ರಿಮೋಟ್ ಕಂಟ್ರೋಲ್ ಪ್ರಧಾನಿಯಾಗಿರಲಿಲ್ಲ: ಮೋದಿಗೆ ಸಿಂಗ್ ಟಾಂಗ್!
Recommended Video

madhya pradesh assembly elections 2018 : ರಿಮೋಟ್ ಕಂಟ್ರೋಲ್ ಪ್ರಧಾನಿಯಾಗಿರಲಿಲ್ಲ: ಮೋದಿಗೆ ಸಿಂಗ್ ಟಾಂಗ್!
ಇಂಧೋರ್, ನವೆಂಬರ್ 22: 'ನಾನು ರಿಮೋಟ್ ಕಂಟ್ರೋಲ್ ಪ್ರಧಾನಿಯಾಗಿರಲಿಲ್ಲ' ಎಂದು ಪ್ರಧಾನಿ ನರೇಂದ್ರ ಮೋದಿಯವರಿಗೆ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಖಡಕ್ ಉತ್ತರ ನೀಡಿದ್ದಾರೆ.
ಮಧ್ಯಪ್ರದೇಶದ ಇಂಧೋರ್ ನಲ್ಲಿ ನಡೆದ ಸಾರ್ವಜನಿಕ ಸಭೆಯೊಂದರಲ್ಲಿ ಮಾತನಾಡಿದ ಅವರು, ನಾನು ಯಾವತ್ತಿಗೂ ರಿಮೋಟ್ ಕಂಟ್ರೋಲ್ ಪ್ರಧಾನಿಯಾಗಿರಲಿಲ್ಲ. ನಮ್ಮ ಸರ್ಕಾರ ಮತ್ತು ಪಕ್ಷದ ನಡುವೆ ಸಾಕಷ್ಟು ಸೌಹಾರ್ದತೆ ಇತ್ತು" ಎಂದಿದ್ದಾರೆ.
ಇತ್ತೀಚೆಗಷ್ಟೇ ಪ್ರಧಾನಿ ನರೇಂದ್ರ ಮೋದಿಯವರು, 'ಮಾಜಿ ಪ್ರಧಾನಿ ಡಾ.ಮನಮೋಹನ್ ಸಿಂಗ್ ಅವರು ಹತ್ತು ವರ್ಷಗಳ ಕಾಲ ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ರಿಮೋಟ್ ಕಂಟ್ರೋಲ್ ಆಗಿ ಕೆಲಸ ಮಾಡಿದರು' ಎಂದಿದ್ದರು.

ಈ ಮಾತಿಗೆ ಉತ್ತರಿಸಿದ ಸಿಂಗ್, 'ನಮ್ಮ ಸರ್ಕಾರದಲ್ಲಿ ಪಕ್ಷ ಬೇರೆ, ಸರ್ಕಾರ ಬೇರೆ ಎಂಬಂತೆ ಕೆಲಸ ಮಾಡಿಲ್ಲ. ಎಲ್ಲರೂ ಸರ್ಕಾರದ ಕೆಲಸವನ್ನು ಸಮರ್ಪಣಾ ಭಾವದಿಂದ ಮಾಡಿದರು. ನಮ್ಮ ಸರ್ಕಾರದ ಯಶಸ್ಸಿಗೂ ಅದೇ ಕಾರಣ. ನಮ್ಮ ಪಕ್ಷದಲ್ಲಿ ಯಾರಲ್ಲೂ ಭಿನ್ನಾಭಿಪ್ರಾಯಗಳು ಹುಟ್ಟಿರಲಿಲ್ಲ' ಎಂದರು.












Click it and Unblock the Notifications