈ ವಿವಾದಾತ್ಮಕ ನಡೆಗೆ ಸಾಕಷ್ಟು ಆಕ್ರೋಶ ವ್ಯಕ್ತವಾದ ಹಿನ್ನೆಲೆಯಲ್ಲಿ ತನ್ನ ನಿರ್ಧಾರದಿಂದ ಅದು ಹಿಂದೆ ಸರಿದಿದೆ.

English summary
A day after raking up a controversy by stopping the singing of National song Vande Mataram at the Madhya Pradesh secretariat, CM Kamal Nath on announced a new policy to implement tradition.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X