• search
 • Live TV
ಭೋಪಾಲ್ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಇಂದೋರ್‌ನಲ್ಲಿ 31 ಪೊಲೀಸರಿಗೆ ಕೊರೊನಾ ಸೋಂಕು ದೃಢ

|

ಬೋಪಾಲ್, ಮೇ 7: ಮಧ್ಯ ಪ್ರದೇಶದಲ್ಲಿ ಕೊರೊನಾ ಸೋಂಕು ದೊಡ್ಡ ಸಂಖ್ಯೆಯಲ್ಲಿ ಹರಡಿದೆ. ರಾಜ್ಯ ಪ್ರಮುಖ ನಗರಗಳಾದ ಇಂದೋರ್, ಬೋಪಾಲ್‌ ಕೊರೊನಾ ಹಾಟ್‌ಸ್ಪಾಟ್‌ ಆಗಿವೆ. ಇದೀಗ, ಕೊರೊನಾ ವಿರುದ್ಧ ಹೋರಾಟದ ಕರ್ತವ್ಯದಲ್ಲಿದ್ದ 31 ಮಂದಿ ಪೊಲೀಸರಿಗೆ ಕೊರೊನಾ ವಕ್ಕರಿಸಿದೆ ಎಂದು ಪೊಲೀಸ್ ಇಲಾಖೆ ಮಾಹಿತಿ ನೀಡಿದೆ.

   ಬೆಂಗಳೂರಿನಿಂದ ನಡೆದುಕೊಂಡೇ ಉತ್ತರಪ್ರದೇಶಕ್ಕೆ ಹೋಗ್ತಿದ್ದಾರೆ ವಲಸೆ ಕಾರ್ಮಿಕರು | UP | Oneindia Kannada

   ಜಾಗತಿಕ ವ್ಯಾಕ್ಸಿನ್ ವಾರ್: ಭಾರತವೇ ಯುದ್ಧ ಕೇಂದ್ರ..!

   ಇಂದೋರ್‌ ಪಶ್ಚಿಮ ವಿಭಾಗದ ಎಸ್ ಪಿ ಮಹಮ್ಮದ್ ಯೂಸೂಫ್ ಖುರೇಶಿ 31 ಜನ ಪೊಲೀಸರಿಗೆ ಸೋಂಕು ದೃಢಪಟ್ಟಿರುವುದನ್ನು ಖಚಿತಪಡಿಸಿದ್ದಾರೆ.

   ಅಹಮದಾಬಾದ್; ಕೊರೊನಾ ತಡೆಯಲು ಎಲ್ಲಾ ಅಂಗಡಿಗಳಿಗೆ ಬೀಗ

   31 ಪೊಲೀಸರ ಪೈಕಿ 22 ಜನರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಉಳಿದ 8 ಮಂದಿ ಸೋಂಕಿನಿಂದ ಗುಣಮುಖರಾಗಿ ಮನೆಗೆ ತೆರಳಿದ್ದಾರೆ. ದುರಾದೃಷ್ಟವಶಾತ್ ಒಬ್ಬ ಪೊಲೀಸ್ ಕೊರೊನಾಗೆ ಬಲಿಯಾಗಿದ್ದಾರೆ ಎಂದು ಪೊಲೀಸ್ ಅಧಿಕಾರಿ ಖುರೇಶಿ ತಿಳಿಸಿದ್ದಾರೆ.

   ಚೀನಾ ಗಡಿಯಲ್ಲಿರುವ ಭಾರತದ 'ಟಿಬೆಟ್' ಸೇನೆ ಬಗ್ಗೆ ನಿಮಗೆಷ್ಟು ಗೊತ್ತು?

   31 Police Have Tested Positive For COVID-19 In Indore

   ಕೊರೊನಾ ರೋಗಿಗಳ ಜೊತೆ ಸಂಪರ್ಕದಲ್ಲಿದ್ದ ಪೊಲೀಸರಿಗೆ ಪಿಪಿಇ ಕಿಟ್‌ಗಳನ್ನು ವಿತರಿಸಬೇಕು ಎಂದು ಖುರೇಶಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಮಧ್ಯಪ್ರದೇಶದಲ್ಲಿ ಈವರೆಗೂ ಇಂದೋರ್‌ನಲ್ಲಿ ಅತಿ ಹೆಚ್ಚು ಸೋಂಕು ಪತ್ತೆಯಾಗಿದೆ. 1681 ಕೇಸ್ ವರದಿಯಾಗಿದ್ದು, 81 ಜನರು ಸಾವನ್ನಪ್ಪಿದ್ದಾರೆ.

   ಇನ್ನುಳಿದಂತೆ ಮಧ್ಯ ಪ್ರದೇಶದಲ್ಲಿ ಈವರೆಗೂ 3138 ಜನರಿಗೆ ಕೊವಿಡ್ ಸೋಂಕು ತಗುಲಿದೆ. 185 ಜನರು ಚೇತರಿಕೆ ಕಾಣದೆ ಪ್ರಾಣ ಕಳೆದುಕೊಂಡಿದ್ದಾರೆ. 1099 ಜನರು ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಪ್ರಸ್ತುತ ರಾಜ್ಯದಲ್ಲಿ 1854 ಕೇಸ್ ಸಕ್ರಿಯವಾಗಿದೆ.

   English summary
   31 police personnel have tested positive for COVID-19 in Indore, said Mohammad Yusuf Qureshi, SP (East) Indore.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X