ನಿರ್ಜನ ಪ್ರದೇಶಕ್ಕೆ ಲೊಕೇಶನ್‌ ಬದಲಿಸಿದ ಗ್ರಾಹಕ: Zomato ಮಹಿಳಾ ಡೆಲಿವರಿ ಪಾರ್ಟ್‌ನರ್ಸ್‌ ಗೋಳು ಕೇಳುವವರಾರು?

ಇತ್ತೀಚೆಗಷ್ಟೇ ಜೊಮಾಟೊದಲ್ಲಿ ಕೆಲಸ ಮಾಡುವ ಮಹಿಳಾ ಡೆಲಿವರಿ ಸಿಬ್ಬಂದಿಯೊಬ್ಬರಿಗೆ ಕಹಿ ಅನುಭವವೊಂದು ಎದುರಾಗಿತ್ತು. ರಾತ್ರಿ ಸುಮಾರು 10 ಗಂಟೆಯ ಹೊತ್ತಿಗೆ ಆರ್ಡರ್ ಪಡೆದಿದ್ದ ಆ ಮಹಿಳೆ, ಆ್ಯಪ್‌ನಲ್ಲಿ ಗ್ರಾಹಕರು ನಮೂದಿಸಿದ್ದ ವಿಳಾಸಕ್ಕೆ ಸರಿಯಾಗಿ ತಲುಪಿದ್ದಾರೆ. ಆದರೆ, ಅಲ್ಲಿಗೆ ಹೋದ ನಂತರ ಗ್ರಾಹಕರು ಫೋನ್ ಮಾಡಿ, ಆ್ಯಪ್‌ನಲ್ಲಿರುವ ವಿಳಾಸದ ಬದಲು ಬೇರೊಂದು ಜಾಗಕ್ಕೆ ಆರ್ಡರ್ ತಂದುಕೊಡುವಂತೆ ಸೂಚಿಸಿದ್ದಾರೆ.

ಗ್ರಾಹಕರು ಹೇಳಿದ ಆ ಹೊಸ ಜಾಗವು ಸಂಪೂರ್ಣವಾಗಿ ನಿರ್ಜನ ಪ್ರದೇಶವಾಗಿತ್ತು ಹಾಗೂ ಸುತ್ತಮುತ್ತ ಯಾರೂ ಇರಲಿಲ್ಲ. ಅಷ್ಟು ಹೊತ್ತಿನಲ್ಲಿ ಒಬ್ಬಂಟಿಯಾಗಿ ಅಂಥದ್ದೊಂದು ಒಂಟಿ ಜಾಗಕ್ಕೆ ಹೋಗುವುದು ಅಪಾಯಕಾರಿ ಎಂದು ಭಾವಿಸಿದ ಮಹಿಳಾ ಸಿಬ್ಬಂದಿ, ತನ್ನ ಸುರಕ್ಷತೆಯ ದೃಷ್ಟಿಯಿಂದ ಆ್ಯಪ್‌ನಲ್ಲಿ ನಮೂದಿಸಿರುವ ವಿಳಾಸಕ್ಕೇ ಬಂದು ಆರ್ಡರ್ ಪಡೆದುಕೊಳ್ಳುವಂತೆ ಗ್ರಾಹಕನಲ್ಲಿ ವಿನಮ್ರವಾಗಿ ವಿನಂತಿ ಮಾಡಿಕೊಂಡಿದ್ದಾರೆ.

Zomato Female Delivery Partner Threatened By Customer Over Deserted Location Safety Concerns Raised

ಆದರೆ, ಗ್ರಾಹಕನ ವರ್ತನೆ ಸಂಪೂರ್ಣವಾಗಿ ಒರಟಾಗಿತ್ತು. ಆತ ಮಹಿಳೆಯ ಮನವಿಯನ್ನ ಲೆಕ್ಕಿಸದೆ, ತಾನು ಹೇಳಿದ ಜಾಗಕ್ಕೆ ಬರದಿದ್ದರೆ ಜೊಮಾಟೊಗೆ ದೂರು ನೀಡುವುದಾಗಿ ಬೆದರಿಕೆ ಹಾಕಿದ್ದಾನೆ. ಈ ಘಟನೆಯು ಕೇವಲ ಒಂದು ಡೆಲಿವರಿಯ ಸಮಸ್ಯೆಯಾಗಿರದೆ, ದುಡಿಯುವ ಮಹಿಳೆಯರ ಸುರಕ್ಷತೆಯನ್ನೇ ಪ್ರಶ್ನಿಸುವಂತಿದೆ.

ಮಹಿಳಾ ಡೆಲಿವರಿ ಸಿಬ್ಬಂದಿ ಸುರಕ್ಷತೆ: ಎಕ್ಸ್ ಖಾತೆಯಲ್ಲಿ ಮಹಿ ಮಿಶ್ರಾ ಆಕ್ರೋಶ

ಈ ಸಂಪೂರ್ಣ ಘಟನೆಯನ್ನ ಮಹಿ ಮಿಶ್ರಾ ಎನ್ನುವವರು ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. 'ಇದು ಕೇವಲ ಡೆಲಿವರಿ ವಿಳಂಬದ ಅಥವಾ ಆರ್ಡರ್ ರದ್ದತಿಯ ಸಮಸ್ಯೆಯಲ್ಲ, ಇದು ನೇರವಾಗಿ ಮಹಿಳಾ ಡೆಲಿವರಿ ಸಿಬ್ಬಂದಿ ಸುರಕ್ಷತೆಗೆ ಸಂಬಂಧಿಸಿದ ಗಂಭೀರ ವಿಚಾರ' ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಯಾವುದೇ ಗ್ರಾಹಕನಿಗೆ ತಾನು ಆರ್ಡರ್ ಮಾಡಿದ ನಂತರ, ಡೆಲಿವರಿ ಮಾಡುವವರನ್ನು ಮನಬಂದಂತೆ ನಿರ್ಜನ ಪ್ರದೇಶಗಳಿಗೆ ಕರೆಯುವ ಅಥವಾ ದೂರು ನೀಡುವ ಬೆದರಿಕೆ ಹಾಕುವ ಹಕ್ಕು ಇರುವುದಿಲ್ಲ. ಇಂತಹ ಕೃತ್ಯಗಳು ಗಿಗ್ ಕಾರ್ಮಿಕರ ಜೀವಕ್ಕೆ ಸಂಚಕಾರ ತರಬಹುದು ಎಂದು ಅವರು ಕಳವಳ ವ್ಯಕ್ತಪಡಿಸಿದ್ದಾರೆ.

ಖಾತೆ ಬ್ಲ್ಯಾಕ್‌ಲಿಸ್ಟ್ ಮಾಡಲು ಆಗ್ರಹ

ಈ ಘಟನೆಯ ಬೆನ್ನಲ್ಲೇ ಆನ್‌ಲೈನ್‌ನಲ್ಲಿ ಜೊಮಾಟೊ ಸಂಸ್ಥೆಯ ವಿರುದ್ಧ ಹಲವು ನೆಟ್ಟಿಗರು ಧ್ವನಿ ಎತ್ತಿದ್ದಾರೆ. ಡೆಲಿವರಿ ಸಿಬ್ಬಂದಿಗಳಿಗೆ ತಪ್ಪು ವಿಳಾಸಗಳನ್ನ ನೀಡಿ, ಅಸುರಕ್ಷಿತ ಸ್ಥಳಗಳಿಗೆ ಬರುವಂತೆ ಕಿರುಕುಳ ನೀಡುವ ಗ್ರಾಹಕರ ವಿರುದ್ಧ ಜೊಮಾಟೊ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

ಪದೇ ಪದೇ ಇಂಥದ್ದೇ ದುರ್ವರ್ತನೆ ತೋರುವ ಗ್ರಾಹಕರ ಬಗ್ಗೆ ಕೂಲಂಕಷವಾಗಿ ತನಿಖೆ ನಡೆಸಿ, ಅಂಥವರ ಖಾತೆಗಳನ್ನ ಶಾಶ್ವತವಾಗಿ ಬ್ಲ್ಯಾಕ್‌ಲಿಸ್ಟ್ ಮಾಡಬೇಕು ಎಂಬ ಬಲವಾದ ಒತ್ತಾಯ ಕೇಳಿಬಂದಿದೆ. ಎಷ್ಟೇ ಬೆಲೆಬಾಳುವ ಆರ್ಡರ್ ಆಗಿದ್ದರೂ, ಅದು ಡೆಲಿವರಿ ಸಿಬ್ಬಂದಿಯ ಪ್ರಾಣ ಅಥವಾ ಸುರಕ್ಷತೆಗಿಂತ ಖಂಡಿತ ದೊಡ್ಡದಲ್ಲ. ಈ ನಿಟ್ಟಿನಲ್ಲಿ ಆನ್‌ಲೈನ್ ಡೆಲಿವರಿ ಕಂಪನಿಗಳು ತಮ್ಮ ಉದ್ಯೋಗಿಗಳ ರಕ್ಷಣೆಗೆ ಕಟ್ಟುನಿಟ್ಟಿನ ನಿಯಮಗಳನ್ನ ರೂಪಿಸಬೇಕಾದ ತುರ್ತು ಅಗತ್ಯವಿದೆ ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+