Zero Shadow Day: ಬೆಂಗಳೂರಿನಲ್ಲಿ ನಡೆಯಲಿದೆ ವಿಚಿತ್ರ ಘಟನೆ: ಕೆಲವು ಕ್ಷಣ ನಿಮ್ಮ ನೆರಳು ಮಾಯ
ಬೆಂಗಳೂರು ಏಪ್ರಿಲ್ 25: ಬೆಂಗಳೂರಿನಲ್ಲಿ ಇಂದು ಅಂದರೆ ಏಪ್ರಿಲ್ 25 ಅಚ್ಚರಿಯ ದಿನವಾಗಿರುತ್ತದೆ. ಸೌರವ್ಯೂಹವು ಈ ದಿನ ವಿಶಿಷ್ಟವಾದ ಆಟವನ್ನು ಆಡಲಿದೆ. ಅದೇನೆಂದರೆ ಇಂದು ಜನರು ತಮ್ಮ ನೆರಳನ್ನು ತಾವು ಕಾಣುವುದಿಲ್ಲ. ಬೇರೆ ರೀತಿಯಲ್ಲಿ ಹೇಳುವುದಾದರೆ, ಈ ದಿನ ಯಾರಿಗೂ ಅವರ ನೆರಳನ್ನು ನೋಡಲು ಸಿಗುವುದಿಲ್ಲ. ಇದು ಕೆಲವು ಕ್ಷಣಗಳವರೆಗೆ ಇರುತ್ತದೆ. ಇದೊಂದು ವಿಚಿತ್ರ ಘಟನೆಯಾಗಿದ್ದು ಇಂದು ಸಂಭವಿಸಲಿದೆ.
ಮಧ್ಯಾಹ್ನ 12.15ರ ಸುಮಾರಿಗೆ ಈ ಘಟನೆ ನಡೆಯುತ್ತದೆ. ಇದನ್ನು ಶೂನ್ಯ ನೆರಳು ದಿನ ಎಂದು ಹೆಸರಿಸಲಾಗಿದೆ. ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಆಸ್ಟ್ರೋಫಿಸಿಕ್ಸ್ ತನ್ನ ಕ್ಯಾಂಪಸ್‌ನಲ್ಲಿ ಈ ಸಂದರ್ಭದಲ್ಲಿ ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸಲಿದೆ. ಈ ಬಗ್ಗೆ ಬೆಂಗಳೂರಿನ ಜನರ ಉತ್ಸಾಹ ಹೆಚ್ಚಾಗಿ ಕಂಡು ಬರುತ್ತಿದೆ. ತಮ್ಮ ನೆರಳು ತಮಗೆ ಕಾಣಿಸದೇ ಇರುವ ಸಂದರ್ಭದ ದೃಶ್ಯವನ್ನು ಸೆರೆಹಿಡಿಯಲು ಜನರು ಕುತೂಹಲಕಾರಿಯಾಗಿದ್ದಾರೆ.

ಶೂನ್ಯ ನೆರಳು ದಿನ ಎಂದರೇನು?
ಆಸ್ಟ್ರೋನಾಮಿಕಲ್ ಸೊಸೈಟಿ ಆಫ್ ಇಂಡಿಯಾದ ಪ್ರಕಾರ, ಮಧ್ಯಾಹ್ನದ ಸಮಯದಲ್ಲಿ ಸೂರ್ಯನು ಯಾವುದೇ ವಸ್ತುವಿಗೆ ನೆರಳು ನೀಡುವುದಿಲ್ಲ. ಇದರಿಂದಾಗಿ ಈ ಘಟನೆ ಸಂಭವಿಸಲಿದೆ. ASI ಪ್ರಕಾರ, ಕರ್ಕಾಟಕ ರಾಶಿ ಮತ್ತು ಮಕರ ರಾಶಿ ವೃತ್ತದ ನಡುವೆ ಇರುವ ಜನರು ಈ ಶೂನ್ಯ ನೆರಳಿನ ದಿನಕ್ಕೆ ವರ್ಷಕ್ಕೆರಡು ಬಾರಿ ಸಾಕ್ಷಿಯಾಗುತ್ತಾರೆ. ಈ ವಿದ್ಯಾಮಾನ ಈ ವರ್ಷ ಏಪ್ರಿಲ್ 25ರಂದು ಕಾಣ ಸಿಗಲಿದೆ ಎಂದು ಖಗೋಳ ಭೌತ ಶಾಸ್ತ್ರಜ್ಞ ದೇಬಿಪ್ರಸೋದ್ ದುರೈ ಹೇಳಿದ್ದಾರೆ. ಇದು ವರ್ಷದಲ್ಲಿ ಎರಡು ಬಾರಿ ಸಂಭವಿಸುತ್ತದೆ. ಉತ್ತರಾಯಣ ಮತ್ತು ದಕ್ಷಿಣಾಯಣದಲ್ಲಿ ತಲಾ ಒಂದು ಬಾರಿ ಇದು ನಡೆಯುತ್ತದೆ.
ಏಕೆ ಇದು ಸಂಭವಿಸುತ್ತದೆ?
ಭೂಮಿಯ ಪರಿಭ್ರಮಣ ಅಕ್ಷವು ಸೂರ್ಯನ ಸುತ್ತ ತನ್ನ ಕಕ್ಷೆಗೆ 23.5 ಡಿಗ್ರಿಗಳಷ್ಟು ವಾಲುತ್ತದೆ ಎಂದು ವಿಜ್ಞಾನಿಗಳು ಹೇಳುತ್ತಾರೆ. ಅಂದರೆ ಹಗಲಿನಲ್ಲಿ ಸೂರ್ಯನು ಉಚ್ಛ್ರಾಯ ಸ್ಥಿತಿಯಲ್ಲಿರುತ್ತಾನೆ. ಈ ಪರಿಭ್ರಮಣೆಯಿಂದಾಗಿ, ಉತ್ತರಾಯಣ ಮತ್ತು ದಕ್ಷಿಣಾಯಣದಲ್ಲಿ ನಮ್ಮ ನೆರಳು ನಮಗೆ ಕಾಣುವುದಿಲ್ಲ.

ಶೂನ್ಯ ನೆರಳು ದಿನ ಎಷ್ಟು ಕಾಲ ಇರುತ್ತದೆ?
ಈ ಆಸಕ್ತಿದಾಯಕ ಮತ್ತು ವಿಶಿಷ್ಟ ವಿದ್ಯಮಾನವು ಸ್ವಲ್ಪ ಸಮಯದವರೆಗೆ ಸಂಭವಿಸುತ್ತದೆ. ಇದರ ಸಮಯ ಸುಮಾರು ಒಂದರಿಂದ ಒಂದೂವರೆ ನಿಮಿಷಗಳವರೆಗೆ ಇರುತ್ತದೆ. ಈ ಘಟನೆ ಒಡಿಶಾದ ಭುವನೇಶ್ವರದಲ್ಲಿ 2021 ರಲ್ಲಿ ನಡೆದಿತ್ತು.












Click it and Unblock the Notifications