ಗೆಲ್ಲುವ ಮೊದಲೇ ಎಲ್ಲರಿಗೂ ಸಚಿವ ಸ್ಥಾನದ ಭರವಸೆ ನೀಡಿದ ಯಡಿಯೂರಪ್ಪ
ಬೆಂಗಳೂರು, ನವೆಂಬರ್ 14: ಅನರ್ಹ ಶಾಸಕರಿಗೆ ಕೊಟ್ಟ ಮಾತನ್ನು ನಡೆಸಿಕೊಡಬೇಕಿದೆ, ಅವರನ್ನು ಗೆಲ್ಲಿಸುತ್ತೇನೆ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದರು.
ಅನರ್ಹ ಶಾಸಕರು ಬಿಜೆಪಿಗೆ ಅಧಿಕೃತವಾಗಿ ಸೇರ್ಪಡೆಗೊಂಡ ಬಳಿಕ ಮಾತನಾಡಿರುವ ಅವರು, ಸಣ್ಣಪುಟ್ಟ ಅಭಿಪ್ರಾಯಗಳು ಇದ್ದರೂ ಕೂಡ ಅವುಗಳನ್ನು ಬದಿಗಿಟ್ಟು ಕೆಲಸ ಮಾಡಬೇಕು. ಎಲ್ಲಾ ಕ್ಷೇತ್ರಗಳಲ್ಲೂ ಗೆಲ್ಲುತ್ತೇವೆ ಎಂಬ ಭರವಸೆ ನೀಡುತ್ತೇನೆ ಎಂದರು.
15ಕ್ಕೆ 15ಕ್ಷೇತ್ರಗಳಲ್ಲೂ ಗೆಲವು ಸಾಧಿಸುತ್ತೇವೆ. ಎಲ್ಲರೂ ಜವಾಬ್ದಾರಿಯುತವಾಗಿ ವರ್ತಿಸಬೇಕು. 15ಮಂದಿ ಬಂದವರ ಜೊತೆಗೆ ಅವರ ಕಾರ್ಯಕರ್ತರು ಕೂಡ ಹೊಂದಿಕೊಂಡು ಕೆಲಸ ಮಾಡಬೇಕು.

ನಿಮ್ಮ ಗೆಲುವಿಗೆ ನಾವು ಪ್ರಯತ್ನ ಮಾಡುತ್ತೇವೆ ಎಂಬ ಭರವಸೆ ನೀಡುತ್ತಿದ್ದೇನೆ. ವೇದಿಕೆ ಮೇಲೆ ಇರುವ ಮಾಜಿ ಶಾಸಕರು ಮುಂದಿನ ಶಾಸಕರು, ಮುಂದಿನ ಸಚಿವರಾಗ್ತಾರೆ ಎಂದು ಹೇಳಿದ್ದಾರೆ.
ರಮೇಶ್ ಜಾರಕಿಹೋಳಿ, ವಿಶ್ವನಾಥ್, ಸೀಮಂತ್ ಪಾಟೀಲ್, ಪ್ರತಾಪ್ ಗೌಡ ಪಾಟೀಲ್, ಬಿ ಸಿ ಪಾಟೀಲ್ , ಶಿವರಾಂ ಹೆಬ್ಬಾರ್, ಆನಂದ್ ಸಿಂಗ್, ಡಾ.ಸುಧಾಕರ್, ಬೈರತಿ ಬಸವರಾಜ್, ಎಸ್ ಟಿ ಸೋಮಶೇಕರ್, ಮುನಿರತ್ನ, ಗೋಪಾಲಯ್ಯ, ನಾರಾಯಣಗೌಡ, ಆರ್ . ಶಂಕರ್ ಸೇರ್ಪಡೆ.












Click it and Unblock the Notifications