ಸಾವಿರ ಸಹೋದರಿಯರ 'ಸಹೋದರ' ಅತ್ಯಾಚಾರ ಮಾಡಿ ಸಿಕ್ಕಿಬಿದ್ದ!

ಭೋಪಾಲ್, ಜುಲೈ2: ಹೇಳೋದು ಆಚಾರ ತಿನ್ನೋದು ಬದನೆಕಾಯಿ ಅಂತಾರಲ್ಲ ಹಾಗೆಯೇ, ಸಾವಿರ ಹೆಣ್ಣುಮಕ್ಕಳ ಕೈಲಿ ರಾಖಿ ಕಟ್ಟಿಸಿಕೊಂಡಾಕ್ಷಣ ಯಾರೂ ಅಣ್ಣನಾಗುವುದಿಲ್ಲ ಮನಸ್ಸಲ್ಲಿ ತಾನು ಅಣ್ಣನೆಂಬ ಭಾವನೆಯೂ ಬೇಕು.

ತಾನು ಸಾವಿರ ತಂಗಿಯರಿಗೆ ಅಣ್ಣ ಎಂದು ಹೇಳಿಕೊಂಡು ತಿರುಗಾಡುವ ಕಾರ್ಪೊರೇಟರ್ ಅಪ್ರಾಪ್ತೆ ಮೇಲೆ ಅತ್ಯಾಚಾರವೆಸಗಿ ಜೈಲು ಪಾಲಾಗಿದ್ದಾನೆ.

ಬಿತುಲ್‌ನಲ್ಲಿ 11 ವರ್ಷದ ಬಾಲಕಿ ಮೇಲೆ ಅತ್ಯಾಚಾರವೆಸಗಿದ್ದ ಪಕ್ಷೇತರ ಕಾರ್ಪೊರೇಟರ್ ರಾಜೇಂದ್ರ ಸಿಂಗ್‌ನನ್ನು ಮಧ್ಯಪ್ರದೇಶದ ಪೊಲೀಸರು ಬಂಧಿಸಿದ್ದಾರೆ.

ಈ ಕಾರ್ಪೊರೇಟರ್ ರಕ್ಷಾ ಬಂಧನ ಕಾರ್ಯಕ್ರಮ ಆಯೋಜಿಸುವ ಮೂಲಕವೇ ಪರಿಚಿತನಾಗಿದ್ದ. ಅನಾಮಧೇಯ ಪತ್ರವೊಂದು ಪೊಲೀಸ್ ಠಾಣೆಗೆ ಬಂದಾಗಲೇ ಈತನ ನಿಜವಾದ ಬಣ್ಣ ಏನೆಂಬುದು ಬಯಲಾಗಿದೆ. ಆ ಪತ್ರವನ್ನು ಗಂಭೀರವಾಗಿ ಪರಿಗಣಿಸಿ ಬೆತುಲ್‌ಗಂಜ್ ಸ್ಟೇಷನ್ ಹೌಸ್ ಆಫೀಸರ್ ಕುಷ್ವಾಹ ತನಿಖೆ ಆರಂಭಿಸಿದ್ದಾರೆ.

Corporator held for raping 11 year old girl

ಬಳಿಕ ಅತ್ಯಾಚಾರ ಸಂತ್ರಸ್ತೆ ಬಳಿ ನಡೆದಿರುವ ಘಟನೆ ವಿವರಿಸುವಂತೆ ಹೇಳಿದ್ದಾರೆ.ಹಾಗೆಯೇ ಆಕೆಯ ಕುಟುಂಬಕ್ಕೆ ಭದ್ರತೆ ಕಲ್ಪಿಸುವುದಾಗಿ ಪೊಲೀಸರು ಭರವಸೆ ನೀಡಿದ್ದಾರೆ.

ಆತನೇ ಪೊಲೀಸ್ ಠಾಣೆಗೆ ಬಂದು ಶರಣಾಗಿದ್ದಾನೆ.ಆತನ ಝಾಕಿರ್ ಹುಸೇನ್ ವಾರ್ಡ್‌ನ ಕಾರ್ಪೊರೇಟರ್ ಆಗಿದ್ದಾನೆ. ಅತ್ಯಾಚಾರ ನಡೆದ ವಿಷಯವನ್ನು ಯಾರ ಬಳಿಯಾದರೂ ಹೇಳಿದರೆ ಪರಿಣಾಮ ನೆಟ್ಟಗಿರುವುದಿಲ್ಲ ಎಂದು ಗದರಿಸಿದ್ದ. ಒಂದು ವರ್ಷಗಳ ಕಾಲ ಆಕೆಯ ಮೇಲೆ ಅತ್ಯಾಚಾರವೆಸಗಿದ್ದ. ಸ್ವಲ್ಪ ದಿನಗಳ ಬಳಿಕ ಬಾಲಕಿ ತಾಯಿಗೆ ಈ ವಿಷಯ ಗೊತ್ತಾಗಿತ್ತು ಆಕೆಯನ್ನು ಕೂಡ ಗದರಿಸಿದ್ದ.

ಪ್ರತ್ಯೇಕ ಘಟನೆಯಲ್ಲಿ ಏಳು ವರ್ಷದ ಬಾಲಕಿ ಮೇಲೆ 57 ವರ್ಷದ ವ್ಯಕ್ತ ಅತ್ಯಾಚಾರನಡೆಸಿ ಕೊನೆಗೆ ಮಗುವನ್ನು ಕೊಲೆ ಮಾಡಿರುವ ಘಟನೆ ಸಂತ ಕಬೀರನಗರದಲ್ಲಿ ನಡೆದಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+