ಕಿರಾತಕ ಶಬರೀಶ್ ಗ್ಯಾಂಗ್ ಗೆ ಮುಕ್ತಿ ಕೊಟ್ಟ ಪೊಲೀಸ್ ಬುಲೆಟ್ !

ಬೆಂಗಳೂರು, ಫೆಬ್ರವರಿ 11: ರಾಜಧಾನಿ ಬೆಂಗಳೂರಿಲ್ಲಿ ಪೊಲೀಸರ ಗುಂಡು ಗಳು ಪದೇ ಪದೇ ಸುದ್ದು ಮಾಡುತ್ತಲೇ ಇವೆ. ನಿನ್ನೆಯಷ್ಟೇ ಜಯನಗರ ಪೊಲೀಸರು ಮನೆಗಳ್ಳನ ಕಾಲಿಗೆ ಗುಂಡು ಹೊಡೆದು ಮಲಗಿಸಿದ್ದರು ! ಗುರುವಾರ ಬೆಳಗ್ಗೆ ದರೋಡೆಕೋರರನ ಕಾಲಿಗೆ ಗುಂಡು ಹೊಡೆದು ಯಲಹಂಕ ಪೊಲೀಸರು ಹಾಸಿಗೆ ಮೇಲೆ ಮಲಗಿಸಿದ್ದಾರೆ.

ಯಲಹಂಕ ರೌಡಿ ಶೀಟರ್, ದರೋಡೆಕೋರ ಶಬರೀಶ್ ಅಲಿಯಾಸ್ ಅಪ್ಪಿ ಎಡಗಾಲಿಗೆ ಗುಂಡು ತಗುಲಿದ್ದುಮ ಪ್ರಥಮ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಯಲಹಂಕ ಠಾಣೆ ಪೊಲೀಸ್ ಇನ್ಸೆಪೆಕ್ಟರ್ ರಾಮಕೃಷ್ಣಾರೆಡ್ಡಿ ಬುಲೆಟ್ ಹಾರಿಸಿದ್ದಾರೆ. ಶಬರೀಶ್ ನ ಇಬ್ಬರು ಸಹಚರರನ್ನು ಇದೇ ವೇಳೆ ಬಂಧಿಸಿದ್ದಾರೆ. ಆರೋಪಿಗಳನ್ನು ಬಂಧಿಸುವ ವೇಳೆ ಕಿರಾಕತರು ಮಚ್ಚಿನಿಂದ ಹಲ್ಲೆ ನಡೆಸಿದ್ದು, ಪೊಲೀಸ್ ಪೇದೆ ಶಿವಕುಮಾರ್ ಗಾಯಗೊಂಡಿದ್ದಾರೆ. ನಿನ್ನೆ ಜಯನಗರದಲ್ಲಿ ಮನೆಗಳ್ಳನನ್ನು ಚೇಸ್ ಮಾಡಿ ಜಯನಗರ ಇನ್‌ಸ್ಪೆಕ್ಟರ್ ಸುದರ್ಶನ್ ಗುಂಡು ಹಾರಿಸಿ ಸುದ್ದಿಯಾಗಿದ್ದರು.

Bengaluru ; Yelahanka police opened fire on rowdy sheeter

ದರೋಡೆಕೋರರ ಗ್ಯಾಂಗ್ ಯಲಹಂಕ ನ್ಯೂಟೌನ್ ನ ಜ್ಞಾನ ಜ್ಯೋತಿ ಮೈದಾನದ ಬಳಿ ಇರುವ ಬಗ್ಗೆ ಪೊಲೀಸರಿಗೆ ಖಚಿತ ಮಾಹಿತಿ ನೀಡಿತ್ತು. ಎರಡು ದಿನಗಳ ಹಿಂದೆಯಷ್ಟೇ ಕೋಗಿಲು ಕ್ರಾಸ್ ಬಳಿ ದರೋಡೆಗೆ ಯತ್ನಿಸಿದ್ದರು. ಶಬರೀಶ್ ಗ್ಯಾಂಗ್ ನಿಂದ ಮಾರುತಿ ಸುಜುಕಿ ಟ್ಯಾಕ್ಸಿ ದರೋಡೆ ಮಾಡಿದ್ದರು. ಮಾಲೀಕ ನಾಗರಾಜ್ ಮೇಲೆ ಮಚ್ಚಿನಿಂದ ಹಲ್ಲೆ ನಡೆಸಿ ಕಿರಾತಕರು ಪರಾರಿಯಾಗಿದ್ದರು. ಮುರಳಿ, ಇಮ್ರಾನ್ ರಂಜಿತ್, ಶಬರೀಶ್ ಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದರು. ಇದಕ್ಕೂ ಮೊದಲು ಯಲಹಂಕದ ಸುರಭಿ ಲೇಔಟ್ ನಲ್ಲಿ ಸರಣಿ ಬೈಕ್ ಕದಿದ್ದರು. ಎರಡು ಫಲ್ಸರ್ ಹಾಗೂ ಡಿಯೋ ಬೈಕ್ ಕದ್ದಿದ್ದ ಬಗ್ಗೆ ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕ ಕೇಸು ದಾಖಲಾಗಿದ್ದವು.

Bengaluru ; Yelahanka police opened fire on rowdy sheeter

ಖಚಿತ ಮಾಹಿತಿ ಮೇರೆಗೆ ಗುರುವಾರ ಬೆಳಗ್ಗೆ ಪೊಲೀಸರು ಶಬರೀಶ್ ಗ್ಯಾಂಗ್ ಬಂಧನಕ್ಕೆ ತೆರಳಿದ್ದಾರೆ. ಈ ವೇಳೆ ಮಚ್ಚಿನಿಂದ ಪೊಲೀಸರ ಮೇಲೆ ಹಲ್ಲೆಗೆ ಯತ್ನಿಸಿದ್ದಾರೆ. ಶರಣಾಗತಿಯಾಗಲು ಪೊಲೀಸರು ಸೂಸಿಚಿದರೂ ಕೇಳಿಲ್ಲ. ಗಾಳಿಯಲ್ಲಿ ಒಂದು ಸುತ್ತು ಗುಂಡು ಹಾರಿಸಿದ ಪೊಲೀಸ್ ಇನ್ಸ್ಪೆಪೆಕ್ಟರ್ ರಾಮಕೃಷ್ಣಾರೆಡ್ಡಿ ಶಬರೀಶ್ ಕಾಲಿಗೆ ಗುಂಡು ಇಳಿಸಿದ್ದಾರೆ. ಇದಾದ ಬಳಿಕ ಇಬ್ಬರು ಶರಣಾಗಿದ್ದು, ಮತ್ತೊಬ್ಬ ತಪ್ಪಿಸಿಕೊಂಡಿದ್ದಾನೆ. ಗಾಯಾಳು ಶಬರೀಶ್ ಹಾಗೂ ಪೇದೆಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

Bengaluru ; Yelahanka police opened fire on rowdy sheeter

Recommended Video

      ಎಟಿಎಂ ಹಣ ಕದ್ದು ಎಸ್ಕೇಪ್ ಆಗಿದ್ದ ಡ್ರೈವರ್ ಅರೆಸ್ಟ್ | Oneindia Kannada

      ವಿವಿಧ ಅಪರಾಧ ಪ್ರಕರಣಗಳಲ್ಲಿ ಜೈಲಿಗೆ ಹೋಗಿದ್ದ ದರೋಡೆಕೋರರ ಗ್ಯಾಂಗ್ ಬಿಡುಗಡೆ ಬಳಿಕ ವಿವಿಧ ಠಾಣೆಗಳಲ್ಲಿ ತಮ್ಮ ಕಾರ್ಯಾಚರಣೆ ಮುಂದುವರೆಸಿದ್ದರು. ಪೀಣ್ಯ, ಕುಮಾರಸ್ವಾಮಿ ಲೇಔಟ್, ಸಂಪಿಗೆಹಳ್ಳಿ, ಸಂಜಯನಗರ, ನೆಲಮಂಗಲ, ಚಿಕ್ಕಜಾಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇವರ ವಿರುದ್ಧ ಕ್ರಿಮಿನಲ್ ದಾವೆ ದಾಖಲಾಗಿದ್ದವು. ಅಂತೂ ಕಾಲಿಗೆ ಗುಂಡು ಹೊಡೆದು ಶಬರೀಶ್ ಗ್ಯಾಂಗ್ ಉಪಟಳಕ್ಕೆ ಯಲಹಂಕ ಪೊಲೀಸರು ಇತಿಶ್ರೀ ಹಾಡಿದ್ದಾರೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+