ದೆವ್ವಕ್ಕೆ ಮಧ್ಯರಾತ್ರಿ ಬಿರಿಯಾನಿ, ಕಬಾಬ್ ಶೇರ್ ಮಾಡಿದ ಯುವಕರು!
ಮೂರು ಜನ ಯುವಕರು ಮಾಡಿರುವ ಕೆಲಸ ನೋಡಗರನ್ನು ದಂಗು ಬಡಿಸಿದೆ. ಆ ಯುವಕ ಹುಚ್ಚಾಟದ ವಿಡಿಯೋ ಇದೀಗ ವೈರಲ್ ಆಗಿದ್ದು, ಇದೆಲ್ಲ ಬೇಕಿತ್ತಾ ಎಂದು ಜನ ಪ್ರಶ್ನೆ ಮಾಡುತ್ತಿದ್ದಾರೆ. ದೆವ್ವಗಳೊಂದಿಗೆ ಬಿರಿಯಾನಿ, ಕಬಾಬ್ ಶೇರಿಂಗ್ ಮಾಡ್ತೀವಿ ಅಂತ ಹುಡುಗರು ಮಾಡಿರುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಆದರೆ, ಈ ದೃಶ್ಯಗಳನ್ನು ನೋಡಲು ಎಂಟೆದೆ ಗುಂಡಿಗೆ ಬೇಕು.
ರಾತ್ರಿ ಸಮಯದಲ್ಲಿ ರಸ್ತೆಯಲ್ಲಿ ಒಬ್ಬರೇ ಓಡಾಡುವುದಕ್ಕೂ ಜನ ಹೆದರಿಕೊಳ್ಳುವುದಿದೆ. ಇನ್ನು ಸ್ಮಶಾನದ ಮುಂದೆ ಹೋಗಬೇಕಂದರೂ ನೂರಾರು ದೇವರನ್ನು ನೆನಪಿಸಿಕೊಂಡು, ಮನಸ್ಸಿನಲ್ಲೇ ಜೈ ಆಂಜನೇಯ.. ಜೈ ಆಂಜನೇಯ ಎಂದು ಕೊಂಡು ಹೋಗುವುದೇ ಹೆಚ್ಚು. ಸ್ಮಶಾನದ ಒಳಗೆ ಹೋದರು ಹೇಗಿದೆ ಎನ್ನುವ ಸಾಹಸ ಮಾಡಬಹುದಷ್ಟೇ ಆದರೆ, ಯಾರೂ ಸಹ ಸ್ಮಶಾನದಲ್ಲಿ ಬಿರಿಯಾನಿ ತಿನ್ನುವ ಸಾಹಸ ಮಾಡಲ್ಕಿಲ್ಲ. ಈ ಮೂರು ಜನ ಯುವಕರು ಆ ರೀತಿಯ ಸಾಹಸವೊಂದನ್ನು ಮಾಡಿದ್ದಾರೆ.

ಬಿಸಿರಕ್ತದ ಯುವಕರು ಮಾಡುವ ಸಾಹಸಗಳು ಒಂದೆರಡಲ್ಲ. ಹೊಸ ಹೊಸ ಸಾಹಸ, ಅಲ್ಲೇನಿದೆ ನೋಡೇ ಬಿಡೋಣ ಎನ್ನುವ ಹುಮಸ್ಸು ಕೊನೆಗೆ ಎಲ್ಲಿಗೆ ಬೇಕಾದರೂ, ತೆಗೆದುಕೊಂಡು ಹೋಗಿ ಬಿಡುತ್ತದೆ. ಅದೇ ರೀತಿ ಮೂರು ಜನ ಯುವಕರು ಸೇರಿ ಮಧ್ಯರಾತ್ರಿ ಸ್ಮಶಾನಕ್ಕೆ ಹೋಗಿ ಬಿರಿಯಾನಿ, ಮೊಟ್ಟೆ, ಕಬಾಬ್, ಚಿಕನ್ ಹಾಗೂ ಮಟನ್‌ಗಳನ್ನು ತಿಂದಿದ್ದಾರೆ. ಈ ವಿಡಿಯೋ ವೈರಲ್ ಎಂತವರ ಎದೆಯನ್ನು ನಡುಗಿಸುವಂತಿದೆ.
ಏನಿದು ದೆವ್ವಗಳಿಗೆ ಬಿರಿಯಾನಿ
ಸ್ಮಶಾನದಲ್ಲಿ ಗೋರಿ ಮೇಲೆ ಬಾಡೂಟ ಎನ್ನುವ ಕಾನ್ಸೆಪ್ಟ್‌ನೊಂದಿಗೆ ಮೂರು ಜನ ಯುವಕರು ಸ್ಮಶಾನವೊಂದರಲ್ಲಿ ಮಧ್ಯರಾತ್ರಿ ಬಾಳೆ ಎಲೆಯ ಮೇಲೆ ವಿವಿಧ ಬಾಡೂಟ ಮಾಡಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ವಿಕಾಸ್ ಗೌಡ ಎನ್ನುವವರ ಖಾತೆಯಿಂದ ಈ ವಿಡಿಯೋ ಅಪ್ಲೋಡ್ ಆಗಿದೆ. ಮಧ್ಯರಾತ್ರಿ 12 ಗಂಟೆಗೆ ಯುವಕರು ಸ್ಮಶಾನಕ್ಕೆ ಹೋಗಿದ್ದಾರೆ. ಗೋರಿಗಳ ಮೇಲೆ ನಾನ್‌ವೆಜ್ ಊಟ ಮಾಡುವುದು ಇವರ ಕಾನ್ಸೆಪ್ಟ್. ಆದರೆ, ಊಟ ಶುರುಮಾಡುವ ಮುನ್ನ ಭಯವಾಗಿ ಒಂದು ಬಾಳೆ ಎಲೆಯ ಮೇಲೆ ಬಿರಿಯಾನಿ, ಮೊಟ್ಟೆ, ಕಬಾಬ್ ಸೇರಿದಂತೆ ನಾನ್ ವೆಜ್ ಐಟಂಗಳನ್ನು ಇಟ್ಟಿದ್ದಾರೆ.
ಉದ್ದನೆಯ ಬಾಳೆಯ ಎಲೆಯ ಮೇಲೆ ನಾನ್‌ವೆಜ್ ಇರಿಸಿಕೊಂಡು ಊಟ ಮಾಡುವಾಗ ಬರುವ ಗಾಳಿ, ಶಬ್ದಕ್ಕೆ ಭಯ ಬಿದ್ದಿರುವುದು ವಿಡಿಯೋದಲ್ಲಿ ಸೆರೆಯಾಗಿದೆ. ಸ್ಮಶಾನದಲ್ಲಿ ಗೋರಿಯ ಮೇಲೆ ಕುಳಿತೇ ಇಬ್ಬರು ಯುವಕರು ನಾನ್ ವೆಜ್ ಊಟ ಮಾಡಿದ್ದಾರೆ. ಸ್ಮಶಾನದಲ್ಲಿ ನಡೆದುಕೊಂಡು ಹೋಗುವಾಗ ಸ್ಮಶಾನದಲ್ಲಿ ಇರುವ ಗೋರಿಗಳು, ಸಮಾಧಿಗಳನ್ನು ತೋರಿಸಲಾಗಿದೆ. ಊಟ ಮಾಡುವಾಗ ಬಾಳೆ ಎಲೆಗಳು ಎಗರುವುದು, ವಿಚಿತ್ರವಾಗಿ ಯಾರೋ ಹಿಂದೆಯಿಂದ ಕರೆದಿದ್ದಾರೆ ಎನ್ನುವಂತಹ ಅನುಭವಗಳು ಆಗಿರುವುದನ್ನು ವಿಡಿಯೋದಲ್ಲಿ ಯುವಕರು ಹೇಳಿಕೊಂಡಿದ್ದಾರೆ.
ವೈರಲ್ ಆಗಿರುವ ವಿಡಿಯೋ
ಇನ್ನು ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ವೈರಲ್ ಆಗಿದೆ. 91 ಸಾವಿರಕ್ಕೂ ಹೆಚ್ಚು ಜನ ಈ ವಿಡಿಯೋವನ್ನು ಲೈಕ್ ಮಾಡಿದ್ದು, ಒಂದು ಸಾವಿರಕ್ಕೂ ಈ ವಿಡಿಯೋ ಶೇರ್ ಆಗಿದೆ. ಜನ ಈ ವಿಡಿಯೋವನ್ನು ಕುತೂಹದಿಂದ ನೋಡಿದ್ದಾರೆ.












Click it and Unblock the Notifications