ಗುರಾಯಿಸಿದ್ದಾಳೆ ಎಂದು ಯುವತಿ ಮೇಲೆ ಹಲ್ಲೆ ಮಾಡಿದ ನಾಲ್ವರು ಯುವತಿಯರು
ಭೋಪಾಲ್, ಜೂನ್ 14: ಗುರಾಯಿಸಿದಳು ಎನ್ನುವ ಕ್ಷುಲ್ಲಕ ಕಾರಣಕ್ಕೆ ಪಿಜ್ಜಾ ಅಂಗಡಿಯ ಮಹಿಳಾ ಉದ್ಯೋಗಿ ಮೇಲೆ ನಾಲ್ವರು ಯುವತಿಯರು ಅಮಾನುಷವಾಗಿ ಹಲ್ಲೆ ಮಾಡಿರುವ ಘಟನೆ ನಡೆದಿದೆ. ಹಲ್ಲೆ ಮಾಡುತ್ತಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ನಾಲ್ವರು ಯುವತಿಯರು ಇನ್ನೊಬ್ಬ ಮಹಿಳಾ ಉದ್ಯೋಗಿಯನ್ನು ಆಕೆಯ ಕೂದಲು ಹಿಡಿದು ಎಳೆದಾಡುತ್ತಾರೆ. ಆ ಯುವತಿ ನೆಲಕ್ಕೆ ಬಿದ್ದ ನಂತರ ಆಕೆಯನ್ನು ಕೋಲಿನಿಂದ ಥಳಿಸಲಾಗಿದೆ. ಹೊಡೆಯದಂತೆ ಬೇಡಿಕೊಂಡರು ಯುವತಿ ಮೇಲೆ ಅಮಾನುಷವಾಗಿ ಹಲ್ಲೆ ಮಾಡಲಾಗಿದೆ.
ಮಧ್ಯಪ್ರದೇಶದ ಇಂದೋರ್ ದ್ವಾರಕಾಪುರಿ ಪ್ರದೇಶದಲ್ಲಿ ಈ ಘಟನೆ ನಡೆದಿದೆ ಎಂಬ ಮಾಹಿತಿ ಇದೆ. ಇದೀಗ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ವಿಡಿಯೋದಲ್ಲಿ ಡೊಮಿನೋಸ್ ಪಿಜ್ಜಾದಲ್ಲಿ ಕೆಲಸ ಮಾಡುವ ಸಂತ್ರಸ್ತ ಯುವತಿ ಸಹಾಯಕ್ಕಾಗಿ ಅಳುತ್ತಿರುವುದನ್ನು ಕಾಣಬಹುದು. ಆದರೆ ನಾಲ್ವರು ಯುವತಿಯರು ಪದೇ ಪದೇ ಕೆನ್ನೆಗೆ ಹೊಡೆಯುತ್ತಾರೆ ಮತ್ತು ಬಿದಿರಿನ ಕೋಲಿನಿಂದ ಥಳಿಸಿದ್ದಾರೆ.

ನಾಲ್ವರು ಯುವತಿಯರು ಸ್ಥಳೀಯ ಗ್ಯಾಂಗ್‌ನ ಭಾಗವಾಗಿದ್ದಾರೆ ಎಂದು ವರದಿಯಾಗಿದೆ ಮತ್ತು ಸ್ವತಃ ಹಲ್ಲೆ ಮಾಡಿದವರೇ ವಿಡಿಯೋವನ್ನು ಅಂತರ್ಜಾಲದಲ್ಲಿ ವೈರಲ್ ಮಾಡಿದ್ದಾರೆ ಎನ್ನಲಾಗಿದೆ.
This is from #Indore, #MadhyaPradesh.
— Hate Detector 🔍 (@HateDetectors) June 14, 2022
A young pizza delivery girl was mercilessly thrashed, grabbed by the hair, in public by a group of girls in Indore.#ViralVideo #Dominos #Pizza #DeliveryGirl pic.twitter.com/F5HrJV5alX
ವಿಡಿಯೋದಲ್ಲಿ ಗ್ಯಾಂಗ್‌ನ ಯುವತಿಯ ಕೂದಲನ್ನು ಎಳೆದುಕೊಂಡು ಹೋಗುವುದನ್ನು ತೋರಿಸುತ್ತದೆ, ಆಕೆ ಅಳುತ್ತಾ ಸಹಾಯಕ್ಕಾಗಿ ಬೇಡಿಕೊಂಡಿದ್ದಾಳೆ. ಯುವತಿ ನೆಲಕ್ಕೆ ಬಿದ್ದರೂ ಸುಮ್ಮನಾಗದೆ, ಒಬ್ಬಳು ಅವಳನ್ನು ಬಿದಿರಿನ ಕೋಲಿನಿಂದ ಹೊಡೆಯಲು ಪ್ರಾರಂಭಿಸುತ್ತಾಳೆ.
ಹಲ್ಲೆಗೊಳಗಾದ ಯುವತಿ ಪೊಲೀಸರಿಗೆ ಕರೆ ಮಾಡುವುದಾಗಿ ಹೇಳಿದಾಗ, ಹಲ್ಲೆ ಮಾಡುವವಳು ಪೊಲೀಸ್ ದೂರು ಕೊಡು ಎಂದು ಹೇಳಿ ಮತ್ತೆ ಹೊಡೆದಿದ್ದಾಳೆ. ಹಲ್ಲೆಗೊಳಗಾದ ಯುವತಿ ಕೊನೆಗೆ ಆಶ್ರಯ ಪಡೆಯಲು ಹತ್ತಿರದ ಮನೆಯೊಂದಕ್ಕೆ ಪ್ರವೇಶಿಸುವುದನ್ನು ಕಾಣಬಹುದು.
ಸಾರ್ವಜನಿಕ ಸ್ಥಳದಲ್ಲಿ ಯುವತಿಯನ್ನು ಹೀಗೆ ಹೊಡೆಯುತ್ತಿದ್ದರು ಆಕೆಯನ್ನು ರಕ್ಷಿಸುವ ಪ್ರಯತ್ನವನ್ನು ಸ್ಥಳದಲ್ಲಿದ್ದ ಯಾರೊಬ್ಬರು ಮಾಡಲಿಲ್ಲ. ಯುವತಿ ಆ ನಾಲ್ವರನ್ನು ದಿಟ್ಟಿಸಿ ನೋಡಿದಳೆಂದು ಹಲ್ಲೆ ಮಾಡಿದ್ದಾರೆ ಎಂದು ಹೇಳಲಾಗಿದೆ.
ಹಲ್ಲೆಗೊಳಗಾದವಳನ್ನು ಇಂದೋರ್ ಮೂಲದ ನಂದಿನಿ ಯಾದವ್ ಎಂದು ಗುರುತಿಸಲಾಗಿದೆ. ಸಂತ್ರಸ್ತೆ ಪೊಲೀಸ್ ಠಾಣೆಗೆ ದೂರು ನೀಡಿದ್ದು, ದೂರಿನ ಆಧಾರದ ಮೇಲೆ ನಾಲ್ವರು ಮಹಿಳೆಯರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ವಿಡಿಯೋದಲ್ಲಿರುವ ಆರೋಪಿಗಳನ್ನು ಪತ್ತೆ ಹಚ್ಚಲು ಯತ್ನಿಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.












Click it and Unblock the Notifications