ಒಂದೇ ಮಂಟಪ: ಪತ್ನಿ ಜೊತೆ ಮತ್ತೊಬ್ಬಳಿಗೂ ತಾಳಿ ಕಟ್ಟಿದ ವ್ಯಕ್ತಿ
ಭೋಪಾಲ್, ಡಿಸೆಂಬರ್ 11: ಪತ್ನಿಯೊಂದಿಗೆ ಮರುಮದುವೆಯಾಗಿ ಅದೇ ಮಂಟಪದಲ್ಲಿ ಮತ್ತೊಬ್ಬಳಿಗೆ ತಾಳಿ ಕಟ್ಟಿರುವ ಘಟನೆ ಮಧ್ಯಪ್ರದೇಶದ ಭಿಂಡ್ ಜಿಲ್ಲೆಯಲ್ಲಿ ನಡೆದಿದೆ.
35 ವರ್ಷದ ವ್ಯಕ್ತಿ ದಿಲೀಪ್ ತನ್ನ ಪತ್ನಿ ಜೊತೆಯೇ ಮರು ವಿವಾಹವಾಗಿ ಬಳಿಕ ಆಕೆಯ ಸಂಬಂಧಿಯನ್ನು ಮದುವೆಯಾಗಿದ್ದಾರೆ. ದಿಲೀಪ್ ಕುಮಾರ್ ವಿನಿತಾ ಎಂಬುವವರನ್ನು ಕಳೆದ 9 ವರ್ಷಗಳ ಹಿಂದೆ ಮದುವೆಯಾಗಿದ್ದರು. ಅವರಿಗೆ ಇಬ್ಬರು ಹೆಣ್ಣುಮಕ್ಕಳು ಹಾಗೂ ಒಂದು ಗಂಡು ಮಗುವಿದೆ.
ಆದರೆ ವಿನಿತಾ ಮಾರಣಾಂತಿಕ ಕಾಯಿಲೆಯಿಂದ ನರಳುತ್ತಿದ್ದು, ಮುಂದೆ ತಮ್ಮ ಮಕ್ಕಳ ಹಾಗೂ ಕುಟುಂಬದವರ ಪೋಷಣೆಗಾಗಿ ಮತ್ತೊಂದು ಮದುವೆಯಾಗುವಂತೆ ಪತಿಗೆ ಒತ್ತಾಯಿಸಿದ್ದರು.

ಪತ್ನಿಯ ಇಚ್ಛೆಯಂತೆ ದಿಲೀಪ್ ಕುಮಾರ್ ಪತ್ನಿ ಸಮ್ಮುಖದಲ್ಲೇ ಮತ್ತೊಂದು ಮದುವೆಯಾಗಿದ್ದಾರೆ. ಹಿಂದೂ ವಿವಾಹ ಕಾಯ್ದೆ ಪ್ರಕಾರ ಇದು ಅಪರಾಧವಾಗಿದೆ. ಇದುವರೆಗೂ ಯಾವುದೇ ದೂರು ಬಂದಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.












Click it and Unblock the Notifications