ಬೆಂಗಳೂರಿನ ಜಿಂದಾಲ್ ನಿಸರ್ಗಾಲಯದಲ್ಲಿ ಹಾರ್ದಿಕ್ ಪಟೇಲ್ ಗೆ ಚಿಕಿತ್ಸೆ

ಬೆಂಗಳೂರು, ಸೆಪ್ಟೆಂಬರ್ 18: ಗುಜರಾತ್ ನ ಪಾಟಿದಾರ್ ಸಮುದಾಯಕ್ಕೆ ಮೀಸಲಾತಿ ದೊರಕಿಸಲು ಉಪವಾಸ ಹೋರಾಟದ ಮೂಲಕ ದೇಶದ ಗಮನ ಸೆಳೆದಿರುವ ಯುವ ಮುಖಂಡ ಹಾರ್ದಿಕ್ ಪಟೇಲ್ 10 ದಿನಗಳ ಚಿಕಿತ್ಸೆಗಾಗಿ ಬೆಂಗಳೂರಿನ ಜಿಂದಾಲ್ ನೇಚರ್ ಕ್ಯೂರ್ ನಲ್ಲಿ ದಾಖಲಾಗಲಿದ್ದಾರೆ.

ಪಾಟಿದಾರ್ ಸಮುದಾಯಕ್ಕೆ ಮೀಸಲಾತಿ ನೀಡಬೇಕು ಎಂದು ಆಗ್ರಹಿಸಿ 19 ದಿನಗಳ ಕಾಲ ಉಪವಾಸ ಕೈಗೊಂಡಿದ್ದ ಹಾರ್ದಿಕ್ ಪಟೇಲ್ ಆರೋಗ್ಯ ಸ್ಥಿತಿ ಕ್ಷೀಣಿಸಿದ್ದು ಹೆಚ್ಚಿನ ಚಿಕಿತ್ಸೆಗಾಗಿ ಜಿಂದಾಲ್ ನೈಸರ್ಗಿಕ ಕೇಂದ್ರಕ್ಕೆ ಆಗಮಿಸಲಿದ್ದಾರೆ.

ಸೆಪ್ಟೆಂಬರ್ 18ರಿಂದ ಚಿಕಿತ್ಸೆ ಆರಂಭವಾಗಲಿದೆ. ಒಂದು ವಾರದ ಹಿಂದೆಯೇ ಹಾರ್ದಿಕ್ ಈ ಚಿಕಿತ್ಸಾಲಯದಲ್ಲಿ 10 ದಿನಗಳ ಚಿಕಿತ್ಸೆಗೆ ಬುಕಿಂಗ್ ಮಾಡಿದ್ದರು. ಪಾತೀದಾರ್ ಸಮುದಾಯಕ್ಕೆ ಮೀಸಲಾತಿ ನೀಡಬೇಕು ಎಂದು ಒತ್ತಾಯಿಸಿ 19 ದಿನಗಳ ಕಾಲ ಉಪವಾಸ ಕೈಗೊಂಡಿದ್ದರು. ಬಳಿಕ ಆರೋಗ್ಯ ಸ್ಥಿತಿ ಕ್ಷೀಣಿಸಿರುವ ಕಾರಣ ಉಪವಾಸ ಪ್ರತಿಭಟನೆಯನ್ನು ಸೆಪ್ಟೆಂಬರ್ 12ಕ್ಕೆ ಅಂತ್ಯಗೊಳಿಸಿದ್ದರು.

Youth icon Hardik Patel in Bengaluru for treatment

ಈಗಾಗಲೇ ಹಾರ್ದಿಕ್ ಪಟೇಲ್ ಅವರಿಗೆ ಇ-ಮೇಲ್ ಕಳುಹಿಸಿದ್ದೇವೆ, ಯಾವುದೇ ರಾಜಕೀಯ ಚರ್ಚೆಗಳು, ಸಭೆಗಳಲ್ಲಿ ಪಾಲ್ಗೊಳ್ಳದಂತೆ ಸೂಚಿಸಲಾಗಿದೆ ಎಂದು ಜಿಂದಾಲ್ ನೇಚರ್ ಕೇರ್ ನ ವೈದ್ಯರು ತಿಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+