BREAKING: ಎತ್ತಿನಹೊಳೆ ಯೋಜನೆಗೆ 10 ವರ್ಷದ ನಂತರ ಲೋಕಾರ್ಪಣೆ ಭಾಗ್ಯ, ಇಂದು ಸಿಎಂ ಚಾಲನೆ

ಬೆಂಗಳೂರು, ಸೆಪ್ಟಂಬರ್ 06: ಸುಮಾರು ಏಳು ಬರಪೀಡಿತ ಜಿಲ್ಲೆಗಳಿಗೆ ಕುಡಿಯುವ ನೀರಿನ ಆಸರೆ ಒದಗಿಸಬಲ್ಲ ಬಹುಕೋಟಿ ವೆಚ್ಚದಲ್ಲಿ ನಿರ್ಮಾಗೊಳ್ಳುತ್ತಿರುವ ಸರ್ಕಾರದ ಮಹತ್ವಾಕಾಂಕ್ಷೆಯ ಎತ್ತಿನಹೊಳೆ ಯೋಜನೆಗೆ (Yattinahole Project) ಇಂದು (ಸೆಪ್ಟಂಬರ್ 06) ಶುಕ್ರವಾರ ಗೌರಿ ಹಬ್ಬದಂದು ಸಿಎಂ ಸಿದ್ದರಾಮಯ್ಯ ಅವರು ಚಾಲನೆ ನೀಡಲಿದ್ದಾರೆ. ಡಿಸಿಎಂ ಡಿಕೆ ಶಿವಕುಮಾರ್ ಸೇರಿದಂತೆ ಹಲವು ಸಚಿವರು ಇಂದಿನ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.

ಗುರುವಾರವಷ್ಟೇ ಸ್ಥಳ ಪರಶೀಲನೆಗೆ ಆಗಮಿಸಿದ್ದ ಡಿಸಿಎಂ ಡಿಕೆ ಶಿವಕುಮಾರ್ ಅವರು ಈ ಕುರಿತು ಮಾಹಿತಿ ನೀಡಿದ್ದಾರೆ. ನಾಳೆ ಎತ್ತಿನ ಹೊಳೆ ಕಾಮಗಾರಿ ಲೋಕಾರ್ಪಣೆ ಹಿನ್ನಲೆ ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದೆ. ಯೋಜನೆಯ ಮೊದಲ ಹಂತದಲ್ಲಿ ನೀರೆತ್ತು ಕಾರ್ಯಕ್ಕೆ ಚಾಲನೆ ದೊರೆಯಲಿದೆ ಎಂದರು.

Yattinahole Project of Drinking Water CM Siddaramaiah Will Inaugurate on Sept 6 Today

ಬಯಲು ಸೀಮೆ ಕೆಲವು ಜಿಲ್ಲೆಗಳಿಗೆ ಕುಡಿಯುವ ನೀರು ಒದಗಿಸುವ ಯೋಜನೆ ಇದಾಗಿದೆ. ಹಾಸನ ಜಿಲ್ಲೆಯ ಸಕಲೇಶಪುರ ತಾಲ್ಲೂಕು ಹೆಬ್ಬನಹಳ್ಳಿಯಲ್ಲಿ ಬೃಹತ್ ಕಾರ್ಯಕ್ರಮ ನಡೆಯಲಿದೆ. ಹೆಬ್ಬನಹಳ್ಳಿ ಬಳಿ ಬಾಗಿನ ಅರ್ಪಿಸಿ ವೇದಿಕೆ ಕಾರ್ಯಕ್ರಮ ಜರುಗಲಿದೆ.

2014ರಲ್ಲಿ ಯೋಜನೆ ಆರಂಭ

ಒಟ್ಟು ಸುಮಾರು 8000 ಕೋಟಿ ರೂ. ಅಂದಾಜು ವೆಚ್ಚದಲ್ಲಿ 2014ರಲ್ಲಿ ಈ ಎತ್ತಿನಹೊಳೆ ಯೋಜನೆ ಆರಂಭಿಸಲಾಗಿತ್ತು. ಬರೋಬ್ಬರಿ ಹತ್ತು ವರ್ಷಗಳ ನಂತರ ಯೋಜನೆಯಲ್ಲಿ ನೀರೆತ್ತುವ ಎಂಟು ವಿಯರ್‌ಗಳ ಪೈಕಿ ಏಳು ವೀಯರ್‌ಗಳಲ್ಲಿ ಶುಕ್ರವಾರ ನೀರೆತ್ತುವ ಕಾರ್ಯ ಆರಂಭವಾಗಲಿದೆ. ಬಾಕಿ ವೀಯರ್ ಕೆಲಸಗಳು ಶೀಘ್ರವೇ ಪೂರ್ಣಗೊಳ್ಳಲಿವೆ.

ಸಕಲೇಶಪುರ ಈ ಭಾಗದಿಂದ 260 ಕಿಲೋ ಮೀಟರ್ ದೂರದಲ್ಲಿರುವ ದೊಡ್ಡಬಳ್ಳಾಪುರವರೆಗೆ ಈ ಯೋಜನೆ ನೀರು ತುಲುಪಲಿದೆ. ಅದಕ್ಕೆ ಸಂಬಂಧಿದ ಕಾಲುವೆ ನಿರ್ಮಾಣ ಪೂರ್ಣಗೊಂಡಿದೆ. ಸಾಕಷ್ಟು ವಿವಾದಗಳಿಂದ ಸುದ್ದಿಯಾಗಿದ್ದ ಈ ಯೋಜನೆಯ ಉದ್ಘಾಗಟನೆಗೆ ಕೊನೆಗೆ ಕಾಲ ಕೂಡಿ ಬಂದಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+