ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

World Hepatitis Day 2022 : ವಿಶ್ವ ಹೆಪಟೈಟಿಸ್ ದಿನ: 'ಹೆಪಟೈಟಿಸ್' ಬಗ್ಗೆ ಇರಲಿ ಜಾಗೃತಿ

|
Google Oneindia Kannada News

ಬೆಂಗಳೂರು ಜುಲೈ 28: ವಿಶ್ವ ಆರೋಗ್ಯ ಸಂಸ್ಥೆ ಹೆಪಟೈಟಿಸ್ ವೈರಸ್ ಕಂಡು ಹಿಡಿದ ಮತ್ತು ಹೆಪಟೈಟಿಸ್ ರೋಗಕ್ಕೆ ಲಸಿಕೆ ಕಂಡು ಹಿಡಿದ ಪ್ರೊ. ಬರೊಚ ಸ್ಯಾಮುಲಯ್ ಬ್ಲೂಮ್‌ಬರ್ಗ ಅವರ ಜನ್ಮದಿನವಾದ ಜುಲೈ 28ಅನ್ನು 'ವಿಶ್ವ ಹೆಪಟೈಟಿಸ್ ದಿನ' ಆಚರಣೆಯಾಗಿ ಘೋಷಿಸಿದೆ. ಹೀಗಾಗಿ ಈ ದಿನ ಎಲ್ಲೆಡೆ ಈ ದಿನವನ್ನು ಆಚರಿಸಲಾಗುತ್ತಿದೆ.

ಹೆಪಟೈಟಿಸ್‌ನಲ್ಲಿ ಕೆಲವು ವರ್ಗಗಳಿವೆ. ಈ ಹೆಪಟೈಟಿಸ್ ಯಕೃತ್ತಿನ ಉರಿಯೂತವನ್ನು ಸೂಚಿಸುತ್ತದೆ. ಅನಾರೋಗ್ಯ ಸಮಸ್ಯೆ ಉಂಟು ಮಾಡುವ ಈ 'ಹೆಪಟೈಟಿಸ್' ಕಾಯಿಲೆ ಕುರಿತು, ಯಾವ ಕಾರಣಕ್ಕೆ ಹೆಪಟೈಟಿಸ್ ಬರುತ್ತದೆ, ಈ ಕಾಯಿಲೆ ಲಕ್ಷಣಗಳು, ಅದರ ಪರಿಹಾರಕ್ಕೆ ಇರುವ ಚಿಕಿತ್ಸೆಗಳ ಸೇರಿದಂತೆ ಹಲವು ಅಂಶಗಳ ಕುರಿತು ಇಲ್ಲಿ ತಿಳಿದುಕೊಳ್ಳೋಣ.

ಮಂಕಿಪಾಕ್ಸ್: ಲಸಿಕೆ ಅಭಿವೃದ್ಧಿಪಡಿಸಲು ಟೆಂಡರ್ ಆಹ್ವಾನಿಸಿ ಕೇಂದ್ರ ಸರ್ಕಾರಮಂಕಿಪಾಕ್ಸ್: ಲಸಿಕೆ ಅಭಿವೃದ್ಧಿಪಡಿಸಲು ಟೆಂಡರ್ ಆಹ್ವಾನಿಸಿ ಕೇಂದ್ರ ಸರ್ಕಾರ

ಯಕೃತ್ತಿನ ಉರಿಯೂತ ಸೂಚಿಸುವ ಹೆಪಟೈಟಿಸ್ ಇದು ಸಾಮಾನ್ಯವಾಗಿ ಹೆಪಟೋಟ್ರೋಪಿಕ್ (ಯಕೃತ್ತಿನ ನಿರ್ದಿಷ್ಟ) ವೈರಸ್‌ಗಳಾದ ಹೆಪಟೈಟಿಸ್-ಎ (ಎಚ್‌ಎವಿ), ಹೆಪಟೈಟಿಸ್-ಬಿ (ಎಚ್‌ಬಿವಿ), ಹೆಪಟೈಟಿಸ್-ಸಿ (ಎಚ್‌ಸಿವಿ), ಹೆಪಟೈಟಿಸ್- ಡಿ ಹಾಗೂ ಹೆಪಟೈಟಿಸ್-ಇ (ಎಚ್‌ಇವಿ) ಯಿಂದ ಉಂಟಾಗುತ್ತದೆ. ಈ ವೈರಸ್ ಸೋಂಕುಗಳ ಹೊರತಾಗಿ, ಹೆಪಟೈಟಿಸ್‌ನ ಇತರ ಕಾರಣಗಳಲ್ಲಿ ಮದ್ಯಸಾರ, ಔಷಧಿಗಳು, ಸ್ವಯಂ ನಿರೋಧಕ ಶಕ್ತಿ ಮತ್ತು ಪಿತ್ತಜನಕಾಂಗದ ಕೊಬ್ಬಿನ ಕಾಯಿಲೆಗಳು ಒಳಗೊಂಡಿವೆ.

ದೀರ್ಘಾವಧಿಯಲ್ಲಿ ಯಕೃತ್ತಿನಲ್ಲಿನ ಉರಿಯೂತವು ಫೈಬ್ರೋಸಿಸ್, ಸಿರೋಸಿಸ್ ಮತ್ತು ವಿರಳವಾಗಿ ಯಕೃತ್ತಿನ ಕ್ಯಾನ್ಸರ್‌ನಂತಹ ಗಂಭೀರ ಕಾಯಿಲೆಗಳಿಗೆ ಕಾರಣವಾಗಬಹುದು. ಭಾರತದಲ್ಲಿ, 100 ರಲ್ಲಿ 2 ರಿಂದ 4 ಪ್ರಕರಣಗಳು ಹೆಪಟೈಟಿಸ್ ಬಿ ರೋಗ ಇರುವುದು ಕಂಡು ಬರುತ್ತದೆ. ಆದರೆ ಕೇವಲ ಶೇ. 0.5-1 ಹೆಪಟೈಟಿಸ್-ಸಿ ಪ್ರಕರಣಗಳು ದಾಖಲಾಗಿವೆ. ಹೆಪಟೈಟಿಸ್‌ನಲ್ಲಿ ಹೆಚ್ಚಾಗಿ ಭಾದಿಸುವುದೆಂರೆ ಹೆಪಟೈಟಿಸ್ -ಬಿ ಮತ್ತು ಸಿ. ಕೆಲವರಿಗೆ ಈ ಎರಡರ ಮದ್ಯೆ ವ್ಯತ್ಯಾಸ ಹಾಗೂ ಪರಿಣಾಮಗಳ ಬಗ್ಗೆ ಜಾಗೃತಿ ಇರುವುದರಿಲ್ಲ. ಈ ಬಗ್ಗೆ 'ವಿಶ್ವ ಹೆಪಟೈಟಿಸ್ ದಿನ' ಆಚರಿಸಿದ ಬೆಂಗಳೂರಿನ ಫೋರ್ಟಿಸ್ ಆಸ್ಪತ್ರೆ ವೈದ್ಯರು ಹಾಗೂ ನಿರ್ದೇಶಕರಾದ ಡಾ.ಬಿ.ಎಸ್.ರವೀಂದ್ರ ಅವರು ವಿವರಿಸಿದ್ದಾರೆ.

ಹೆಪಟೈಟಿಸ್ ಬಿ & ಸಿ ದೀರ್ಘಕಾಲದ ಕಾಯಿಲೆಯೇ?

ಹೆಪಟೈಟಿಸ್ ಬಿ & ಸಿ ದೀರ್ಘಕಾಲದ ಕಾಯಿಲೆಯೇ?

ಹೆಪಟೈಟಿಸ್ ಬಿ ಮತ್ತು ಸಿ ಸೋಂಕು ದೀರ್ಘಾವಧಿಯ ಪರಿಣಾಮ ಉಂಟುಮಾಡುವ ಸಾಧ್ಯತೆ ಇದೆ. ಆದರೆ, ಹೆಪಟೈಟಿಸ್‌ ಸಿ, ಹೆಪಟೈಟಿಸ್ ಬಿ ಗಿಂತ ಹೆಚ್ಚು ಅಪಾಯವನ್ನು ತಂದೊಡ್ಡುವ ಸಾಧ್ಯತೆ ಇದೆ. ಯಕೃತ್ತಿನ ಹಾನಿ, ಸಿರೋಸಿಸ್ ಮತ್ತು ಯಕೃತ್ತಿನ ಕ್ಯಾನ್ಸರ್‌ಗೆ ಕಾರಣವಾಗುವ ಸಾಧ್ಯತೆ ಇದೆ. ಇನ್ನು ಹೆಪಟೈಟಿಸ್‌ ಬಿ ಇದ್ದರೂ ಸಹ ದೀರ್ಘಕಾಲದ ಯಕೃತ್ತಿನ ಕಾಯಿಲೆಗೆ ಒಳಗಾಗುವ ಸಾಧ್ಯತೆಯನ್ನು ಅಲ್ಲಗೆಳೆಯುವಂತಿಲ್ಲ. ಶೇ.15 ರಿಂದ 25 ರಷ್ಟು ಜನರಲ್ಲಿ ಹೆಪಟೈಟಿಸ್‌ ತೀವ್ರತೆ ಕಂಡು ಬರಲಿದೆ. ಮತ್ತೊಂದು ಆಘಾತಕಾರಿ ಅಂಶವೆಂದರೆ, ಒಬ್ಬ ವ್ಯಕ್ತಿ ಒಂದೇ ಬಾರಿಗೆ ಹೆಪಟೈಟಿಸ್‌ ಬಿ ಮತ್ತು ಸಿ ಎರಡನ್ನೂ ಹೊಂದಿರಬಹುದು. ಈ ರೀತಿಯ ಪ್ರಕರಣ ಅತಿ ವಿರಳವಾದರೂ, ಇಂಥ ರೋಗಿಗಳಿಗೆ ಹೆಚ್ಚಿನ ಚಿಕಿತ್ಸೆ ಅಗತ್ಯವಿರುತ್ತದೆ.

ಹೆಪಟೈಟಿಸ್‌ಗೆ ಕಾರಣವೇನು?

ಹೆಪಟೈಟಿಸ್‌ಗೆ ಕಾರಣವೇನು?

ಹೆಪಟೈಟಿಸ್‌ ಹರಡುವಿಕೆಯ ಬಗ್ಗೆ ಪ್ರತಿಯೊಬ್ಬರು ಎಚ್ಚರವಹಿಸಬೇಕು. ಒಬ್ಬರು ಬಳಸಿದ ಸೂಜಿ ಮರುಬಳಕೆ ಮಾಡುವುದರಿಂದ, ಟ್ಯಾಟು ಹಾಕಿಸಲು ಬಳಸುವ ಸೂಜಿ ಮರುಬಳಕೆಯಿಂದ, ಅಸುರಕ್ಷಿತ ಲೈಂಗಿಕ ಇತಿಹಾಸ ಹೊಂದಿದ್ದರೆ ಹೆಪಟೈಟಿಸ್‌ ಹರಡುವ ಸಾಧ್ಯತೆ ಹೆಚ್ಚು. ಹೀಗಾಗಿ ಇಂಥ ವಿಷಯದಲ್ಲಿ ಹೆಚ್ಚು ಜಾಗರೂಕತೆಯಿಂದ ಇರುವುದು ಒಳಿತು.

ಹೆಪಟೈಟಿಸ್ ಬಿ & ಸಿ ಲಕ್ಷಣಗಳು ಇವು

ಹೆಪಟೈಟಿಸ್ ಬಿ & ಸಿ ಲಕ್ಷಣಗಳು ಇವು

ಗಾಢ ಹಳದಿ ಮೂತ್ರ, ಆಯಾಸ, ಶೀತ, ಕೀಲು ನೋವು, ವಾಕರಿಕೆ, ತೆಳು ಅಥವಾ ಗಾಢವಾದ ಮಲ, ವಾಕರಿಕೆ, ಚರ್ಮ ಅಥವಾ ಕಣ್ಣುಗಳ ಹಳದಿ (ಕಾಮಾಲೆ), ಮತ್ತು ನಿರ್ಜಲೀಕರಣವು ಸಂಭವಿಸಬಹುದಾದ ಕೆಲವು ರೋಗಲಕ್ಷಣಗಳು. ಹೆಪಟೈಟಿಸ್ ಬಿ ಹೊಂದಿರುವ ಕೆಲವು ಮಕ್ಕಳು ರೋಗದ ಯಾವುದೇ ಲಕ್ಷಣಗಳನ್ನು ತೋರಿಸುವುದಿಲ್ಲ.

ಹೆಪಟೈಟಿಸ್ ಬಿ ಮತ್ತು ಸಿಗೆ ಲಭ್ಯವಿರುವ ಚಿಕಿತ್ಸೆಗಳು:

ಹೆಪಟೈಟಿಸ್ ಬಿ ಮತ್ತು ಸಿಗೆ ಲಭ್ಯವಿರುವ ಚಿಕಿತ್ಸೆಗಳು:

ಇತ್ತೀಚಿನ ದಿನಗಳಲ್ಲಿ ವೈದ್ಯಕೀಯ ಲೋಕ ಸಾಕಷ್ಟು ಕಾಯಿಲೆಗೆ ತನ್ನದೇ ಚಿಕಿತ್ಸಾ ಕ್ರಮವನ್ನು ಕಂಡು ಹಿಡಿಯುವುದರಲ್ಲಿ ಮುಂದಿದೆ. ಅದರಲ್ಲಿ ಹೆಪಟೈಟಿಸ್‌ ಬಿ ಸಹ ಒಂದು. ಹೆಪಟೈಟಿಸ್‌ ಬಿಗೆ ವೈದ್ಯ ಲೋಕದಲ್ಲಿ ಉತ್ತಮವಾದ ಚಿಕಿತ್ಸೆ ಲಭ್ಯವಿದ್ದು, ಕಡಿಮೆ ವೆಚ್ಚದಲ್ಲಿಯೇ ಚಿಕಿತ್ಸೆ ಪಡೆದುಕೊಂಡು ಸುಧಾರಿಸಿಕೊಳ್ಳಬಹುದು. ಆದರೆ, ಈ ಚಿಕಿತ್ಸೆಗಳು ದೀರ್ಘಕಾಲಿಕವಾಗಿದ್ದು, ರೋಗಿಗಳು ಇದಕ್ಕೆ ಸ್ಪಂದಿಸಬೇಕು.

ಫೋರ್ಟಿಸ್ ನಿರ್ದೇಶಕ ಡಾ.ಬಿ.ಎಸ್.ರವೀಂದ್ರ ಸಲಹೆಗಳೇನು?

ಫೋರ್ಟಿಸ್ ನಿರ್ದೇಶಕ ಡಾ.ಬಿ.ಎಸ್.ರವೀಂದ್ರ ಸಲಹೆಗಳೇನು?

ಈ ಕುರಿತು ಮಾತನಾಡಿರುವ ನಗರದ ಫೋರ್ಟಿಸ್ ನಿರ್ದೇಶಕ ಡಾ.ಬಿ.ಎಸ್.ರವೀಂದ್ರ ಅವರು, ಹೆಪಟೈಟಿಸ್ ಬಿಗೆ ಈಗಾಗಲೇ ಲಸಿಕೆ ಲಭ್ಯವಿದ್ದು, ಮಕ್ಕಳಿಗೆ ಕೊಡಲಾಗುತ್ತದೆ. ಇದು ಭವಿಷ್ಯದಲ್ಲಿ ಬರಬಹುದಾದ ಹೆಪಟೈಟಿಸ್‌ ಬಿ ರೋಗ ನಿಯಂತ್ರಿಸಲು ನೆರವಾಗುತ್ತದೆ. ಆದರೆ, ಹೆಪಟೈಟಿಸ್-ಸಿಗೆ ಇದುವರೆಗೂ ಯಾವುದೇ ಲಸಿಕೆ ಕಂಡು ಹಿಡಿಯಲು ಸಾಧ್ಯವಾಗಿಲ್ಲ. ಆದರೆ, ಕೆಲವು ಮುನ್ನೆಚ್ಚರಿಕೆ ಕ್ರಮಗಳಿಂದ ಈ ಕಾಯಿಲೆಯಿಂದ ದೂರ ಇರಬಹುದು, ಅಸುರಕ್ಷಿತ ಲೈಂಗಿಕ ಕ್ರಿಯೆ, ಒಬ್ಬರು ಬಳಸಿದ ಸೂಜಿಗಳ ಮರುಬಳಕೆಯನ್ನು ತಡೆಯುವುದರಿಂದ ಹೆಪಟೈಟಿಸ್‌ ಸಿ ಬರುವುದನ್ನು ತಡೆಯಬಹುದು.

ಇನ್ನು ನಮ್ಮ ದೈನಂದಿನ ಜೀವನ ಶೈಲಿ, ಸೇವಿಸುವ ಆಹಾರದಲ್ಲಿ ಸ್ವಚ್ಛತೆ ಕಾಪಾಡಿಕೊಳ್ಳುವುದು ಸಹ ಹೆಪಟೈಟಿಸ್‌ನಿಂದ ದೂರ ಇರಲು ಸಹಕಾರಿಯಾಗುತ್ತದೆ. ಹೆಪಟೈಟಿಸ್‌ ಇತಿಹಾಸ ಹೊಂದಿರುವವರು ಧೂಮಪಾನ ಹಾಗೂ ಮಧ್ಯಪಾನದಿಂದ ದೂರ ಇರುವುದು ಯಕೃತ ಆರೋಗ್ಯಕ್ಕೆ ಒಳ್ಳೆಯದು ಎಂದು ಅವರು ಸಲಹೆ ನೀಡಿದ್ದಾರೆ.

Recommended Video

ಜಿಮ್ ನಲ್ಲಿ ಸರ್ಕಸ್ ಮಾಡೋಕೆ ಹೋಗಿ ಗಾಯ ಮಾಡ್ಕೊಂಡ ಜಾನಿ | Oneindia Kannada

English summary
The 'World Hepatitis Day'. Doctor statement about Hepatitis symptoms, causes and Hepatitis treatment and suggestion for people. Know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X