Get Updates
Get notified of breaking news, exclusive insights, and must-see stories!

ಪತ್ನಿ ಬೆನ್ನು ನೋವು ಎಂದಿದ್ದಕ್ಕೆ ಮೊಪೆಡ್‌ ಖರೀದಿ ಮಾಡಿದ ಭಿಕ್ಷುಕ!

ಭೋಪಾಲ್, ಮೇ 24: ತಾನು ಭಿಕ್ಷುಕನಾದರೂ ಪರವಾಗಿಲ್ಲ, ನನ್ನ ಹೆಂಡತಿಯನ್ನು ಚೆನ್ನಾಗಿ ನೋಡಿಕೊಳ್ಳಬೇಕು ಎಂದು ಭಾವಿಸಿದ ಭಿಕ್ಷುಕನೊಬ್ಬ ತನ್ನ ಮಡದಿಗಾಗಿ 90,000 ಮೌಲ್ಯದ ಮೊಪೆಡ್‌ ಅನ್ನು ಖರೀದಿಸಿ ಎಲ್ಲರು ಹಬ್ಬೇರುವಂತೆ ಮಾಡಿದ್ದಾನೆ.

ಹೃದಯಸ್ಪರ್ಶಿ ಘಟನೆಯೊಂದರಲ್ಲಿ ಮಧ್ಯಪ್ರದೇಶದ ಛಿಂದ್ವಾರಾ ಜಿಲ್ಲೆಯ ಭಿಕ್ಷುಕ ಸಂತೋಷ್ ಕುಮಾರ್ ಸಾಹು ತನ್ನ ಪತ್ನಿ ಮುನ್ನಿಗಾಗಿ 90 ಸಾವಿರ ಮೌಲ್ಯದ ಮೊಪೆಡ್ ಖರೀದಿಸಿದ್ದಾರೆ. ಈ ಹಿಂದೆ ಅವರು ಹೊಂದಿದ್ದ ತ್ರಿಚಕ್ರ ವಾಹನದಲ್ಲಿ ಕುಳಿತುಕೊಂಡಿದ್ದರಿಂದ ಅವರ ಪತ್ನಿ ಬೆನ್ನು ನೋವಿನ ಬಗ್ಗೆ ದೂರಿದ್ದರು. ಆದ್ದರಿಂದ ಬೈಕ್ ಪಡೆದುಕೊಂಡಿದ್ದೇನೆ ಎಂದು ಸಂತೋಷ್ ಸುದ್ದಿ ಸಂಸ್ಥೆ ಎಎನ್‌ಐಗೆ ತಿಳಿಸಿದ್ದಾರೆ.

"ಮೊದಲು ನಾವು ತ್ರಿಚಕ್ರ ವಾಹನವನ್ನು ಹೊಂದಿದ್ದೆವು. ನನ್ನ ಹೆಂಡತಿ ಬೆನ್ನುನೋವಿನ ಬಗ್ಗೆ ನನ್ನ ಬಳಿ ಹೇಳಿದಾಗ ನಾನು ಈ ವಾಹನವನ್ನು 90,000ಕ್ಕೆ ಪಡೆದುಕೊಂಡೆ. ಈಗ ನಾವು ಸಿಯೋನಿ, ಇಟಾರ್ಸಿ, ಭೋಪಾಲ್, ಇಂದೋರ್‌ಗೆ ಹೋಗಬಹುದು" ಎಂದು ಅವರು ತಿಳಿಸಿದರು.

Beggar Buys 90,000 bike after wife complains of backache spends life savings

ಟ್ವಿಟರ್‌ನಲ್ಲಿ ಹಂಚಿಕೊಂಡ ವೀಡಿಯೊದಲ್ಲಿ ದಂಪತಿ ತಮ್ಮ ಹೊಸ ಮತ್ತು ಹಾರ ಹಾಕಿದ ದ್ವಿಚಕ್ರ ವಾಹನದಲ್ಲಿ ಸವಾರಿ ಮಾಡುವುದನ್ನು ಕಾಣಬಹುದು. ಇದನ್ನು ಅವರು ತಮ್ಮ ಜೀವನದ ಉಳಿತಾಯದಿಂದ ಖರೀದಿಸಿದರು.

ಬಸ್ ನಿಲ್ದಾಣಗಳು, ದೇವಸ್ಥಾನಗಳು ಮತ್ತು ಮಸೀದಿಗಳಲ್ಲಿ ಭಿಕ್ಷೆ ಬೇಡುವ ಮೂಲಕ ದಂಪತಿ ದಿನಕ್ಕೆ ಸುಮಾರು 300ರಿಂದ 400 ಗಳಿಸುತ್ತಾರೆ ಎಂದು ಮಾಧ್ಯಮ ವರದಿಗಳು ಹೇಳುತ್ತವೆ. ತನ್ನ ಕೆಳಗಿನ ಅಂಗಗಳಲ್ಲಿ ಅಂಗವೈಕಲ್ಯ ಹೊಂದಿರುವ ಸಾಹು, ಮುನ್ನಿಯೊಂದಿಗೆ ಭಿಕ್ಷೆ ಬೇಡುತ್ತಾನೆ. ಮುನ್ನಿ ಮುಂದಕ್ಕೆ ತಳ್ಳುವ ತ್ರಿಚಕ್ರ ವಾಹನದಲ್ಲಿ ಕುಳಿತುಕೊಳ್ಳುತ್ತಿದ್ದರು ಎಂದು ಹೇಳಲಾಗಿದೆ

ಆದಾಗ್ಯೂ, ದಿನವಿಡೀ ತ್ರಿಚಕ್ರ ವಾಹನವನ್ನು ತಳ್ಳಿದ ನಂತರ ಒಳ್ಳೆಯ ಮತ್ತು ಕೆಟ್ಟ ವಾತಾವರಣದಲ್ಲಿ ಮತ್ತು ಟಾರ್ ಮತ್ತು ಕಚ್ಚಾ ರಸ್ತೆಗಳಲ್ಲಿ ಅವರ ಹೆಂಡತಿ ತೀವ್ರ ಬೆನ್ನುನೋವಿನ ಬಗ್ಗೆ ದೂರು ನೀಡಲು ಪ್ರಾರಂಭಿಸಿದರು. ಅವಳು ಆಗಾಗ್ಗೆ ನೋವಿನಿಂದ ಅನಾರೋಗ್ಯಕ್ಕೆ ಒಳಗಾಗುತ್ತಿದ್ದಳು. ಇದನ್ನು ನೋಡಿದ ಸಾಹು ತಮಗಾಗಿ ವಾಹನವನ್ನು ಖರೀದಿಸಲು ನಿರ್ಧರಿಸಿದರು..

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+