ಕೊರೊನಾ ಯೋಧರಿಗೆ ಲಸಿಕೆ ವಿತರಿಸಿದ ಸಿಎಂ ಯಡಿಯೂರಪ್ಪ!

ಬೆಂಗಳೂರು, ಜ. 16: ಕಳೆದ ಒಂದು ವರ್ಷದಿಂದ ಇಡೀ ಜಗತ್ತನ್ನು ಕಾಡುತ್ತಿರುವ ಕೊರೊನಾ ವೈರಸ್‌ಗೆ ಕೊನೆಗೂ ಲಸಿಕೆ ಬಂದಿದೆ. ಇಡೀ ದೇಶಾದ್ಯಂತ ಇಂದು ಜನವರಿ 16 ರಂದು ಲಸಿಕೆ ಹಾಕುವ ಅಭಿಯಾನ ಶುರುವಾಗಿದೆ. ದೇಶದ ಲಸಿಕಾ ಅಭಿಯಾನಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಚಾಲನೆ ನೀಡಿದ್ದಾರೆ. ಅದೇ ರೀತಿ ರಾಜ್ಯದಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಕೋವಿಡ್ ಲಸಿಕೆ ವಿತರಣಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

Recommended Video

      ಕೊರೊನಾ ಲಸಿಕೆಯನ್ನ ಮೊದಲು ಜನಪ್ರತಿನಿಧಿಗಳು ತೆಗೆದುಕೊಳ್ಳಬೇಕು- ಶಾಸಕಿ ಸೌಮ್ಯ ರೆಡ್ಡಿ ಅಭಿಪ್ರಾಯ |Oneindia Kannada

      ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಇಂದು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಕೋವಿಡ್-19 ತಡೆಗಟ್ಟುವ ಲಸಿಕೆಯನ್ನು ಮೊದಲ ಬಾರಿಗೆ 10 ಕೋವಿಡ್ ಯೋಧರಿಗೆ ನೀಡಿದರು.

      ಕೋವಿಡ್ ಸಂಕಷ್ಟದ ಸಂದರ್ಭದಲ್ಲಿ ಜೀವದ ಹಂಗು ತೊರೆದು ಅವಿರತವಾಗಿ ಶ್ರಮಿಸಿದ ಬೆಂಗಳೂರಿನ ನಾಗರತ್ನ ಕೆ (28 ವರ್ಷ), ಗಂಗಾಧರ್, ಡಾ. ಸುಶಾಂತ್ (35ವರ್ಷ), ಕೀರ್ತಿ (28 ವರ್ಷ), ಮಾಲಾ (30 ವರ್ಷ), ಲೋಕೇಶ್ ಜಿ (28 ವರ್ಷ), ವಿಷ್ಣುಪ್ರಿಯ (24ವರ್ಷ), ವರುಣ್ ಕುಮಾರ್ (26 ವರ್ಷ), ಡಾ. ಸಂದೇಶ್ ಕಂಡವಾಲಾ (32ವರ್ಷ), ಮನೋಜ್ ಬಿ.ಎಸ್ (23 ವರ್ಷ), ಜಯಂತಿ (32 ವರ್ಷ) ಅವರಿಗೆ ಲಸಿಕೆ ನೀಡಲಾಯಿತು.

      Yediyurappa gave the first Covid-19 vaccine to 10 Covid warriors at Victoria Hospital in Bengaluru

      ವಿಕ್ಟೋರಿಯಾ ಆಸ್ಪತ್ರೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ: ಕೆ. ಸುಧಾಕರ್ ಅವರು ಉಪಸ್ಥಿತರಿದ್ದರು. ಲಸಿಕೆ ಪಡೆದವರಿಗೆ ಹೂಗುಚ್ಛ ನೀಡಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಅಭಿನಂದಿಸಿದರು.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+