• search
  • Live TV
ಭೋಪಾಲ್ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಬಿಜೆಪಿ 300ಕ್ಕಿಂತಲೂ ಹೆಚ್ಚು ಸ್ಥಾನ ಗಳಿಸಲಿದೆ: ಮೋದಿ

|

ಕಾರ್ಗೋನೆ (ಮಧ್ಯ ಪ್ರದೇಶ), ಮೇ 17: 'ಕಾಶ್ಮೀರದಿಂದ ಕನ್ಯಾಕುಮಾರಿ ವರೆಗೆ ಮತ್ತೊಮ್ಮೆ ಮೋದಿ ಸರ್ಕಾರ ಎಂದು ಜನ ಹೇಳುತ್ತಿದ್ದಾರೆ' ಎಂದು ಲೋಕಸಭೆ ಚುನಾವಣೆ 2019ರ ಕೊನೆಯ ಪ್ರಚಾರ ಭಾಷಣದಲ್ಲಿ ಪ್ರಧಾನಿ ಮೋದಿ ಹೇಳಿಕದರು.

ಮಧ್ಯ ಪ್ರದೇಶದ ಕಾರ್ಗೋನೆಯಲ್ಲಿ ಮೋದಿ ಅವರು ಚುನಾವಣಾ ಪ್ರಚಾರ ಭಾಷಣ ಮಾಡಿದರು, ಇದು ಲೋಕಸಭೆ ಚುನಾವಣೆ 2019ರ ಮೋದಿ ಅವರ ಕೊನೆಯ ಚುನಾವಣಾ ಪ್ರಚಾರ ಭಾಷಣ ಆಗಿದೆ.

ಲೋಕಸಭಾ ಚುನಾವಣೆ 2019 | ವಿಶೇಷ ಪುಟ | ಗ್ಯಾಲರಿ

45 ನಿಮಿಷಕ್ಕೂ ಹೆಚ್ಚು ಕಾಲ ಭಾಷಣ ಮಾಡಿದ ಮೋದಿ ಅವರು, ಕಾಂಗ್ರೆಸ್ ಹಾಗೂ ಮಹಾಘಟಬಂಧನ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು, ಅಲ್ಲದೆ, ಈ ಬಾರಿ 300 ಕ್ಕೂ ಹೆಚ್ಚು ಸೀಟುಗಳಲ್ಲಿ ಬಿಜೆಪಿ ಜಯ ಸಾಧಿಸಲಿದೆ ಎಂದು ಹೇಳಿದರು.

 BJP will gain 300 plus seats in lok sabha elections: Narendra Modi

ಈ ಬಾರಿ ನೀವು ಮತ ಹಾಕಲು ಹೋದಾಗ ಇತಿಹಾಸ ನಿರ್ಮಿಸುವವರಿದ್ದೀರಿ, ಎರಡನೇ ಬಾರಿ ಪೂರ್ಣ ಬಹುಮತದ ಸರ್ಕಾರವನ್ನು ನೀವು ಆರಿಸಲಿದ್ದೀರಿ, ಎಂದ ಮೋದಿ, ಬಿಜೆಪಿಗೆ ಈ ಬಾರಿಯೂ ಬಹುಮತ ಖಾಯಂ ಎಂಬ ಭರವಸೆ ವ್ಯಕ್ತಪಡಿಸಿದರು.

ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ ಮೋದಿ, ಪ್ರಧಾನಿ ಪಟ್ಟ ತಮ್ಮ ಜನ್ಮ ಸಿದ್ಧ ಹಕ್ಕು ಎಂದು ಕಾಂಗ್ರೆಸ್ ಪಕ್ಷದ ಗಾಂಧಿ ಕುಟುಂಬ ಭಾವಿಸಿದಂತಿದೆ ಎಂದು ಹೇಳಿದರು.

ಕಾಂಗ್ರೆಸ್‌ನ ಚುನಾವಣಾ ಅಕ್ರಮವನ್ನು ಇಡೀಯ ದೇಶವೇ ನೋಡಿದೆ, ಮಧ್ಯ ಪ್ರದೇಶದ ಕಾಂಗ್ರೆಸ್ ಮುಖಂಡರೊಬ್ಬರ ಮನೆಯಲ್ಲಿ ಕೋಟಿಗಟ್ಟಲೆ ಹಣ ಸಿಕ್ಕಿತು, ಅದು ದೆಹಲಿಯ ಕುಟುಂಬವೊಂದಕ್ಕೆ ತಲುಪಬೇಕಾಗಿದ್ದ ಹಣವಂತೆ ಎಂದು ಮೋದಿ ವಾಗ್ದಾಳಿ ನಡೆಸಿದರು.

ಮಧ್ಯ ಪ್ರದೇಶ ಸೇರಿದಂತೆ 8 ರಾಜ್ಯಗಳ 59 ಕ್ಷೇತ್ರಗಳಿಗೆ ಭಾನುವಾರ (ಮೇ 19) ರಂದು ಲೋಕಸಭೆ ಚುನಾವಣೆ 2019 ರ ಕೊನೆಯ ಹಂತದ ಮತದಾನ ನಡೆಯಲಿದೆ. ಇಂದು ಬಹಿರಂಗ ಪ್ರಚಾರ ಅಂತ್ಯಗೊಳ್ಳಲಿದೆ. ಫಲಿತಾಂಶವು ಮೇ 23 ರಂದು ಹೊರಬೀಳಲಿದೆ.

ಭೋಪಾಲ ರಣಕಣ
ಸ್ಟ್ರೈಕ್ ರೇಟ್
BJP 64%
INC 36%
BJP won 9 times and INC won 5 times since 1957 elections

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Narendra Modi addressed his last 2019 lok sabha elections public rally in Madhya Pradesh's Khargone. He said hole nation is saying 'Phir ek bar Modi sarkar', he also said BJP will cross 300 seats.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more