ಪ್ರಪಂಚದ ಕೆಲವು ಘಟನಾವಳಿಗಳ ಚಿತ್ರಸುದ್ದಿ
ಬೆಂಗಳೂರು, ಆಗಸ್ಟ್, 22: ನಮ್ಮ ಪ್ರಪಂಚ ಬಹಳ ದೊಡ್ಡದು. ಇಲ್ಲಿ ಹಲವಾರು ಘಟನೆಗಳು ಸಂಭವಿಸುತ್ತಲೇ ಇರುತ್ತದೆ. ಇದರಲ್ಲಿ ನಮಗೆ ಕೆಲವು ಕಾಣುತ್ತವೆ, ಮತ್ತೆ ಕೆಲವು ಕಾಣುವುದೇ ಇಲ್ಲ. ಇನ್ನು ಹಲವು ಘಟನೆಗಳು ನಮಗೆ ಕಂಡರೂ ಕಾಣದಂತೆ ಸುಮ್ಮನಿರುತ್ತೇವೆ.
ಜಗತ್ತಿನಲ್ಲಿ ಸಂಭವಿಸುವ ಎಲ್ಲಾ ಘಟನೆಗಳು ನಾನಾ ಭಾವಲೋಕ ಸೃಷ್ಟಿಸಿರುತ್ತದೆ. ಸಂತಸ, ಆತಂಕ. ಕುತೂಹಲ, ನಿರಾಸೆ, ದುಃಖ ಹೀಗೆ ಒಂದಲ್ಲಾ ಒಂದು ಭಾವಗಳು ಪ್ರಪಂಚದ ವಿವಿಧ ಭಾಗದ ಜನರಲ್ಲಿ ಪುಟಿದೇಳುತ್ತದೆ.[ಬಿಬಿಎಂಪಿಗೆ ಮತದಾನ ಕಡಿಮೆಯಾಗಲು 7 ಕಾರಣಗಳು]
ಲೋಕದಲ್ಲಿ ನಡೆಯುವ ಘಟನೆಗಳು, ಮನದಲ್ಲಿ ಏಕಾಏಕಿ ಗರಿಗೆದರುವ ಭಾವಗಳಿಗೆ ಕಾಲ, ಸ್ಥಳದ ಮಿತಿ ಇರುವುದೇ ಇಲ್ಲಾ. ಹೀಗಿರುವಾಗ ಜಗತ್ತಿನಲ್ಲಿ ನಡೆದ ಕೆಲವು ಘಟನಾವಳಿಗಳು ಚಿತ್ರಲೋಕ ಇಲ್ಲಿವೆ. ಕ್ಲಿಕ್ ಮಾಡಿ ನೋಡಿ..ಪ್ರಪಂಚದಲ್ಲಿ ಏನೇನಾಯಿತು ಓದಿ ತಿಳಿದುಕೊಳ್ಳಿ.

ಹೊಗೆ ಲೋಕ ಕಟ್ಟಿದ ಕೊಟೋಪಾಕ್ಸಿ ಜ್ವಾಲಾಮುಖಿ
ಈ ಚಿತ್ರ ನಿಮಗೆ ಇಷ್ಟ ಆಯ್ತಾ, ಎಷ್ಟೊಂದು ಚಂದ ಇದೆ ಅಂತ ಅನಿಸ್ತಿದ್ದೀಯಾ. ಕಪ್ಪು ಬಿಳುಪಿನ ಚಿತ್ತಾರ ಕಂಡು ಖುಷಿ ಆಯ್ತಾ..ಇಷ್ಟೊಂದು ಖುಷಿ ಪಡಬೇಡಿ. ಯಾಕೆಂದರೆ ಇದು ಇಕ್ವಿಡಾರ್ ಬಳಿಯ ಟಿಲಿಕನ್ ಪರ್ವತದ ಬಳಿ ಎದ್ದ ಕೊಟೋಪಾಕ್ಸಿ ಎಂಬ ಬೀಕರ ಜ್ವಾಲಾಮುಖಿಯಿಂದ ಆಕಾಶವೇ ಕಾಣದಷ್ಟು ಹೊಗೆ ಎದ್ದಿದೆ. ಇದರಿಂದ ಪರ್ವತ ಬಳಿ ವಾಸಿಸುತ್ತಿರುವ ಜನರಿಗೆ ಜಾಗ ತೆರವುಗೊಳಿಸುವಂತೆ ಆದೇಶ ಹೊರಡಿಸಲಾಗಿದೆ.

ಸಂತೋಷದಿಂದ ಕೈ ಬೀಸಿದರು
ಅಮೆರಿಕಾ ಡ್ರೀಮ್ ಸಮಿತಿ ಕೊಲಂಬಸ್‌ನಲ್ಲಿ ಏರ್ಪಡಿಸಿದ್ದ Prosperity at the Greater Columbus ಎಂಬ ವಿಷಯದ ಮೇಲೆ ಮಾತನಾಡಲು ಆಗಮಿಸಿದ್ದ ಲೂಸಿಯಾನ(ಅಮೆರಿಕಾ)ದ 55 ನೇ ಗವರ್ನರ್ ಆದ ಪಿಯೂಷ್ ಬಾಬಿ ಜಿಂದಾಲ್ ಹರ್ಷದಿಂದ ನೆರೆದಿದ್ದ ಜನರ ಕಡೆ ಕೈಬೀಸಿದ ಕ್ಷಣ.

ಕನ್ನಡಿಗರ ಆಟಕ್ಕೆ ಹೆದರಿದ ತೆಲುಗು ಆಟಗಾರರು
ಮುಂಬೈನಲ್ಲಿ ನಡೆಯುತ್ತಿರುವ ಪ್ರೊ ಕಬ್ಬಡಿ ಟೂರ್ನಿ ಫೈನಲ್ ನಲ್ಲಿ ಎದುರಾಳಿ ತಂಡವಾದ ಬೆಂಗಳೂರು ಬುಲ್ಸ್ ಹಿಡಿತದಿಂದ ತಪ್ಪಿಸಿಕೊಳ್ಳಲು ಜಿಗಿದ ತೆಲುಗು ಟೈಟಾನ್ಸ್ ತಂಡದ ಆಟಗಾರ.

ಹುಡುಕಿಕೊಟ್ಟವರಿಗೆ 10 ಲಕ್ಷ
ಉಧಮ್ ಪುರ ಧಾಳಿಗೆ ಸಂಬಂಧಿಸಿದಂತೆ ಲಷ್ಕರ್ ಈ ತೈಬಾ ಎಂಬ ಭಯೋತ್ಪಾದಕನನ್ನು ಬಂಧಿಸಿರುವ ರಾಷ್ಟ್ರೀಯ ತನಿಖಾ ತಂಡವು ದಾಳಿ ಸಹಕರಿಸಿದ ಇನ್ನಿಬ್ಬರ ಹುಡುಕಾಟದಲ್ಲಿ ತೊಡಗಿದೆ. ಹುಡುಕಿ ಕೊಟ್ಟವರಿಗೆ ಅಥವಾ ಇವರ ಮಾಹಿತಿ ತಿಳಿಸಿದವರಿಗೆ 10 ಲಕ್ಷ ಬಹುಮಾನ ಘೋಷಿಸಿದೆ.

ಆದಷ್ಟು ಬೇಗ ನೀವಾದರೂ ನ್ಯಾಯ ಕೊಡಿಸಿ
ಎರಡು ತಿಂಗಳಿನಿಂದ ನೆನೆಗುದಿಗೆ ಬಿದ್ದಿರುವ ಎಫ್‌ಟಿಐಐ ನಿರ್ದೇಶಕ ಗಜೇಂದ್ರ ಚೌಹಾಣ್ ಅಮಾನತಿನ ಕುರಿತಾಗಿ ಪ್ರತಿಭಟನೆ ಕೈಗೊಳ್ಳುತ್ತಿರುವ ವಿದ್ಯಾರ್ಥಿಗಳು ಮಾಧ್ಯಮದ ಮುಂದೆ ತಮ್ಮ ಅಳಲನ್ನು ತೋಡಿಕೊಳ್ಳುತ್ತಿರುವುದು.

ಪದವಿ ಪಡೆದ ಖುಷಿಯಲ್ಲಿ ವಿದ್ಯಾರ್ಥಿಗಳು
ಹೈದರಾಬಾದಿನ ಐಐಐಟಿ ಕಾಲೇಜಿನ ಘಟಿಕೋತ್ಸವದಲ್ಲಿ ವಿದ್ಯಾರ್ಥಿಗಳು ಪದವಿ ಪಡೆದುಕೊಂಡಿದ್ದು, ತಾವು ತೊಟ್ಟ ಗೌನ್ ನ್ನು ಮೇಲಕ್ಕೆ ಎಸೆಯುವುದರ ಮೂಲಕ ಕುಣಿದು ಕುಪ್ಪಳಿಸಿ ಸಂಭ್ರಮಿಸಲು ಮುಂದಾದ ಕ್ಷಣ.

ಹುಷಾರು ತಾಯೇ, ಬಿದ್ದಿಯೇ ಜೋಕೆ.
ಅಸ್ಸಾಂ ರಾಜ್ಯದ ಜೊರ್ಹಟ್ ಜಿಲ್ಲೆಯಲ್ಲಿ ಸುರಿದ ಧಾರಾಕಾರ ಮಳೆಗೆ ಪ್ರವಾಹ ಎದುರಾಗಿದ್ದು, ಮನೆ, ಕಟ್ಟಡ, ರಸ್ತೆಗಳು ಜಲಾವೃತಗೊಂಡಿದೆ. ಇಂತಹದ್ದರಲ್ಲಿ ತಾಯಿ ಒಬ್ಬಳು ತನ್ನ ಮಗುವನ್ನು ಕಂಕುಳಲ್ಲಿ ಎತ್ತಿಕೊಂಡು ತಾನೇ ನಿರ್ಮಿಸಿದ ಬೊಂಬಿನ ಸೇತುವೆ ಮೇಲೆ ನಡೆದುಕೊಂಡು ಹೋಗುತ್ತಿರುವ ಕ್ಷಣ ಕಂಡದ್ದು ಹೀಗೆ.

ಮಗು ಹೇಗಿದ್ದೀಯಾ?
ಮಯನ್ಮಾರ್ ನ ವಿರುದ್ಧ ಪಕ್ಷ ನಾಯಕಿ ಸೂಕಿ ಚುನಾವಣಾ ಪ್ರಚಾರ ಭಾಷಣ ಮುಗಿಸಿ ವೇದಿಕೆ ಇಳಿದು ಬರುತ್ತಿರುವುದನ್ನು ಕಂಡು ಮನತುಂಬಿ ನಕ್ಕ ಮಗುವಿನೊಂದಿಗೆ ಬಹಳ ಖುಷಿಯಿಂದಲೇ ಮಾತಿಗಿಳಿದರು.

ಯುವಜನತೆಗೆ ಮಾದರಿಯಾದ ವೃದ್ದೆ
ಬೆಂಗಳೂರಿನಲ್ಲಿ ನಡೆಯುತ್ತಿರುವ ಬಿಬಿಎಂಪಿ ಚುನಾವಣೆಯಲ್ಲಿ ಮತಚಲಾಯಿಸಿ ಬಂದು ಯುವಜನತೆಯನ್ನು, ಮತಚಲಾಯಿಸದೆ ಸೋಮಾರಿತನ ತೋರಿದವರನ್ನು, ವಿಕ್ ಎಂಡ್ ಟೂರ್ ಹೊಡೆಯುತ್ತಿರುವವರನ್ನು ನಾಚಿಕೆಯಿಂದ ತಲೆತಗ್ಗಿಸುವಂತೆ ಮಾಡಿದ ವೃದ್ದೆ. ಧನ್ಯವಾದ ಅಜ್ಜಿ ನೀವಾದರೂ ಬಯಸಿದ್ದೀರಲ್ಲ, ಸ್ವಚ್ಛ ಬೆಂಗಳೂರನ್ನು.

ಇವರು ನಮ್ಮಂತೆಯೇ..ಅಲ್ಲವೇ?
ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಜವಾಹರ ಭವನದಲ್ಲಿ ವಿಶೇಷ ವಿಕಲ ಚೇತನ ಮಕ್ಕಳಿಗೆ ಸ್ಕೂಟರ್ ವಿತರಿಸಿ ಅವರು ಸರಾಗವಾಗಿ ಚಲಿಸಿ ಅನುವು ಮಾಡಿಕೊಟ್ಟರು. ಆಗ ರಾಹುಲ್ ಗಾಂಧಿ ಆ ಬಾಲಕನನ್ನು ತಬ್ಬಿಕೊಂಡು ಇವರು ನಮ್ಮಂತೆಯೇ ಎಂಬ ಭಾವ ತೋರಿದ್ದಾರೆ.
-
ಬೆಂಗಳೂರಿನ ಪ್ರಮುಖ ವಿದ್ಯುತ್ ಸ್ಥಾವರ ಬಂದ್; ರಾಜ್ಯದಲ್ಲಿ ವಿದ್ಯುತ್ ಕಡಿತದ ಭೀತಿ! -
Horoscope March 13: ಈ ರಾಶಿಯವರ ಬದುಕಲ್ಲಿ ಸಕಾರಾತ್ಮಕ ಬೆಳವಣಿಗೆ, ಅಧಿಕ ಲಾಭ; ದಿನ ಭವಿಷ್ಯ -
Gold: ಲಕ್ಕುಂಡಿಯಲ್ಲಿ ಸಿಕ್ಕ ಬಂಗಾರದ ನಿಧಿ ಮೌಲ್ಯ 8 ಕೋಟಿ ರೂ.; ನಿಧಿ ಕೊಟ್ಟ ಕುಟುಂಬದಿಂದ ಹೊಸ ಡಿಮ್ಯಾಂಡ್, ಉತ್ಖನನ ಅಂತ್ಯ -
Karnataka Weather Mar 12: ಬಿಸಿಲು ಹೆಚ್ಚಳದ ನಡುವೆ ಮಾರ್ಚ್ 15ರಿಂದ ಕರ್ನಾಟಕದಲ್ಲಿ ಮಳೆ, ಹೇಗಿದೆ ಇಂದಿನ ವೆದರ್ -
Gold Rate March 12: ಚಿನ್ನದ ಬೆಲೆ 10,900 ರೂ., ಬೆಳ್ಳಿ ಬೆಲೆ 10,000 ರೂ. ಭರ್ಜರಿ ಇಳಿಕೆ, ಬಂಗಾರ ಪ್ರಿಯರು ಫಿದಾ -
ನಮ್ಮದು ಲವ್ ಜಿಹಾದ್ ಅಲ್ಲ, ಮತಾಂತರವೂ ಇಲ್ಲ, ಹಿಂದೂ ಸಂಪ್ರದಾಯದಂತೆ ವಿವಾಹ: ಮೊನಾಲಿಸಾ-ಫರ್ಹಾನ್ ಖಾನ್ ಸ್ಪಷ್ಟನೆ -
Horoscope March 12: ಗುರುವಾರ ದ್ವಾದಶ ರಾಶಿಗಳ ಫಲಾಫಲ ಹೇಗಿದೆ, ಇಲ್ಲಿದೆ ದಿನ ಭವಿಷ್ಯ -
Bengaluru Property Sale: ಬೆಂಗಳೂರಲ್ಲಿ 50 ಆಸ್ತಿದಾರರಿಗೆ ತಮ್ಮ ಆಸ್ತಿಯನ್ನೇ ಕಳೆದುಕೊಳ್ಳುವ ಆತಂಕ: ಜಿಬಿಎ ಹೇಳಿದ್ದೇನು -
ಪಿಎಂ ಇ-ಬಸ್ ಯೋಜನೆ: ಕರ್ನಾಟಕದಲ್ಲಿ ರಸ್ತೆಗಿಳಿಯಲಿವೆ 750 ಇ-ಬಸ್ಗಳು; ಮಹಾರಾಷ್ಟ್ರಕ್ಕೆ ಸಿಂಹಪಾಲು -
Bengaluru Drone Survey: ಬೆಂಗಳೂರಿನಲ್ಲಿ ಆಸ್ತಿಗಳ ಡ್ರೋನ್ ಸರ್ವೇ: ಇದರ ಉದ್ದೇಶವೇನು, ವಿರೋಧವೇಕೆ ಇಲ್ಲಿದೆ ಮಾಹಿತಿ -
ಇರಾನ್ ಸಂಘರ್ಷ: ಭಾರತದ ಪ್ರಯತ್ನಕ್ಕೆ ಫಲ, ಕೊಲ್ಲಿ ಮಾರ್ಗವಾಗಿ ಭಾರತಕ್ಕೆ ಬಂದ ಮೊದಲ ತೈಲ ಟ್ಯಾಂಕರ್ -
ಒಣ ಮೆಣಸಿನಕಾಯಿ ಬಳಸುವ ಮುನ್ನ ಈ ಕೆಲಸ ಮಾಡಿದ್ದೀರಾ? ಆರೋಗ್ಯ ಕಾಪಾಡಲು ಇಲ್ಲಿದೆ ಸೂಪರ್ ಐಡಿಯಾ












Click it and Unblock the Notifications