ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರೊನಾ ಶಂಕಿತರ ಬಗ್ಗೆ ಸುಳಿವು ಕೊಟ್ಟು ಹಣ ಪಡೆಯಿರಿ

|
Google Oneindia Kannada News

ಭೋಪಾಲ್, ಏಪ್ರಿಲ್ 17:ಮಧ್ಯ ಪ್ರದೇಶದಲ್ಲಿ ದಿನದಿಂದ ದಿನಕ್ಕೆ ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಿವೆ. ಶೂನ್ಯ ಪ್ರಕರಣ ಹೊಂದಿರುವ ರಾಜ್ಯ ಎಂದು ಮಾಡಲು ಐಪಿಎಸ್ ಅಧಿಕಾರಿಯೊಬ್ಬರು ಹೊಸ ಪ್ಲ್ಯಾನ್ ಮಾಡಿದ್ದಾರೆ.

ಅತಿ ಹೆಚ್ಚು ಪ್ರಕರಣಗಳನ್ನು ಹೊಂದಿರುವ ನಗರಕ್ಕೆ ಹೊಸದಾಗಿ ಬರುವವರನ್ನು ಪತ್ತೆ ಹಚ್ಚಲು ಉಪಾಯವೊಂದನ್ನು ಮಾಡಿದ್ದಾರೆ. ಇಂದೋರ್ ಹಾಗೂ ಭೋಪಾಲ್ ಎರಡು ನಗರಗಳನ್ನು ರೆಡ್ ಝೋನ್ ಎಂದು ಗುರುತಿಸಲಾಗಿದೆ. ಈ ಪ್ರದೇಶದೊಳಗೆ ಹೊರಗಿನಿಂದ ಬಂದಿರುವ ವ್ಯಕ್ತಿ ಬಗ್ಗೆ ಮಾಹಿತಿ ಕೊಟ್ಟವರಿಗೆ 500 ರೂ. ನೀಡುವುದಾಗಿ ಘೋಷಿಸಿದ್ದಾರೆ.

 2000 ರೂ ಸಿಗುವ ವದಂತಿ- ಮಂಗಳೂರಲ್ಲಿ ಮುಗಿಬಿದ್ದ ನೂರಾರು ಜನ 2000 ರೂ ಸಿಗುವ ವದಂತಿ- ಮಂಗಳೂರಲ್ಲಿ ಮುಗಿಬಿದ್ದ ನೂರಾರು ಜನ

ಘೋಷಣೆ ಮಾಡಿ ಕೆಲವೇ ಗಂಟೆಗಳಲ್ಲಿ 50 ಕರೆಗಳು ಬಂದಿವೆ. ಬುಧವಾರ 2014 ಬ್ಯಾಚ್ ಐಪಿಎಸ್ ಅಧಿಕಾರಿ ವಿಡಿಯೋ ಒಂದನ್ನು ಹಂಚಿಕೊಂಡಿದ್ದರು. ಅದರಲ್ಲಿ ರೆಡ್ ಝೋನ್ ಒಳಗೆ ಬಂದಿರುವವರ ಮಾಹಿತಿ ಕೊಟ್ಟರೆ ಹಣ ನೀಡುವುದಾಗಿ ಹೇಳಿದ್ದರು.

If You Give Information About Corona Suspects Will Get Money

ತಮಗೆ ಕೊರೊನಾ ಲಕ್ಷಣಗಳಿದ್ದರೂ ಕೆಲವರು ಆಸ್ಪತ್ರೆಗಳಿಗೆ ಹೋಗಲು ಹಿಂದುಮುಂದು ನೋಡುತ್ತಾರೆ. ಹೀಗಾಗಿ ಈ ರೀತಿಯ ಕ್ರಮಗಳನ್ನು ಕೈಗೊಳ್ಳಲಾಗಿದ್ದು, ಉತ್ತಮ ಪ್ರತಿಕ್ರಿಯೆ ಲಭ್ಯವಾಗಿದೆ ಎಂದು ಅವರು ತಿಳಿಸಿದ್ದಾರೆ.

ಒಟ್ಟು 43 ಮಂದಿ ಗಂಟಲು ದ್ರವ ಹಾಗೂ ರಕ್ತದ ಸ್ಯಾಂಪಲ್‌ಗಳನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿದ್ದು ಎಲ್ಲರ ವರದಿ ನೆಗೆಟಿವ್ ಬಂದಿದೆ. ಸಾಕಷ್ಟು ಮಂದಿ ಆಂಬ್ಯುಲೆನ್ಸ್ , ಟ್ರಕ್‌ಗಳಲ್ಲಿ ಜನರನ್ನು ಸಾಗಿಸುತ್ತಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ. ಅದರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ ಎಸ್‌ಪಿ ನಾಗೇಂದ್ರ ಸಿಂಗ್ ತಿಳಿಸಿದ್ದಾರೆ.

ಮಧ್ಯಪ್ರದೇಶದಲ್ಲಿ ಕಳೆದ 24 ಗಂಟೆಗಳಲ್ಲಿ 361 ಹೊಸ ಪ್ರಕರಣಗಳು ಪತ್ತೆಯಾಗಿವೆ. ಭಾರತದಲ್ಲಿ 13,387 ಪ್ರಕರಣಗಳು ದೃಢಪಟ್ಟಿದ್ದು, 1749 ಮಂದಿ ಗುಣಮುಖರಾಗಿದ್ದಾರೆ.437 ಮಂದಿ ಸಾವನ್ನಪ್ಪಿದ್ದಾರೆ.

ವಿಶ್ವದಾದ್ಯಂತ ಕೊರೊನಾ ವೈರಸ್‌ಗೆ 1,45,568 ಮಂದಿ ಮೃತಪಟ್ಟಿದ್ದಾರೆ.21,59,450 ಮಂದಿ ಕೊವಿಡ್ 19ನಿಂದ ಬಳಲುತ್ತಿದ್ದಾರೆ.

English summary
A young IPS officer in Bhind district of Madhya Pradesh has announced a bounty for information on people sneaking into his region from Indore and Bhopal.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X