ಇಂಜಿನಿಯರಿಂಗ್ ಆಗಿದೆಯಾ? ಅನುಭವ ಇದ್ದು, ಉದ್ಯೋಗ ಹುಡುಕುತ್ತಿದ್ದೀರಾ? ಬೆಂಗಳೂರಿನ ಮೆಟ್ರೋದಲ್ಲಿ ಸುವರ್ಣ ಅವಕಾಶ
ಬೆಂಗಳೂರಿನ ಮೆಟ್ರೋ ರೈಲು ನಿಗಮವು ಅಗತ್ಯಕ್ಕೆ ತಕ್ಕಂತೆ ಸಿಬ್ಬಂದಿಗಳನ್ನು ನೇಮಕ ಮಾಡುತ್ತಲೇ ಇರುತ್ತದೆ. ಈಗ ಮತ್ತೊಂದು ಸುವರ್ಣ ಅವಕಾಶ ಬಿಇ ಮಾಡಿರುವವರಿಗೆ ಉದ್ಯೋಗ ಅವಕಾಶ ಬಿಡುಗಡೆ ಮಾಡಿದೆ. ಹಾಗಿದ್ರೆ ಮೆಟ್ರೋದಲ್ಲಿ ಯಾವೆಲ್ಲಾ ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ ಎಂಬ ಬಗ್ಗೆ ವರದಿ ಇಲ್ಲಿದೆ.
ಬೆಂಗಳೂರಿನ ಮೆಟ್ರೋ ರೈಲು ನಿಗಮವು ಹಲವು ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಿದೆ. ಅರ್ಹ ಮತ್ತು ಅನುಭವ ಹೊಂದಿರುವ ಅಧಿಕಾರಿಗಳಿಂದ ಹಿಡಿದು ವಿವಿಧ ಹುದ್ದೆಗಳ ಭರ್ತಿಗೆ ಮೆಟ್ರೋ ಮುಂದಾಗಿದೆ. ಗುತ್ತಿಗೆ ಆಧಾರದ ಮೇಲೆ ಮಾತ್ರ ನೇಮಕ ಮಾಡಿಕೊಳ್ಳಲು ನಿರ್ಧರಿಸಲಾಗಿದೆ. ಆಸಕ್ತರು ವಿವರವನ್ನು ಪೂರ್ತಿ ತಿಳಿದು ಅರ್ಜಿಯನ್ನು ಸಲ್ಲಿಸಬಹುದಾಗಿದೆ.

ಅರ್ಜಿ ಸಲ್ಲಿಸುವ ಆಸಕ್ತರು ಸಿವಿಲ್ ಬಿಇ ಅಥವಾ ಬಿಟೆಕ್ ಅನ್ನು ಓದಿರಬೇಕು. ಬೇರೆ ಹುದ್ದೆಗಳಲ್ಲಿ ಸೇವೆ ಮಾಡುತ್ತಿರುವವರು ಹಾಗೂ ರೈಲ್ವೇ ಇಲಾಖೆಯಿಂದ ನಿವೃತ್ತಿ ಹೊಂದಿದ ಅಧಿಕಾರಿಗಳಿಗೂ ಮೆಟ್ರೋದಲ್ಲಿ ಅವಕಾಶವಿದೆ. ಅರ್ಜಿಯನ್ನು ಸಲ್ಲಿಸುವ ಅಭ್ಯರ್ಥಿಗಳು 5 ರಿಂದ 12 ವರ್ಷದ ಅನುಭವ ಹೊಂದಿರುವವರು ಅರ್ಜಿ ಸಲ್ಲಿಸಲು ಅರ್ಹರು.
ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 31-07-2024
ಅಂಚೇ/ ಕೋರಿಯರ್ ಮೂಲಕ ಸಲ್ಲಿಕೆಗೆ ಕೊನೆಯ ದಿನಾಂಕ: 05-08-2024
| ಕ್ರಮ ಸಂಖ್ಯೆ | ಹುದ್ದೆ | ಸಂಖ್ಯೆ |
| 1 | ಸಲಹೆಗಾರ/ ಮುಖ್ಯ ಅಭಿಯಂತರರು (ಸಿವಿಲ್) | 3 |
| 2 | ಉಪ ಮುಖ್ಯ ಅಭಿಯಂತರರು/ ಕಾರ್ಯನಿರ್ವಾಹಕ ಅಭಿಯಂತರರು (ಟ್ರ್ಯಾಕ್) | 3 |
| 3 | ಸಹಾಯಕ ಅಭಿಯಂತರರು/ ವಿಭಾಯ ಅಭಿಯಂತರರು (ಟ್ರ್ಯಾಕ್) | 5 |
| 4 | ಒಟ್ಟು ಹುದ್ದೆಗಳು | 11 |
ವೇತನ:
| ಕ್ರಮ ಸಂಖ್ಯೆ | ಹುದ್ದೆ | ವೇತನ |
| 1 | ಸಲಹೆಗಾರ/ ಮುಖ್ಯ ಅಭಿಯಂತರರು (ಸಿವಿಲ್) | ₹206250-210693/- |
| 2 | ಉಪ ಮುಖ್ಯ ಅಭಿಯಂತರರು/ ಕಾರ್ಯನಿರ್ವಾಹಕ ಅಭಿಯಂತರರು (ಟ್ರ್ಯಾಕ್) | ₹126746-164000/- |
| 3 | ಕಾರ್ಯನಿರ್ವಾಹಕ ಅಭಿಯಂತರರು (ಟ್ರ್ಯಾಕ್) | ₹81250-106250/- |
| 4 | ಸಹಾಯಕ ಅಭಿಯಂತರರು/ ವಿಭಾಯ ಅಭಿಯಂತರರು (ಟ್ರ್ಯಾಕ್) | ₹50000-62500/- |
| 5 | ವಿಭಾಗ ಅಭಿಯಂತರರು | ₹40000-51350/- |
ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸುವುದು ಹೇಗೆ?
https://projectrecruit.bmrc.co.in/frmInstructions.aspx ಈ ವಿಳಾಸಕ್ಕೆ ಭೇಟಿ ನೀಡಿ, Application Form ಕ್ಲಿಕ್ ಮಾಡಿದರೆ ಹೊಸವೆಬ್ ಸೈಟ್ ಓಪನ್ ಆಗುತ್ತದೆ. ಇಲ್ಲಿ ನಿಮ್ಮ ಅಗತ್ಯ ಮಾಹಿತಿಗಳನ್ನು ತುಂಬಿ ಸಬ್‌ಮಿಟ್ ಮಾಡಬೇಕು.
ವಿಳಾಸ:
General Manager (HR), Bangalore Metro Rail Corporation Limited, III Floor, BMTC Complex, K.H Road, Shanthinagar, Bengaluru - 560027












Click it and Unblock the Notifications