ಗ್ರಾಮ ಸ್ವರಾಜ್ಯ-ಧಾರ್ಮಿಕ ಸಹಿಷ್ಣುತೆಗೆ 'ಯುವಕರೇ ಸತ್ಯಾಗ್ರಹ ಮಾಡಿ'
ಬೆಂಗಳೂರು, ಸೆಪ್ಟೆಂಬರ್ 25: ಮಹಾತ್ಮಾ ಗಾಂಧೀಜಿಯವರು 150ನೇ ಜನ್ಮ ವರ್ಷಾಚರಣೆ ಅಂಗವಾಗಿ ಗ್ರಾಮ ಸೇವಾ ಸಂಘ ವಿನೂತನ ರೀತಿಯಲ್ಲಿ 'ಯುವಕರೇ ಸತ್ಯಾಗ್ರಹ ಮಾಡಿ' ಅಭಿಯಾನವನ್ನು ಅ.6 ರಂದು ಹಮ್ಮಿಕೊಂಡಿದೆ.
ಬೆಳಗ್ಗೆ 6 ರಿಂದ ಸಂಜೆ 4 ಗಂಟೆಯ ಒಳಗೆ 7 ತಾಸುಗಳ ಕಾಲ ವಿಶಿಷ್ಟ ಸತ್ಯಾಗ್ರಹ ಕಾರ್ಯಕ್ರಮವನ್ನು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆಯಲಿದೆ.
— Irrfan (@irrfank) September 22, 2018
ಸತ್ಯಾಗ್ರಹವೆಂದರೆ ಕೇವಲ ಹಳೆಯ ಸತ್ಯಾಗ್ರವನ್ನು ಸ್ಮರಿಸಿ ಹೊಗಳುವುದಲ್ಲ ಬದಲಾಗಿ ಇಂದಿನ ಅಗತ್ಯತೆಗೆ ಅನುಗುಣವಾಗಿ ಯುವಕರನ್ನು ಒಳಗೊಂಡು ಹಮ್ಮಿಕೊಳ್ಳುವ ಆಚರಣೆ ರೀತಿ ಸತ್ಯಾಗ್ರಹವನ್ನು ನಡೆಸುವುದು ಈ ಕಾರ್ಯಕ್ರಮದ ಉದ್ದೇಶವಾಗಿದೆ.
ಗ್ರಾಮ ಸ್ವರಾಜ್ಯ ಹಾಗೂ ದೇಶದಲ್ಲಿ ಧಾರ್ಮಿಕ ಸಹಿಷ್ಣುತೆ ಹೆಚ್ಚಿಸುವ ನಿಟ್ಟಿನಲ್ಲಿ ಈ ಸತ್ಯಾಗ್ರಹ ಏರ್ಪಡಿಸಲಾಗಿದೆ. 7 ತಾಸುಗಳ ಕಾಲ ನಡೆಯುವ ಈ ಸತ್ಯಾಗ್ರಹದಲ್ಲಿ ಕೇವಲ ಏಳು ತಾಸುಗಳ ಉಪವಾಸ ಮಾತ್ರವಲ್ಲದೆ ಕೈಮಗ್ಗ ವಸ್ತುಗಳ ಪ್ರದರ್ಶನ, ಮಾರಾಟ, ವಿವಿಧ ಕಲಾವಿದರಿಂದ ನೃತ್ಯ, ಹಾಡು ಮತ್ತಿತರೆ ದೇಶಭಕ್ತಿ ಉದ್ಧೀಪನಗೊಳಿಸುವ ಗಾಯನವೂ ನಡೆಯಲಿದೆ.

ಯುವಕರೇ ಸತ್ಯಾಗ್ರಹ ಮಾಡಿ ಎನ್ನುವ ಕಾರ್ಯಕ್ರಮದಲ್ಲಿ ಹಲವಾರು ಪ್ರಸಿದ್ಧ ಕಲಾವಿದರು ಕೂಡ ಪಾಲ್ಗೊಂಡು ಹಾಡುವುದು ಮತ್ತು ನೃತ್ಯ ಮಾಡುವುದು ಕಾರ್ಯಕ್ರಮದ ಉದ್ದೇಶವಾಗಿದೆ. ಭಾಗವಹಿಸಲು ಇಚ್ಛಿಸುವ ಯುಕವಕರು ಗ್ರಾಮ ಸ್ವರಾಜ್ಯ ಸೇವಾ ಸಂಘವನ್ನು ಸಂಪರ್ಕಿಸಬಹುದಾಗಿದೆ.












Click it and Unblock the Notifications