Get Updates
Get notified of breaking news, exclusive insights, and must-see stories!

ಬೆಂಗಳೂರು: ಅತಿ ಹೆಚ್ಚು ಮಾರಣಾಂತಿಕ ರಸ್ತೆ ಅಪಘಾತ ಪ್ರದೇಶಗಳ ಪಟ್ಟಿ

ಬೆಂಗಳೂರು, ಡಿ. 13: ಸಿಲಿಕಾನ್ ಸಿಟಿಯಲ್ಲಿ ಜನರ ಸಂಖ್ಯೆಯಷ್ಟೇ ವಾಹನಗಳ ಸಂಖ್ಯೆಯೂ ಇದೆ. ಟ್ರಾಫಿಕ್ ಜಾಮ್ ಎಷ್ಟು ಸಾಮಾನ್ಯವೆನಿಸುತ್ತದೋ ಅಪಘಾತಗಳು ಕೂಡ ಸಾಮಾನ್ಯವೆನಿಸುವಂತಾಗಿವೆ.

ನಗರದ ಪ್ರಮುಖ ರಸ್ತೆಗಳಲ್ಲಿ ಪ್ರತಿದಿನ ಒಂದಲ್ಲ ಒಂದು ಅಪಘಾತ ಪ್ರಕರಣಗಳು ವರದಿಯಾಗುತ್ತಲೆ ಇರುತ್ತವೆ. ಸಣ್ಣ ರಸ್ತೆಗಳಲ್ಲಿ ಚಿಕ್ಕಪುಟ್ಟ ಅಪಘಾತಗಳಾಗು್ತತವೆ. ಆದರೆ ದೊಡ್ಡ ದೊಡ್ಡ ರಸ್ತೆಗಳಲ್ಲಿ ಮಾರಣಾಂತಿಕ ರಸ್ತೆ ಅಪಘಾತಗಳು ಸಂಭವಿಸುತ್ತವೆ. ಅದರಲ್ಲೂ ಹೆದ್ದಾರಿಗಳು, ಫ್ಲೈ ಓವರ್‌ಗಳಲ್ಲಿ ಇವುಗಳು ಜಾಸ್ತಿ.

ಬೆಂಗಳೂರಿನಲ್ಲಿ ಯಲಹಂಕದಲ್ಲಿ ಅತಿ ಹೆಚ್ಚು ರಸ್ತೆ ಅಪಘಾತಗಳು ವರದಿಯಾಗಿವೆ. ಇಲ್ಲಿನ ಅಪಘಾತಗಳಲ್ಲಿ ಸಾವಿನ ಸಂಖ್ಯೆ ಹೆಚ್ಚುತ್ತಲೇ ಇದೆ. ಈ ವರ್ಷದ ಮೊದಲ 10 ತಿಂಗಳಲ್ಲಿ ಈ ರಸ್ತೆಯಲ್ಲಿ ಮೃತಪಟ್ಟವರ ಸಂಖ್ಯೆ ಬರೋಬ್ಬರಿ 40 ರಷ್ಟಿದೆ.

Yelahanka sees highest road accidents in Bengaluru

2021 ರಲ್ಲಿ ಯಲಹಂಕ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 52 ಮಂದಿ ರಸ್ತೆ ಅಪಘಾತ ಪ್ರಕರಣಗಳಲ್ಲಿ ಮೃತಪಟ್ಟಿರುವ ವರದಿಯಾಗಿದೆ. ಈ ವರ್ಷದ ಮೊದಲ 10 ತಿಂಗಳಲ್ಲಿ ಈ ಸಂಖ್ಯೆ 40 ಕ್ಕೆ ಏರಿಕೆ ಆಗಿದೆ.

ಯಲಹಂಕ ಬಳಿಕ ಈ ವರ್ಷ ರಸ್ತೆ ಅಪಘಾತಗಳಿಂದಾಗಿ ಅತಿ ಹೆಚ್ಚು ಸಾವುಗಳು ಸಂಭವಿಸಿರುವ ಎರಡನೇ ಪ್ರದೇಶ ಪಕ್ಕದ ಚಿಕ್ಕಜಾಲ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವರದಿಯಾಗಿದೆ. ಚಿಕ್ಕಜಾಲದಲ್ಲಿ 38 ಸಾವುಗಳು ವರದಿಯಾಗಿವೆ.

ಕಾಮಾಕ್ಷಿಪಾಳ್ಯದಲ್ಲಿ 37, ಕೆಂಗೇರಿಯಲ್ಲಿ 30, ಕೆಎಸ್ ಲೇಔಟ್‌ನಲ್ಲಿ 28, ಪೀಣ್ಯಾದಲ್ಲಿ 26, ದೇವನಹಳ್ಳಿಯಲ್ಲಿ 24 ರಸ್ತೆ ಅಪಘಾತಗಳು ವರದಿಯಾಗಿವೆ.

ಬೆಂಗಳೂರಿನ 44 ಟ್ರಾಫಿಕ್ ಪೊಲೀಸ್ ಠಾಣೆಗಳಿಂದ ಪಡೆದ ಮಾಹಿತಿಯ ಪ್ರಕಾರ, 2021 ರಲ್ಲಿ ಚಿಕ್ಕಜಾಲವು ಮೂರನೇ ಅತಿ ಹೆಚ್ಚು ಅಂದರೆ 40 ಸಾವುಗಳನ್ನು ಕಂಡಿದೆ.

ನಗರದಲ್ಲಿ ಕಳೆದ ವರ್ಷ ವರದಿಯಾದ 675 ರಸ್ತೆ ಅಪಘಾತ ಸಾವುಗಳಲ್ಲಿ ಯಲಹಂಕ ಮತ್ತು ಚಿಕ್ಕಜಾಲದ ಪ್ರಮಾಣ ಕ್ರಮವಾಗಿ 7.7% ಮತ್ತು 6% ರಷ್ಟಿದೆ. ಈ ವರ್ಷ, ಮೊದಲ 10 ತಿಂಗಳಲ್ಲಿ 577 ರಸ್ತೆ ಅಪಘಾತ ಸಾವುಗಳಲ್ಲಿ, ಎರಡು ಸ್ಥಳಗಳ ಪ್ರಮಾಣ ಕ್ರಮವಾಗಿ 6.9% ಮತ್ತು 6.6% ರಷ್ಟಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+