ಯಲಚೇನಹಳ್ಳಿ- ಅಂಜನಾಪುರ ವಿಸ್ತರಿತ ಮೆಟ್ರೋ ಮಾರ್ಗಕ್ಕೆ ಯಡಿಯೂರಪ್ಪ ಚಾಲನೆ
ಬೆಂಗಳೂರು, ಜನವರಿ 14:ಯಲಚೇನಹಳ್ಳಿ-ಅಂಜನಾಪುರ ವಿಸ್ತರಿತ ನಮ್ಮ ಮೆಟ್ರೋ ಹಸಿರು ಮಾರ್ಗಕ್ಕೆ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಇಂದು ಚಾಲನೆ ನೀಡಿದ್ದಾರೆ.
6 ಕಿ.ಮೀ ಉದ್ದದ ನೂತನ ಮಾರ್ಗಕ್ಕೆ ವಿಡಿಯೋ ಕಾನ್ಫರೆನ್ಸ್ ಮೂಲಕ ಕೇಂದ್ರ ಸಚಿವ ಹರ್ದೀಪ್ ಸಿಂಗ್ ಪುರಿ ಚಾಲನೆ ನೀಡಿದ್ದಾರೆ.
ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಹಸಿರುನಿಶಾನೆ ತೋರಿದ್ದಾರೆ. ಮೆಟ್ರೋ ಹಸಿರು ಮಾರ್ಗ ತುಮಕೂರು ರಸ್ತೆ ನಾಗಸಂಧ್ರದಿಂದ ಕನಕಪುರ ರಸ್ತೆಯ ಯಲಚೇನಹಳ್ಳಿವರೆಗೆ ಇತ್ತು.
ಈಗ ಈ ಮಾರ್ಗವನ್ನು ಯಲಚೇನಹಳ್ಳಿಯಿಂದ ಅಂಜನಾಪುರಕ್ಕೆ 6 ಕಿ.ಮೀ ನಷ್ಟು ದೂರ ವಿಸ್ತರಿಸಲಾಗಿದೆ. ಕನಕಪುರ ರಸ್ತೆಯಲ್ಲಿ 6 ಕಿ.ಮೀನಷ್ಟು ದೂರ ವಿಸ್ತರಿಸಲಾಗಿದೆ. ಸಚಿವ ಆರ್ ಅಶೋಕ್, ಸದಾನಂದಗೌಡ, ಗೋವಿಂದ ಕಾರಜೋಳ, ಎಸ್‌ಆರ್ ವಿಶ್ವನಾಥ್ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.'

ಮೆಟ್ರೋ ಮಾರ್ಗಗಳು: ಕೋಣನಕುಂಟೆ ಕ್ರಾಸ್, ದೊಡ್ಡಕಲ್ಲಸಂದ್ರ, ವಾಜರಹಳ್ಳಿ, ತಲಘಟ್ಟಪುರ, ರೇಷ್ಮೆ ಸಂಸ್ಥೆ(ಅಂಜನಾಪುರ). ಈ ಮಾರ್ಗದಲ್ಲಿ ಕಳೆದ ಮೂರು ತಿಂಗಳಿನಿಂದ ಪ್ರಾಯೋಗಿಕ ಸಂಚಾರ ನಡೆಸಿರುವ ಮೆಟ್ರೋ ರೈಲು, ಕಳೆದ ತಿಂಗಳು ರೈಲ್ವೆ ಸೇಫ್ಟಿ ಸರ್ಟಿಫಿಕೇಟ್ ಪಡೆದಿತ್ತು. ಈ ಹಿನ್ನೆಲೆಯಲ್ಲಿ ಇಂದು ನೂತನ ರೈಲು ಮಾರ್ಗ ಲೋಕಾರ್ಪಣೆಗೊಂಡಿದೆ.
ಈ ಮೆಟ್ರೋ ಮಾರ್ಗದಿಂದಾಗಿ ನಿತ್ಯ 75 ಸಾವಿರಕ್ಕೂ ಹೆಚ್ಚು ಮಂದಿ ಪ್ರಯಾಣಿಕರಿಗೆ ಅನುಕೂಲವಾಗಲಿದೆ.
ಈ ಮಾರ್ಗದಲ್ಲಿ ಒಟ್ಟು ಐದು ಮಾರ್ಗಗಳು ಬರಲಿವೆ. ಇದೀಗ ನಗರದ ಸಂಚಾರಿಗಳಿಗೆ ಮತ್ತೊಂದು ಅಂತಹದ್ದೇ ರೀತಿಯ ಸೇವೆ ನೀಡುತ್ತಿರುವ ಸರ್ಕಾರದಿಂದ ಯೆಲಚೇನಹಳ್ಳಿಯಿಂದ ಸಿಲ್ಕ್ ಇನ್ಸ್ ಟಿಟ್ಯೂಟ್ ಗೆ ಹಸಿರು ಮಾರ್ಗದಲ್ಲಿ ನಮ್ಮ ಮೆಟ್ರೊ ಸಂಚಾರ ಆರಂಭವಾಗಲಿದೆ.












Click it and Unblock the Notifications