ಪೊಲೀಸ್ ಅಧಿಕಾರಿ ಮಾನವೀಯತೆ; ವಿಡಿಯೋ ವೈರಲ್

ಭೋಪಾಲ್, ಸೆಪ್ಟೆಂಬರ್ 28 : ಪೊಲೀಸರನ್ನು ಜನರು ಸದಾ ಟೀಕಿಸುವುದೇ ಹೆಚ್ಚು. ಪೊಲೀಸರ ಮಾನವೀಯ ಮುಖದ ಬಗ್ಗೆ ಆಗಾಗ ಉದಾಹರಣೆಗಳು ಸಿಗುತ್ತವೆ. ಈಗ ಇಂತಹ ಒಂದು ವಿಡಿಯೋ ವೈರಲ್ ಆಗಿದೆ. ಮಾಜಿ ಮುಖ್ಯಮಂತ್ರಿಗಳ ಈ ವಿಡಿಯೋವನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ.

ಮಧ್ಯಪ್ರದೇಶದ ಪೊಲೀಸ್ ಒಬ್ಬರು ವೃದ್ಧೆಗೆ ಮಾಡಿರುವ ಸಹಾಯದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಮಹಿಳಾ ಪೊಲೀಸ್ ಅಧಿಕಾರಿಯ ಕಾರ್ಯವನ್ನು ಮಾಜಿ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌವ್ಹಾಣ್ ಶ್ಲಾಘಿಸಿದ್ದಾರೆ.

ಶುದ್ಧಾ ಶುಕ್ಲಾ ಎಂಬ ಪೊಲೀಸ್ ಅಧಿಕಾರಿ ಬೀದಿ ಬದಿಯಲ್ಲಿದ್ದ ವೃದ್ಧ ಮಹಿಳೆಗೆ ಬಟ್ಟೆ ಮತ್ತು ಒಂದು ಜೊತೆ ಚಪ್ಪಲಿ ನೀಡಿದರು. ವೃದ್ಧೆ ಪೊಲೀಸ್ ಅಧಿಕಾರಿಗೆ ಧನ್ಯವಾದ ಸಲ್ಲಿಸಿದಾಗ ಅವರು ಭಾವುಕರಾದರು. ಈ ವಿಡಿಯೋ ಈಗ ವೈರಲ್ ಆಗಿದೆ.

polcie

ಮಾಜಿ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌವ್ಹಾಣ್ "ಇಂತಹ ಮಗಳು ಇರುವುದಕ್ಕೆ ಮಧ್ಯಪ್ರದೇಶ ಹೆಮ್ಮೆ ಪಡತ್ತದೆ" ಎಂದು ವಿಡಿಯೋವನ್ನು ಟ್ವೀಟ್ ಮಾಡಿದ್ದರು. ಈ ವಿಡಿಯೋವನ್ನು 25 ಸಾವಿರ ಜನರು ನೋಡಿದ್ದು, 6000 ಜನರು ಲೈಕ್ ಮಾಡಿದ್ದಾರೆ. ಕಮೆಂಟ್‌ನಲ್ಲಿ ಶ್ರದ್ಧಾ ಕಾರ್ಯವನ್ನು ಎಲ್ಲರೂ ಶ್ಲಾಘಿಸಿದ್ದಾರೆ.

ಕಳೆದ ವಾರ ಬೆಂಗಳೂರಿನಲ್ಲಿ ಭಾರಿ ಮಳೆ ಸುರಿಯುವಾಗ ಸಂಚಾರಿ ಪೊಲೀಸರೊಬ್ಬರು ರಸ್ತೆಯಲ್ಲಿ ನಿಂತಿದ್ದ ನೀರು ಸರಾಗವಾಗಿ ಹರಿದು ಹೋಗಲು ವ್ಯವಸ್ಥೆ ಮಾಡುತ್ತಿದ್ದ ವಿಡಿಯೋಗೆ ಜನರು ಮೆಚ್ಚುಗೆ ಸೂಚಿಸಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+