ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದಿಗ್ವಿಜಯ್ ಸಿಂಗ್ ರೋಡ್ ಶೋನಲ್ಲಿ ಕೇಸರಿ ಕಲರವ: ವಾಸ್ತವತೆ ಏನು?

|
Google Oneindia Kannada News

ಭೋಪಾಲ್, ಮೇ 9: ಮಧ್ಯಪ್ರದೇಶದ ಭೋಪಾಲ್ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ದಿಗ್ವಿಜಯ್ ಸಿಂಗ್, ಬುಧವಾರ ನಡೆಸಿದ ರೋಡ್ ಶೋನಲ್ಲಿ ಎಲ್ಲೆಲ್ಲೂ ಕೇಸರಿ.. ಕೇಸರಿ..

ಭದ್ರತೆಗೆಂದು ನಿಯೋಜಿಸಿದ್ದ ಮಹಿಳಾ ಪೊಲೀಸರೂ ಕೇಸರಿ ಶಾಲು ಹಾಕಿಕೊಂಡಿದ್ದದ್ದು ಈಗ ವಿವಾದಕ್ಕೆ ಕಾರಣವಾಗಿದೆ. ಕಂಪ್ಯೂಟರ್ ಬಾಬಾ ಜೊತೆ ದಿಗ್ವಿಜಯ್ ಸಿಂಗ್ ರೋಡ್ ಶೋ ನಡೆಸಿದ್ದರು.

ದಿಗ್ವಿಜಯ್ ಯಶಸ್ಸಿಗಾಗಿ ಕಂಪ್ಯೂಟರ್ ಬಾಬಾ ನೇತೃತ್ವದಲ್ಲಿ ಮಹಾ ಯಜ್ಞದಿಗ್ವಿಜಯ್ ಯಶಸ್ಸಿಗಾಗಿ ಕಂಪ್ಯೂಟರ್ ಬಾಬಾ ನೇತೃತ್ವದಲ್ಲಿ ಮಹಾ ಯಜ್ಞ

ಮಾಧ್ಯಮದವರು ಮಹಿಳಾ ಪೊಲೀಸರನ್ನು ಪ್ರಶ್ನಿಸಿದಾಗ, ಕಾರ್ಯಕರ್ತರ ಒತ್ತಾಯದ ಮೇರೆಗೆ ಕೇಸರಿ ಶಾಲನ್ನು ಹಾಕಿಕೊಂಡಿದ್ದೇವೆ ಮತ್ತು ನಮಗೆ ರೋಡ್ ಶೋ ವೇಳೆ ಕೇಸರಿ ಶಾಲು ಹಾಕಿಕೊಳ್ಳಲು ಮೇಲಿಂದ ಆದೇಶವಿದೆ ಎಂದಿದ್ದಾರೆ.

Digvijay Singh road show in Bhopal: Police personnel wearing saffron scarves

ದಿಗ್ವಿಜಯ್ ಸಿಂಗ್ ರೋಡ್ ಶೋ ಸಾಮಾಜಿಕ ತಾಣದಲ್ಲಿ ವೈರಲ್ ಆಗಿದ್ದು, ಹಿಂದೂ ಮತಗಳನ್ನು ಸೆಳೆಯಲು ಕಾಂಗ್ರೆಸ್ ಕೇಸರಿ ಶಾಲನ್ನು ಹಂಚಿದೆ ಎನ್ನುವ ಆಕ್ರೋಶ ವ್ಯಕ್ತವಾಗಿದೆ.

ಭದ್ರತೆಗೆ ನಿಯೋಜಿಸಿದ್ದ ಮಹಿಳಾ ಪೊಲೀಸರನ್ನು ದಿಗ್ವಿಜಯ್ ಸಿಂಗ್ ಪ್ರಚಾರಕ್ಕೆ ಬಳಸಿಕೊಂಡಿದ್ದು ನೀತಿ ಸಂಹಿತೆಯ ಉಲ್ಲಂಘನೆ ಎಂದು ಬಿಜಿಪಿ ಚುನಾವಣಾ ಆಯೋಗಕ್ಕೆ ದೂರು ನೀಡಿದೆ.

ಇದಕ್ಕೆ ಮೊದಲು ರೋಡ್ ಶೋ ಜೈನ ದೇಗುಲದ ಬಳಿ ಬರುತ್ತಿದ್ದಾಗ ಕೆಲವು ಮೋದಿಪರ ಘೋಷಣೆಯನ್ನು ಕೂಗಿದ್ದಾರೆ. ಕರ್ನಾಟಕದ ದಕ್ಷಿಣ ಕನ್ನಡ ಜಿಲ್ಲೆಯ ಚುನಾವಣಾ ಪ್ರಚಾರದ ವೇಳೆಯೂ, ಕಾಂಗ್ರೆಸ್ ಅಭ್ಯರ್ಥಿ ಮಿಥುನ್ ರೈ ಕೇಸರಿ ಶಾಲು ಹಾಕಿಕೊಂಡು ಮತಯಾಚಿಸಿದ್ದರು.

ಭೋಪಾಲ್ ನಲ್ಲಿ ದಿಗ್ವಿಜಯ್ ಸಿಂಗ್ ವಿರುದ್ದ ಬಿಜೆಪಿಯಿಂದ ಪ್ರಗ್ಯಾ ಸಿಂಗ್ ಠಾಕೂರ್ ಸ್ಪರ್ಧಿಸುತ್ತಿದ್ದು ಇದೇ ಭಾನುವಾರ (ಮೇ 12) ಚುನಾವಣೆ ನಡೆಯಲಿದ್ದು, ಮೇ 23ರಂದು ಫಲಿತಾಂಶ ಹೊರಬೀಳಲಿದೆ.

English summary
Bhopal: Police personnel in civil uniform seen wearing saffron scarves at the roadshow of Computer Baba and Digvijay Singh (Congress candidate from the Lok Sabha seat); a policewoman says "we've been made to wear this".
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X