ನೀರು ಕೇಳಿದರೆ, ಮೂತ್ರ ಕುಡಿಸಿದರು: ವ್ಯಕ್ತಿ ಆತ್ಮಹತ್ಯೆ
ಭೂಪಾಲ್, ಮೇ 15: ನೀರು ಕೇಳಿದಕ್ಕೆ ಮೂತ್ರ ಕುಡಿಸಲು ಮುಂದಾಗಿದ್ದಕ್ಕೆ ವ್ಯಕ್ತಿಯೊಬ್ಬ ಮನನೊಂದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಶುಕ್ರವಾರ ಮಧ್ಯಪ್ರದೇಶದಲ್ಲಿ ನಡೆದಿದೆ.
ವಿಕಾಸ್ ಶರ್ಮಾ (35) ಎನ್ನುವ ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ. ಮಧ್ಯಪ್ರದೇಶದ ಶಿವಪುರಿ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ.
''ವಿಕಾಸ್ ಶರ್ಮಾ ನೀರು ಕೇಳಲು ಜಮೀನು ಮಾಲಿಕರ ಬಳಿ ತೆರಳಿದ್ದ. ಆದರೆ, ಜಮೀನು ಮಾಲೀಕರು ನೀರು ಕೇಳಿದ ವಿಕಾಸ್ ಶರ್ಮಾನಿಗೆ ಹಲ್ಲೆ ನಡೆಸಿ, ಮೂತ್ರ ಕುಡಿಸಲು ಮುಂದಾಗಿದ್ದರು. ಇದರಿಂದ ಮನನೊಂದು ಶರ್ಮಾ ಡೆತ್ ನೋಟ್ ಬರೆದಿಟ್ಟು ವಿಷಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ'' ಎಂದು ಶಿವಪುರಿ ಎಸ್ ಪಿ ರಾಜೇಶ್ ಸಿಂಗ್ ಚಂಡೇಲಾ ಎಎನ್‌ಐ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.

ಘಟನೆಗೆ ಸಂಬಂಧಿಸಿದಂತೆ ಆರೋಪಿತರಾದ ಮನೋಜ್ ಕೋಲಿ, ತಾರಾವತಿ ಕೋಲಿ ಮತ್ತು ಪ್ರಿಯಾಂಕಾ ಕೋಲಿ ಎನ್ನುವರನ್ನು ಪೊಲೀಸರು ಬಂಧಿಸಿದ್ದಾರೆ. ಈ ಅಮಾನವೀಯ ಘಟನೆಗೆ ಮಧ್ಯಪ್ರದೇಶದಲ್ಲಿ ವ್ಯಾಪಕ ಖಂಡನೆ ವ್ಯಕ್ತವಾಗಿದೆ.












Click it and Unblock the Notifications